ETV Bharat / bharat

ರಾಜಕೀಯವಿಲ್ಲದೇ ರಾಜಕಾರಣಿಯಾಗಿ ನಾನು ಜನರಿಗೆ ಸೇವೆ ಮಾಡುತ್ತೇನೆ: ರಾಬರ್ಟ್ ವಾದ್ರಾ - ರಾಬರ್ಟ್ ವಾದ್ರಾ

ಸಂದರ್ಶನವೊಂದರಲ್ಲಿ, ಉದ್ಯಮಿ ರಾಬರ್ಟ್ ವಾದ್ರಾ ರಾಜಕೀಯವು ಅವರ ಕುಟುಂಬದ ಭಾಗವಾಗಿದೆ ಮತ್ತು ಈ ಹಿನ್ನೆಲೆ ಪ್ರತಿದಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

i-do-everything-that-a-politician-does-without-being-in-politics-robert-vadra

author img

By

Published : Jun 8, 2021, 9:58 PM IST

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರು ರಾಜಕೀಯದಲ್ಲಿ ರಾಜಕೀಯಕ್ಕೆ ಧುಮುಕುವ ಆಸೆಯನ್ನು ಹೊರಹಾಕಿದ್ದಾರೆ. ರಾಜಕೀಯ ತನ್ನ ಕುಟುಂಬದ ಭಾಗವಾಗಿದೆ ಮತ್ತು ಪ್ರತಿದಿನ ಅದನ್ನು ನಿಭಾಯಿಸಬೇಕಾಗಿದೆ ಎಂದು ಸಂದರ್ಶನವೊಂದರಲ್ಲಿ ವಾದ್ರಾ ಹೇಳಿದ್ದಾರೆ. ಖಂಡಿತವಾಗಿಯೂ ನಾನು ರಾಜಕಾರಣಿಯಾಗಿ ಯಾವುದೇ ರಾಜಕೀಯವಿಲ್ಲದೇ ಎಲ್ಲವನ್ನೂ ಮಾಡುತ್ತೇನೆ ಎಂದು ತಮ್ಮ ಅಭಿಲಾಷೆಯನ್ನ ವ್ಯಕ್ತಪಡಿಸಿದ್ದಾರೆ.

ಉದ್ಯಮಿ ವಾದ್ರಾ ಮುಂದುವರಿದು ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರವು ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡುತ್ತಿದೆ. ಈ ಸರ್ಕಾರವು ಉದ್ಯಮಿಯಾದ ನನ್ನನ್ನು ಮತ್ತು ರಾಜಕಾರಣಿಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ನನ್ನ ಕುಟುಂಬ ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.

ಜನರು ನನ್ನ ಬಳಿಗೆ ಬರುತ್ತಾರೆ ಹಾಗೆ ಅವರು ನನ್ನಲ್ಲಿ ಒಳ್ಳೆಯದನ್ನು ಕಾಣುತ್ತಾರೆ. ನಾನು ಅವರನ್ನು ರಾಜಕೀಯ ಬದಿಗಿಟ್ಟು ನೋಡುತ್ತೇನೆ. ಸಮಯ ಬಂದಾಗ ನಾನು ರಾಜಕೀಯದಲ್ಲಿ ಭಾಗವಹಿಸುತ್ತೇನೆ ಮತ್ತು ನಾನು ಸಮರ್ಥನೆಂದು ಭಾವಿಸುವ ಜನರಿಗೆ ನನ್ನ ಸಹಾಯ ಮಾಡುತ್ತೇನೆ. ರಾಜಕೀಯವು ನನ್ನ ಕುಟುಂಬದ ಭಾಗವಾಗಿರುವ ಕಾರಣ ಪ್ರತಿದಿನ ನಾನು ಅದನ್ನು ಎದುರಿಸಬೇಕಾಗಿದೆ ಎಂದೂ ಅವರು ವಿರೋಧಿಗಳ ಟೀಕೆ ಪ್ರತ್ಯುತ್ತರ ನೀಡಿದ್ದಾರೆ.

ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ರ್ಯಾಲಿಗಳು ಮತ್ತು ಉತ್ತರಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಗಳು ಕೊರೊನಾ ಹರಡಲು ಕಾರಣವಾಗಿವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.