ETV Bharat / bharat

ಅಯೋಧ್ಯೆ ದೇಗುಲದ ಗರ್ಭಗುಡಿಯಲ್ಲಿ ಬಾಲ ಶ್ರೀರಾಮ - ಪ್ರಾಣ ಪ್ರತಿಷ್ಠಾಪನೆ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಮಂಗಳವಾರದಿಂದ (ಜ.16) ಆರು ದಿನಗಳವರೆಗಿನ ಧಾರ್ಮಿಕ ಆಚರಣೆಗಳಿಗೆ ಚಾಲನೆ ದೊರೆತಿದೆ. ಇಂದು ಭಗವಾನ್ ಶ್ರೀರಾಮನಿಗೆ ಕೇಸರದಿವಸ್ ಮತ್ತು ಘೃತದಿವಸ್ ಮುಂತಾದ ಕೈಂಕರ್ಯಗಳು ನೆರವೇರಲಿವೆ.

Ayodhya temple  Lord Ram  ರಾಮಲಲ್ಲಾ ವಿಗ್ರಹ  ಪ್ರಾಣ ಪ್ರತಿಷ್ಠಾಪನೆ  ಅಯೋಧ್ಯೆಯ ರಾಮಮಂದಿರ
ಅಯೋಧ್ಯೆ ದೇಗುಲದ ಗರ್ಭಗುಡಿಯೊಳಗೆ ರಾಮಲಲ್ಲಾ ವಿಗ್ರಹ: ಜನವರಿ 22ಕ್ಕೆ ಪ್ರಾಣ ಪ್ರತಿಷ್ಠಾಪನೆ
author img

By ANI

Published : Jan 19, 2024, 8:56 AM IST

Updated : Jan 19, 2024, 9:18 AM IST

ಅಯೋಧ್ಯೆ(ಉತ್ತರ ಪ್ರದೇಶ): ಜನವರಿ 22ರಂದು ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಇದಕ್ಕೂ ಮುನ್ನ, ಗುರುವಾರ ದೇವಾಲಯದ ಗರ್ಭಗುಡಿಯಲ್ಲಿ ಬಾಲ ಶ್ರೀರಾಮನ ವಿಗ್ರಹ ತಂದು ನಿಲ್ಲಿಸಲಾಯಿತು. ಗರ್ಭಗುಡಿಯಲ್ಲಿ ಮುಸುಕಿನಿಂದ ಮುಚ್ಚಲ್ಪಟ್ಟ ವಿಗ್ರಹದ ಮೊದಲ ಫೋಟೋ ಇದಾಗಿದೆ. ವಿಶ್ವ ಹಿಂದೂ ಪರಿಷತ್ತಿನ ಮಾಧ್ಯಮ ಉಸ್ತುವಾರಿ ಶರದ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.

ರಾಮಲಲ್ಲಾ ವಿಗ್ರಹವನ್ನು ಕರ್ನಾಟಕದ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಈ ವಿಗ್ರಹ 51 ಇಂಚು ಎತ್ತರ ಮತ್ತು ಅಂದಾಜು 1.5 ಟನ್ ತೂಕವಿದೆ. ಕಮಲದ ಮೇಲೆ ಐದು ವರ್ಷದ ಮಗು ನಿಂತಿರುವಂತೆ ಕಲ್ಲಿನಲ್ಲಿ ಆಕರ್ಷಕವಾಗಿ ಕೆತ್ತಲಾಗಿದೆ.

Ayodhya temple  Lord Ram  ರಾಮಲಲ್ಲಾ ವಿಗ್ರಹ  ಪ್ರಾಣ ಪ್ರತಿಷ್ಠಾಪನೆ  ಅಯೋಧ್ಯೆಯ ರಾಮಮಂದಿರ
ಅಯೋಧ್ಯೆ ರಾಮಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳು

ಇನ್ನೊಂದೆಡೆ, ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಸಿದ್ಧತೆಗಾಗಿ ಅಯೋಧ್ಯೆ ನಗರವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಾಣ ಪ್ರತಿಷ್ಠೆಯ ವಿಧಿ-ವಿಧಾನಗಳನ್ನು ನೆರವೇರಿಸಲಿದ್ದಾರೆ. ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡವು ಪ್ರಮುಖ ಧಾರ್ಮಿಕ ಕ್ರಿಯೆಗಳನ್ನು ನಡೆಸಲಿದ್ದಾರೆ.

ಪ್ರಾಣ ಪ್ರತಿಷ್ಠಾಪನಾ ಕಾರ್ಯವು ಮಂಗಳಕರ, ಪೌಶ್ ಶುಕ್ಲ ಕೂರ್ಮ ದ್ವಾದಶಿ, ವಿಕ್ರಮ ಸಂವತ್ 2080 ಅಂದರೆ ಸೋಮವಾರ ಜರುಗಲಿದೆ. ಈ ನಿಟ್ಟಿನಲ್ಲಿ ಕಳೆದ ಮಂಗಳವಾರದಿಂದಲೇ ಆರು ದಿನಗಳ ವಿವಿಧ ಧಾರ್ಮಿಕ ಆಚರಣೆಗೆ ಚಾಲನೆ ನೀಡಲಾಗಿದೆ. ಆಚರಣೆಯ ನಾಲ್ಕನೇ ದಿನವಾದ ಇಂದು ಭಗವಾನ್ ಶ್ರೀರಾಮನಿಗೆ ಕೇಸರದಿವಸ್ ಮತ್ತು ಘೃತದಿವಸ್ ಆಚರಣೆಗಳು ನೆರವೇರಲಿವೆ. ಇದಾದ ಬಳಿಕ ಸಂಜೆ ಧಾನ್ಯದಿವಸ್ ನಡೆಯಲಿದೆ.

