ETV Bharat / bharat

RT-qPCR ಕಿಟ್​ಗೆ ICMR ಅನುಮೋದನೆ: ಇನ್​ಫ್ಲುಯೆಂಜಾ, SARS-CoV-2, RSV ಪತ್ತೆಗೆ ಅನುಕೂಲ

ಚೆನ್ನೈ ಮೂಲದ ಕಂಪನಿ ಕ್ರಿಯಾ ಮೆಡಿಕಲ್ ಟೆಕ್ನಾಲಜೀಸ್ ತಯಾರಿಸಿರುವ ಆರ್‌ಟಿ ಕ್ಯೂಪಿಸಿಆರ್ ಟೆಸ್ಟ್​ ಕಿಟ್​ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅನುಮೋದನೆ ನೀಡಿದೆ.

ICMR approves new RT-qPCR kit
ICMR approves new RT-qPCR kit
author img

By

Published : Mar 16, 2023, 5:23 PM IST

ಚೆನ್ನೈ : ಚೆನ್ನೈ ಮೂಲದ ಕ್ರಿಯಾ ಮೆಡಿಕಲ್ ಟೆಕ್ನಾಲಜೀಸ್ ಕಂಪನಿ ತಯಾರಿಸಿರುವ ಹೊಸ ಆರ್‌ಟಿ-ಕ್ಯೂಪಿಸಿಆರ್ (RT-qPCR kit) ಪರೀಕ್ಷಾ ಕಿಟ್ ಅನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಗುರುವಾರ ಅನುಮೋದಿಸಿದೆ. ಈ ಕಿಟ್ ಇನ್​ಫ್ಲುಯೆಂಜಾ (ಎಚ್1ಎನ್1, ಎಚ್3ಎನ್2, Yamagata and Victoria sublineages), ಕೋವಿಡ್- 19 ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಗಳನ್ನು ಪತ್ತೆ ಮಾಡಬಲ್ಲದು. ದೇಶದ ಅನೇಕ ರಾಜ್ಯಗಳಲ್ಲಿ ಈ ವೈರಸ್​ಗಳ ಹರಡುವಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಕ್ರಿವಿಡಾ ಟ್ರೈವಸ್ (KRIVIDA Trivus) ಪರೀಕ್ಷಾ ಕಿಟ್​ಗೆ ಅನುಮತಿ ನೀಡಿರುವುದು ಗಮನಾರ್ಹ.

ಗಂಟೆಯೊಳಗೆ ಫಲಿತಾಂಶ: ಮೂರು ರೋಗಕಾರಕ ವೈರಸ್​ಗಳು ಒಂದೇ ರೀತಿಯ ಆರಂಭಿಕ ರೋಗಲಕ್ಷಣಗಳನ್ನು ಹೊಂದಿವೆ. ಆದರೆ, ಅನಾರೋಗ್ಯವು ಮುಂದುವರಿಯುವ ರೀತಿ, ಹರಡುವ ಬಗೆ ಮತ್ತು ಇವಕ್ಕೆ ನೀಡಬೇಕಾದ ಚಿಕಿತ್ಸೆಗಳು ವಿಭಿನ್ನವಾಗಿವೆ. ಕ್ರಿವಿಡಾ ಟ್ರೈವಸ್ ಪರೀಕ್ಷಾ ಕಿಟ್​ ಇದು ಇನ್​ಫ್ಲುಯೆಂಜಾ, SARS-CoV-2 ಉಸಿರಾಟದ ಸಿನ್ಸಿಟಿಯಲ್ ವೈರಸ್ ಅನ್ನು ಅತ್ಯಂತ ಕಡಿಮೆ ಸಮಯದಲ್ಲಿ ಪತ್ತೆ ಮಾಡುತ್ತದೆ. ಈ ಪರೀಕ್ಷೆಯ ಆವರ್ತನ ಸಮಯವು 27 ನಿಮಿಷಗಳಾಗಿದ್ದು, 50 ರಿಂದ 60 ನಿಮಿಷಗಳಲ್ಲಿ ಫಲಿತಾಂಶ ಪಡೆಯಬಹುದು. ಹೀಗಾಗಿ ರೋಗ ಪತ್ತೆಯಾದರೆ ಕೂಡಲೇ ಚಿಕಿತ್ಸೆ ಆರಂಭಿಸಲು ಅನುಕೂಲವಾಗುತ್ತದೆ ಎಂದು ಕಂಪನಿ ಹೇಳಿದೆ.

