ಕೋಲ್ಕತ್ತಾ: ದೇಶವನ್ನು ವಿಭಜಿಸಲು ನಾನು ಬಿಡುವುದಿಲ್ಲ. ಜನರಿಗಾಗಿ ಬದುಕುತ್ತೇನೆ, ಕೆಲಸ ಮಾಡುತ್ತೇನೆ, ಸಾಯುತ್ತೇನೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತ್ತಾದ ಬಾಬುಘಟ್ ಪ್ರದೇಶದಲ್ಲಿ ಗಂಗಾಸಾಗರ ಯಾತ್ರಾರ್ಥಿಗಳ ವಿಶ್ರಾಂತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮಹಾನ್ ನಾಯಕರು ಪ್ರತಿಯೊಬ್ಬರನ್ನು ಸಮಾನವಾಗಿ ಪರಿಗಣಿಸುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದಾದರೂ ದೇಶವನ್ನು ವಿಭಜಿಸಲಾಗಿಲ್ಲ ಎಂದು ತಿಳಿಸಿದರು.
ಇನ್ನೂ ದೇಶವನ್ನು ವಿಭಜಿಸಲು ನಾನು ಅನುಮತಿಸುವುದಿಲ್ಲ. ನಾನು ಸಾಮಾನ್ಯ ಜನರಿಗಾಗಿ ಬದುಕುತ್ತೇನೆ, ಕೆಲಸ ಮಾಡುತ್ತೇನೆ ಮತ್ತು ಸಾಯುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಕೃಷಿ ಕಾನೂನು, ರೈತರ ಪ್ರತಿಭಟನೆ ಕುರಿತು ವಿಚಾರಣೆ: ಉನ್ನತ ಮಟ್ಟದ ಸಮಿತಿ ರಚಿಸುವ ಸಾಧ್ಯತೆ
ಗಂಗಾಸಾಗರ ಮೇಳದಲ್ಲಿ ಕೋವಿಡ್-19 ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲವನ್ನೂ ನಿರ್ವಹಿಸಲಾಗುವುದು. ಕೋವಿಡ್ ಹಿನ್ನೆಲೆ ಗಂಗಾಸಾಗರ ಮೇಳಕ್ಕೆ ಬರಲು ಸಾಧ್ಯವಾಗದವರಿಗೆ ಸರ್ಕಾರ ಇ - ಬಾತಿಂಗ್ ವ್ಯವಸ್ಥೆ ಮಾಡಲಾಗಿದೆ. ದೇಶದಾದ್ಯಂತ, ಆರ್ಡರ್ ಮಾಡಿದವರಿಗೆ ಪವಿತ್ರ ನೀರು ಮತ್ತು ಪ್ರಸಾದ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.