ಹೈದರಾಬಾದ್: ಕೊರೊನಾ ವಿರುದ್ಧ ಹೋರಾಡುವ ಭಾಗವಾಗಿ ಪ್ರತಿಕಾಯಗಳ ಸಾಮರ್ಥ್ಯ ಪರೀಕ್ಷಿಸಲು ಹೈದರಾಬಾದ್ ಮೂಲದ ಸ್ಟಾರ್ಟ್ಅಪ್ ಎರಡು ರೀತಿಯ ಲಾಲಾರಸ ಪರೀಕ್ಷೆಗಳನ್ನು ಆರಂಭಿಸಿದೆ. ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯ ಆಸ್ಪೈರ್ ಬಯೋನೆಸ್ಟ್ ಇನ್‌ಕ್ಯುಬೇಷನ್ ಸೆಂಟರ್‌ನಲ್ಲಿ ಉದಯ್ ಸಕ್ಸೆನ್ ಮತ್ತು ವಂಗಲಾ ಸುಬ್ರಮಣ್ಯಂ ಅವರು 'ರೀಜೆನ್ ಇನ್ನೋವೇಶನ್ಸ್' ಕಂಪನಿಯನ್ನು ಸ್ಥಾಪಿಸುವ ಮೂಲಕ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ತಂತ್ರಜ್ಞಾನದ ಮೂಲಕ ರಕ್ತದ ಮಾದರಿಗಳ ಅಗತ್ಯವಿಲ್ಲದೇ ಪ್ರತಿಕಾಯಗಳನ್ನು ಪರೀಕ್ಷಿಸಬಹುದಾಗಿದೆ. ಆಸ್ಪತ್ರೆ ಅಥವಾ ಪ್ರಯೋಗಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಮಾದರಿಗಳನ್ನು ಪರೀಕ್ಷಿಸಲು ELISA ಪರೀಕ್ಷೆಯನ್ನು ಬಳಸಬಹುದು.
ಇದನ್ನೂ ಓದಿ: ಮುಗ್ಧ ಮಗುವನ್ನು ರಾಕ್ಷಸನ ಹಾಗೆ ಥಳಿಸಿದ ಕ್ರೂರಿ : ವಿಡಿಯೋ ಭಯಾನಕ
ಇನ್ನು ಈ ಸಂಬಂಧ ಅಮೆರಿಕದ ಕಂಪನಿ 'ಲೇ ಸೈನ್ಸ್ ಇಂಕ್' ರೀಜೆನ್ ಜೊತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಈ ಕಿಟ್‌ಗಳ ಸಹಾಯದಿಂದ ಪ್ರತಿಕಾಯಗಳ ಸಾಮರ್ಥ್ಯವನ್ನು ಸುಲಭವಾಗಿ ಕಂಡು ಹಿಡಿಯಬಹುದು ಎಂದು ಲೇ ಸೈನ್ಸ್ ಇಂಕ್ ಸಿಇಒ ಉದಯ್ ಸಕ್ಸೇನಾ ಮತ್ತು ಸತೀಶ್ ಚಂದ್ರನ್ ಹೇಳಿದ್ದಾರೆ.