ಹೈದರಾಬಾದ್(ತೆಲಂಗಾಣ): ವೆಬ್ಸಿರೀಸ್ನಿಂದ ಪ್ರೇರಿತರಾಗಿ ಸುಲಿಗೆ ಮಾಡಲು ಜನರನ್ನು ಅಪಹರಿಸುತ್ತಿದ್ದ ಆರೋಪದಲ್ಲಿ ಮಹಿಳೆ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.
ವೆಬ್ಸಿರೀಸ್ನಲ್ಲಿ ಹಲವರನ್ನು 'ನೇಮಕ' ಮಾಡಿಕೊಂಡು ಹಣಕ್ಕಾಗಿ ವ್ಯಕ್ತಿಗಳನ್ನು ಅಪಹರಿಸಲಾಗುತ್ತಿತ್ತು. ಸುರೇಶ್ ಎಂಬಾತ ಮಹಿಳೆ ಸೇರಿದಂತೆ ಹಲವರನ್ನು ನೇಮಿಸಿಕೊಂಡು ಪ್ಲ್ಯಾನ್ ಮಾಡಿ, ಅಮಾಯಕರನ್ನು ಅಪಹರಿಸುತ್ತಿದ್ದ. ನಂತರ ಅವರ ಕುಟುಂಬಸ್ಥರಿಗೆ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ಜೊತೆಗೆ ನೇಮಕಗೊಂಡ ಮಹಿಳೆಯರ ಮೂಲಕ ಸ್ನೇಹಿತರ ವಲಯದಲ್ಲಿರುವವರಿಗೆ ಸಂದೇಶ, ವಾಯ್ಸ್ ರೆಕಾರ್ಡ್ ಅನ್ನು ಸಾಮಾಜಿಕ ಜಾಲತಾಣಗಳ ಆ್ಯಪ್ ಮೂಲಕ ಕಳುಹಿಸಿ, ನಂತರ ಟ್ರ್ಯಾಪ್ ಮಾಡಿ, ಅವರನ್ನು ಅಪಹರಿಸುವ ಕೆಲಸ ಮಾಡುತ್ತಿದ್ದು, ನಂತರ ಅವರನ್ನು ವಂಚಿಸಲಾಗುತ್ತಿತ್ತು. ಮಹಿಳೆಯೊಂದಿಗಿನ ಕುರಿತ ವಿಚಾರವಾದ ಕಾರಣದಿಂದ ಸಂತ್ರಸ್ತ ವ್ಯಕ್ತಿಗಳು ಈ ಕುರಿತು ದೂರು ನೀಡಲು ಹೋಗುತ್ತಿರಲಿಲ್ಲ. ಹೀಗಾಗಿ ವಂಚಕರು ಬಚಾವಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಟ್ರ್ಯಾಕ್ಟರ್ಗೆ ವ್ಯಾನ್ ಡಿಕ್ಕಿ: ನಾಲ್ವರ ದುರ್ಮರಣ
ಫೆಬ್ರವರಿ 6ರಂದು ಮಹಿಳೆಯೊಬ್ಬರು ತನ್ನ ಮಗನನ್ನು ಕೆಲವರು ಅಪಹರಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಸುರೇಶ್ ಮತ್ತು ಆತನ ಗ್ಯಾಂಗ್ ಅನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.