ಮಂಗಳವಾರ ವಿವೇಕ ಸೃಷ್ಟಿ ಸಂಕೀರ್ಣದಲ್ಲಿ ಪ್ರಾಯಶ್ಚಿತ್ತ ಹಾಗೂ ಕರ್ಮಕುಟಿ ಪೂಜೆ ನಡೆಯಿತು. ಇದಾದ ನಂತರ ಬುಧವಾರ ರಾಮಭಕ್ತರ ಸಮ್ಮುಖದಲ್ಲಿ ವಿಗ್ರಹವನ್ನು ಆವರಣದಲ್ಲಿ ಮೆರವಣಿಗೆ ನಡೆಸಲಾಗಿತ್ತು. ಇದರೊಂದಿಗೆ ಬಾಲ ರಾಮ ಮೂರ್ತಿಯನ್ನು ದೇವಸ್ಥಾನದೊಳಗೆ ತರಲಾಯಿತು. ಈ ಅನುಕ್ರಮದಲ್ಲಿ ಇಂದು (ಜನವರಿ 19) ಬೆಳಿಗ್ಗೆ ಔಷದಿವಸ್, ಕೇಸರದಿವಸ್, ಘೃತದಿವಸ್‌ ಆಚರಣೆಗಳು ಜರುಗಲಿವೆ. ಸಂಜೆ ಧಾನ್ಯದಿವಸ್ ಕಾರ್ಯಕ್ರಮವಿದೆ.

ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಪೂರ್ವ ಕಾರ್ಯಕ್ರಮಗಳು

ವಾರಣಾಸಿಯ ವೈದಿಕ ಪಂಡಿತರಿಂದ ಎಲ್ಲಾ ವಿಧಿವಿಧಾನಗಳು ನಡೆಯುತ್ತಿವೆ. ಈ ಸರಣಿಯಲ್ಲಿ ಜನವರಿ 20ರಂದು ಸಂಜೆ ಪುಷ್ಪದಿವಸ್ ನಡೆಯಲಿದೆ. ಜನವರಿ 21ರಂದು ಬೆಳಿಗ್ಗೆ ಶಯ್ಯಾದಿವಸ್ ಹಾಗೂ ಸಂಜೆ ಮಧ್ಯದಿವಸ್ ನೆರವೇರಲಿದೆ. ಇದರ ನಂತರ ಪ್ರಾಣ ಪ್ರತಿಷ್ಠಾಪನೆಯ ಮುಖ್ಯ ವಿಧಿವಿಧಾನಗಳು ನಡೆಯಲಿವೆ. ಪ್ರಧಾನಿ ಮೋದಿ ಶ್ರೀರಾಮ ಮೂರ್ತಿಗೆ ಹಾಕಲಾಗಿರುವ ಹೊದಿಕೆ ತೆಗೆದು ದರ್ಶನ ಪಡೆಯಲಿದ್ದಾರೆ.

ವಿಶೇಷ ಅತಿಥಿಗಳು: ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೊದಲಾದವರು ಉಪಸ್ಥಿತರಿರುವರು.

ಶ್ರೀರಾಮ ಮಂದಿರಕ್ಕೆ ವಿಶೇಷ ವಿದ್ಯುತ್​ ದೀಪಾಲಂಕಾರ

ವಿವಿಧ ಸಂಸ್ಥೆಗಳ ಪ್ರಮುಖರು: ಭಾರತೀಯ ಆಧ್ಯಾತ್ಮಿಕತೆ, ಧರ್ಮ, ಪಂಥಗಳು ಸೇರಿದಂತೆ 150ಕ್ಕೂ ಹೆಚ್ಚು ಸಂಪ್ರದಾಯಗಳ ಸಂತರು, ಮಹಾಮಂಡಲೇಶ್ವರ, ಮಂಡಲೇಶ್ವರ, ಶ್ರೀಮಹಾಂತ್, ಮಹಂತ್, ನಾಗಾ ಸೇರಿದಂತೆ 50ಕ್ಕೂ ಹೆಚ್ಚು ಬುಡಕಟ್ಟು, ಗಿರಿವಾಸಿ, ತತ್ವಸಿ, ಬುಡಕಟ್ಟು ಸಂಪ್ರದಾಯಗಳ ದ್ವೀಪವಾಸಿಗಳ ಎಲ್ಲಾ ಶಾಲೆಗಳ ಆಚಾರ್ಯರು ಹಾಗೂ ವಿವಿಧ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀಗಳು ಪಾಲ್ಗೊಳ್ಳುತ್ತಿಲ್ಲ: ಮಠದಿಂದ ಮಾಹಿತಿ

Last Updated : Jan 19, 2024, 9:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.