ಲಭ್ಯವಿರುವ ಎಲ್ಲಾ RT-PCR ಸಾಧನಗಳಲ್ಲಿ ಕಿಟ್ ಅನ್ನು ಬಳಸಬಹುದು. ಐಸಿಎಂಆರ್ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ 225 ತಿಳಿದಿರುವ ಪಾಸಿಟಿವ್ ಸ್ಯಾಂಪಲ್​ಗಳು ಮತ್ತು 85 ನಕಾರಾತ್ಮಕ ಮಾದರಿಗಳನ್ನು ಬಳಸಿಕೊಂಡು ಕಿಟ್ ಅನ್ನು ಮೌಲ್ಯಮಾಪನ ಮಾಡಿದೆ. ಕ್ರಿವಿಡಾ ಟ್ರೈವಸ್ ನ ಒಟ್ಟಾರೆ ಸೂಕ್ಷ್ಮತೆಯು 99.11 ಪ್ರತಿಶತ ಮತ್ತು ನಿರ್ದಿಷ್ಟತೆಯು 100 ಪ್ರತಿಶತವಾಗಿದೆ.

ಹೆಚ್ಚುತ್ತಿರುವ H3N2 ಪ್ರಕರಣಗಳು: ಕಳೆದ ಕೆಲ ವಾರಗಳಿಂದ H3N2 ಪ್ರಕರಣಗಳು ಹೆಚ್ಚಾಗುತ್ತಿವೆ. ಜೊತೆಗೆ ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿವೆ. ಈ ಸೋಂಕುಗಳ ನಡುವೆ ಸ್ಪಷ್ಟವಾಗಿ ವ್ಯತ್ಯಾಸವನ್ನು ಗುರುತಿಸುವ ಮತ್ತು ಆ ಮೂಲಕ ವೈದ್ಯರಿಗೆ ಸಹಾಯ ಮಾಡುವ ಪರೀಕ್ಷಾ ಕಿಟ್​ನ ಅಗತ್ಯವಿದೆ ಎಂದು ಕ್ರಿಯಾ ಮೆಡಿಕಲ್ ಟೆಕ್ನಾಲಜೀಸ್‌ನ ಸಿಇಒ ಮತ್ತು ಸಂಸ್ಥಾಪಕ ಅನು ಮೋಟುರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಮ್ಮ ಉತ್ಪನ್ನವು ಎಲ್ಲ ಮೂರು ವೈರಸ್​ಗಳ ಉಪಸ್ಥಿತಿ ಅಥವಾ ಅನುಪಸ್ಥಿತಿಯನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ. ಕೇವಲ SARS-CoV-2 ಉಪಸ್ಥಿತಿ ಅಥವಾ ಅನುಪಸ್ಥಿತಿಯನ್ನು ಪತ್ತೆಹಚ್ಚುವ ಸಾಂಪ್ರದಾಯಿಕ RT-PCR ಕಿಟ್‌ಗಳ ಬದಲಾಗಿ ಕ್ರಿವಿಡಾ ಟ್ರೈವಸ್ ಕಿಟ್ ಬಳಸುವುದು ಸೂಕ್ತ ಎಂದು ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಷಣ್ಮುಗ ಪ್ರಿಯಾ ಹೇಳಿದ್ದಾರೆ.

ನಮ್ಮ ಕಿಟ್ ಈ ಸೋಂಕುಗಳ ಉಪಸ್ಥಿತಿ ಅಥವಾ ಅನುಪಸ್ಥಿತಿಯ ಬಗ್ಗೆ ಹೆಚ್ಚು ಅರ್ಥಪೂರ್ಣ ವರದಿಯನ್ನು ನೀಡುವುದು ಮಾತ್ರವಲ್ಲದೆ, ಅವು ಎಷ್ಟು ತೀವ್ರವಾಗಿವೆ ಹಾಗೂ ಅವುಗಳ ನಿರ್ವಹಣೆಯಲ್ಲಿ ಸಿಂಡ್ರೊಮಿಕ್ ಚಿಕಿತ್ಸಾ ವಿಧಾನದ ಅಗತ್ಯವಿದೆಯಾ ಎಂಬುದನ್ನು ಸಹ ತಿಳಿಸುತ್ತದೆ ಎಂದು ಪ್ರಿಯಾ ಹೇಳಿದರು. ಟೆಸ್ಟ್ ಕಿಟ್ ಅನ್ನು ಚೆನ್ನೈನ ಓರಗಡಂನಲ್ಲಿರುವ KRIYA ದ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಕಿಟ್ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ದೇಶಾದ್ಯಂತ ವಾಣಿಜ್ಯಿಕವಾಗಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ : ಓಮ್ರಿಕಾನ್​ XBB 1.5 ತಳಿಯು ಹೆಚ್ಚು ರೂಪಾಂತರ ಹೊಂದಿದ್ದು, ಬಲು ಬೇಗ ಹರಡುತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.