ನವದೆಹಲಿ: CISCE 10 ನೇ ತರಗತಿ ಮತ್ತು 12 ನೇ ತರಗತಿ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ವರ್ಷ 10 ನೇ ತರಗತಿ ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಒಂದೇ ದಿನ ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ಫಲಿತಾಂಶ ನೋಡುವುದು ಹೇಗೆ?
CISCE ICSE, ISC 2021 ಫಲಿತಾಂಶವು ಕೌನ್ಸಿಲ್‌ನ ಆಫೀಶಯಲ್ ವೆಬ್‌ಸೈಟ್ ಮತ್ತು ಎಸ್‌ಎಂಎಸ್ ಮೂಲಕ ಲಭ್ಯವಾಗಿದೆ.
ಫಲಿತಾಂಶವನ್ನು ಪರಿಶೀಲಿಸಲು, www.cisce.org ಅಥವಾ www.results.cisce.org ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲದೇ ಶಾಲೆಗಳ ಪ್ರಿನ್ಸಿಪಾಲರು ತಮ್ಮ ಲಾಗಿನ್ ಐಡಿ ಬಳಸಿ ಕೌನ್ಸಿಲ್‌ನ ವೆಬ್‌ನಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಪಡೆಯಬಹುದು.
ICSE ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಎಸ್‌ಎಂಎಸ್ ಮೂಲಕ ಪಡೆಯಲು ICSE ಸ್ಪೇಸ್ ಕೊಟ್ಟು 7 ಸಂಖ್ಯೆಯ ಯುನಿಕ್ಯೂ ಐಡಿಯನ್ನು ಟೈಪ್ ಮಾಡಿ ಮತ್ತು ISC ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಎಸ್‌ಎಂಎಸ್ ಮೂಲಕ ಪಡೆಯಲು ISC ಸ್ಪೇಸ್ ಕೊಟ್ಟು 7 ಸಂಖ್ಯೆಯ ಯುನಿಕ್ಯೂ ಐಡಿಯನ್ನು ಟೈಪ್ ಮಾಡಿ 09248082883 ಗೆ ಕಳುಹಿಸಬಹುದು.