ETV Bharat / bharat

ಸ್ನೇಹಿತರಿಗೆ ವಿಡಿಯೋ ಮಾಡಿ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಡೆಲಿವರಿ ಬಾಯ್​ - ಡೆಲಿವರಿ ಬಾಯ್ ಸಾವು

ಡೆಲಿವರಿ ಬಾಯ್​ ಒಬ್ಬ ತನ್ನ ಸ್ನೇಹಿತರಿಗೆ ವಿಡಿಯೋವೊಂದನ್ನು ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ನವರಸ ಗಾರ್ಡನ್ ಹಿಂಭಾಗದಲ್ಲಿರುವ ಮೋಹನ್ ರಾವ್ ಕಾಲೋನಿಯಲ್ಲಿ ಜರುಗಿದೆ. ಈತನಿಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿತ್ತು.

Hyderabad: Delivery boy hangs self after sending video to kin
ಸ್ಣೇಹಿತರಿಗೆ ವಿಡಿಯೋ ಮಾಡಿ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಡೆಲಿವರಿ ಬಾಯ್​
author img

By

Published : Oct 21, 2021, 3:28 PM IST

Updated : Oct 21, 2021, 3:42 PM IST

ಹೈದರಾಬಾದ್: ಸ್ನೇಹಿತರಿಗೆ ವಿಡಿಯೋ ಮಾಡಿ ಕಳುಹಿಸಿದ ನಂತರ ಡೆಲಿವರಿ ಬಾಯ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನವರಸ ಗಾರ್ಡನ್ ಹಿಂಭಾಗದಲ್ಲಿರುವ ಮೋಹನ್ ರಾವ್ ಕಾಲೋನಿಯಲ್ಲಿ ಅಶೋಕ್ (29) ಎಂಬ ಸ್ವಿಗ್ಗಿ ಡೆಲಿವರಿ ಬಾಯ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಈ ಯುವಕ ಸೆಲ್ಫಿ ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ. ಈ ವಿಡಿಯೋದಲ್ಲಿ ಕನ್ನಯ್ಯ ಎಂದು ಯಾರನ್ನೋ ಉಲ್ಲೇಖಿಸಿದ್ದಾನೆ ಹಾಗೆ ಅವರಿಗೆ ಸಂದೇಶವೊಂದನ್ನು ನೀಡಿದ್ದಾನೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಹಾಗೆ ಆತ ಆ ವ್ಯಕ್ತಿಗೆ ಯಾವ ಸಂದೇಶ ನೀಡಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸ್ನೇಹಿತರಿಗೆ ವಿಡಿಯೋ ಮಾಡಿ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಡೆಲಿವರಿ ಬಾಯ್​

ಅಶೋಕ್​ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ನಿನ್ನೆ ಅಂದರೆ 2021 ಅಕ್ಟೋಬರ್ 2021 ರಂದು ಬೆಳಗ್ಗೆ ಅವರ ಪತ್ನಿ ಮತ್ತು ಪೋಷಕರು ಕೆಲಸಕ್ಕಾಗಿ ಹೈದರಾಬಾದಿಗೆ ಬಂದಿದ್ದಾರೆ. ಇವರು ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಮರಳಿದ ನಂತರ ಅಶೋಕ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅಶೋಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬ ಸದಸ್ಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಸೆಲ್ಫಿ ವಿಡಿಯೋ ಪತ್ತೆ ಹಚ್ಚಿ ತನಿಖೆ ಆರಂಭಿಸಿದ್ದಾರೆ.

Last Updated : Oct 21, 2021, 3:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.