ಹೈದರಾಬಾದ್: ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಅಪರಾಧಿ ಪತಿಗೆ ಗಲ್ಲು ಶಿಕ್ಷೆ ವಿಧಿಸಿ ಇಲ್ಲಿನ ನಾಂಪಲ್ಲಿ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿತು. ಐದು ವರ್ಷಗಳ ಸುದೀರ್ಘ ವಿಚಾರಣೆಯ ನಂಚರ 4ನೇ ಎಎಂಎಸ್ಜೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.
ಇದೇ ವೇಳೆ, ಮೂರು ವರ್ಷ ಕಠಿಣ ಸಜೆ, 5,000 ರೂ. ದಂಡ (ತಪ್ಪಿದರೆ ಎರಡು ತಿಂಗಳು ಸಾದಾ ಸಜೆ), ಮತ್ತೊಂದು ಸೆಕ್ಷನ್ ಅಡಿಯಲ್ಲಿ 10 ಸಾವಿರ ರೂ. ದಂಡ (5 ತಿಂಗಳು ಸಾದಾ ಸಜೆ) ವಿಧಿಸಲಾಗಿದೆ. ಪೊಲೀಸರ ಪ್ರಕಾರ, ಅಪರಾಧಿ ತಲಬಕಟ್ಟೆ ಅಮಾನನಗರದ ಕಾರು ಚಾಲಕ ಇಮ್ರಾನ್-ಉಲ್-ಹಕ್ (44) ತನ್ನ ಪತ್ನಿ ನಸೀಮ್ ಅಖ್ತರ್ ಅವರನ್ನು 2009ರಲ್ಲಿ ವಿವಾಹವಾಗಿದ್ದ. ಐದು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾನೆ. ಆ ಬಳಿಕ ಹಣ ಮತ್ತಿತರ ವಿಚಾರಕ್ಕೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕಾರು ಖರೀದಿಸಲು 30 ಸಾವಿರ ರೂ. ನೀಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ನಂತರ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಇದರಿಂದ ಕೌಟುಂಬಿಕ ಜಗಳ ಮತ್ತಷ್ಟು ಹೆಚ್ಚಾಗಿದೆ. ಜನವರಿ 6, 2019ರಂದು ಪತ್ನಿಯೊಂದಿಗೆ ಜಗಳವಾಡಿದ ಇಮ್ರಾನ್, ತಾಳ್ಮೆ ಕಳೆದುಕೊಂಡು ಆಕೆಯ ಕುತ್ತಿಗೆ, ಕೈ ಮತ್ತು ಗಂಟಲಿನ ಮೇಲೆ ಸ್ಕ್ರೂ ಡ್ರೈವರ್‌ನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಸುತ್ತಿಗೆಯಿಂದ ತಲೆಗೆ ಹೊಡೆದು ನಸೀಮ್ (35) ಅವರನ್ನು ಭೀಕರವಾಗಿ ಕೊಲೆ ಮಾಡಿದ್ದ.
ಚಂಚಲಗುಡ ಜೈಲಿನಲ್ಲಿರುವ ಕೈದಿ: ಐಪಿಸಿ ಸೆಕ್ಷನ್‌ಗಳಾದ 302, 498 ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಇಮ್ರಾನ್ ವಿರುದ್ಧ ಭವಾನಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಮರುದಿನ ಸಲಾಮ್ ಚೌಕದಲ್ಲಿ ಪೊಲೀಸರು ಬಂಧಿಸಿದ್ದರು. ಎಲ್ಲಾ ಸಾಕ್ಷ್ಯಗಳನ್ನು ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಐದು ವರ್ಷಗಳ ವಿಚಾರಣೆಯ ನಂತರ ಇಮ್ರಾನ್ಗೆ ಮರಣದಂಡನೆ ವಿಧಿಸಲಾಗಿದೆ.
ಮೃತ ಮಹಿಳೆಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಸದ್ಯ ಚಂಚಲಗುಡ ಜೈಲಿನಲ್ಲಿರುವ ಕೈದಿಯನ್ನು ಶುಕ್ರವಾರ ಬೆಳಿಗ್ಗೆ ಚರ್ಲಪಲ್ಲಿ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಜೈಲು ಅಧೀಕ್ಷಕರು ತಿಳಿಸಿದ್ದಾರೆ.
ಇದನ್ನೂ ಓದಿ: ಲಿವ್ ಇನ್ ರಿಲೇಶನ್ಶಿಪ್: ಸಂಗಾತಿಯ ಮಗಳ ಮೇಲೆ ಅತ್ಯಾಚಾರ, ಆರೋಪಿಯ ಬಂಧನ