ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ದೇಶವನ್ನ ಲಾಕ್ಡೌನ್ನಿಂದ ರಕ್ಷಿಸುವಂತೆ ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ಲಾಕ್ಡೌನ್ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದಾರೆ.
ವಿವಿಧ ರಾಜ್ಯಗಳಿಗೆ ಮನವಿ ಮಾಡಿರುವ ನಮೋ, ಮೈಕ್ರೋ ಕಂಟೈನ್ಮೆಟ್ಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಸೂಚನೆ ನೀಡಿದ್ದು, ಲಾಕ್ಡೌನ್ ಅಸ್ತ್ರ ಪ್ರಯೋಗಕ್ಕೆ ಅವಕಾಶ ನೀಡಬೇಡಿ ಎಂದರು. ಅದು ಕೊನೆಯ ಅಸ್ತ್ರವಾಗಿ ಬಳಕೆ ಮಾಡುವಂತೆ ಅವರು ಎಲ್ಲ ರಾಜ್ಯಗಳಿಗೂ ಮನವಿ ಮಾಡಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಜನರು ಧೈರ್ಯ ಕಳೆದುಕೊಳ್ಳಬಾರದು. ದೇಶದ ಆಮ್ಲಜನಕ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದ್ದು, ಲಸಿಕೆ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ದೇಶದಲ್ಲಿ ಲಾಕ್ಡೌನ್ ಇಲ್ಲ, ಲಾಕ್ಡೌನ್ಗೆ ಅವಕಾಶ ನೀಡಬೇಡಿ: ದೇಶದ ಜನರಲ್ಲಿ ಮೋದಿ ಮನವಿ
ಯಾರೂ ಅನಗತ್ಯವಾಗಿ ಮನೆಗಳಿಂದ ಹೊರಬರದಂತೆ ಮನವಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ದೇಶವನ್ನ ಲಾಕ್ಡೌನ್ನಿಂದ ಪಾರು ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ವಿವಿಧ ನಗರಗಳಲ್ಲಿ ವಾಸ ಮಾಡುತ್ತಿರುವ ಕಾರ್ಮಿಕರು ಗುಳೆ ಹೋಗದಂತೆ ನೋಡಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ.ದೇಶ ಇದೀಗ ಮತ್ತೊಮ್ಮೆ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದು, ಮಹಾಮಾರಿಯಿಂದ ಮೃತಪಟ್ಟವರ ಕುಟುಂಬದ ದುಃಖದಲ್ಲಿ ನಾವು ಭಾಗಿಯಾಗುತ್ತಿದ್ದೇವೆ ಎಂದರು.