ಜಮುಯಿ (ಬಿಹಾರ) : ಬಿಹಾರದ ಜಮುಯಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕಲ್ಲಿನಿಂದ ಗಾಯಗೊಳಿಸಿ ಬೆಟ್ಟದಿಂದ ಕೆಳಗೆ ಎಸೆದಿರುವ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ತಾನು ಮತ್ತು ತನ್ನ ಪತಿ ಬೇಗುಸರಾಯ್‌ನಿಂದ ಹೊರಟು ಹೊಸ ವಾಹನಕ್ಕೆ ಪೂಜೆ ಮಾಡಲು ಬೆಳಗ್ಗೆ ಎಂಟು ಗಂಟೆಗೆ ದಿಯೋಘರ್‌ಗೆ ಹೋಗಿದ್ದಾರೆ. ಈ ಮಧ್ಯೆ ಜಮುಯಿ ದಿಯೋಘರ್ ಮುಖ್ಯ ರಸ್ತೆಯ NH-333 ಬಳಿ ಬೆಟ್ಟವೊಂದು ಕಾಣಿಸಿಕೊಂಡಿದೆ. ನಂತರ ಅವರು ಬಾಟಿಯಾ ಕಣಿವೆ ಬಳಿಯ ಪರ್ವತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪತಿಯೊಂದಿಗೆ ತೆರಳಿದ್ದಾರೆ. ಇದೇ ವೇಳೆ, ಪತಿ ಸೆಲ್ಫಿ ನೆಪದಲ್ಲಿ ಆಕೆಯನ್ನು ಪರ್ವತದ ತುದಿಗೆ ಕರೆದೊಯ್ದು ಕಲ್ಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಅಷ್ಟೇ ಅಲ್ಲದೆ ಅವರನ್ನು ಅಲ್ಲಿಂದ ತಳ್ಳಿದ್ದಾನೆ.
ಚಿಪ್ಸ್ ತಿನ್ನಿಸಿ ಪ್ರಜ್ಞೆ ತಪ್ಪಿಸಿದ ಪತಿ : ಇದಕ್ಕೂ ಮೊದಲು ಪತಿರಾಯ ಸೆಲ್ಫಿ ತೆಗೆದುಕೊಳ್ಳುವಂತೆ ಹೇಳಿ ಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಅಲ್ಲಿಗೆ ಹೋದ ಕೂಡಲೇ ತಿನ್ನಲು ಚಿಪ್ಸ್ ಕೊಟ್ಟಿದ್ದಾನೆ. ಚಿಪ್ಸ್ ತಿಂದ ನಂತರ ಹೆಂಡತಿಗೆ ಪ್ರಜ್ಞೆ ತಪ್ಪಿದೆ. ಇದೇ ವೇಳೆ ಹೆಂಡತಿಯ ಮುಖಕ್ಕೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾನೆ. ಆಗ ಸುತ್ತಮುತ್ತ ಯಾರೂ ಇಲ್ಲ, ಯಾರೂ ನೋಡಿಲ್ಲ ಎಂದು ಭಾವಿಸಿದ ಆಸಾಮಿ, ಪತ್ನಿಯನ್ನು ಕೆಳಕ್ಕೆ ದೂಕಿ ಅಲ್ಲಿಂದ ಪರಾರಿಯಾಗಿದ್ದಾನೆ.
2019ರಲ್ಲಿ ನಡೆದಿತ್ತು ಪ್ರೇಮ ವಿವಾಹ: ಗಾಯಗೊಂಡ ಮಹಿಳೆ ನಿಶಾ ಪ್ರಕಾರ, 2019ರಲ್ಲಿ ಪ್ರೇಮಿರಾಜ್ ರಂಜನ್ ಜತೆ ಪ್ರೇಮ ವಿವಾಹ ನಡೆದಿತ್ತಂತೆ. ಇದೇ ಶನಿವಾರ ಪತಿ ಹೊಸ ಕಾರು ಖರೀದಿಸಿದ್ದರು. ಭಾನುವಾರ ಬೆಳಗ್ಗೆ ಎಂಟು ಗಂಟೆಗೆ ಬೇಗುಸರಾಯ್‌ನಿಂದ ದಿಯೋಘರ್‌ಗೆ ಪೂಜೆ ಸಲ್ಲಿಸಲು ಇಬ್ಬರೂ ಒಂದೇ ಕಾರಿನಲ್ಲಿ ಹೊರಟಿದ್ದರು. ಮಧ್ಯಾಹ್ನದ ಸುಮಾರಿಗೆ ಬಾಟಿಯಾ ಕಣಿವೆ ತಲುಪಿದ್ದಾರೆ. ಶೌಚಕ್ಕೆ ಹೋಗಿ ಅಲ್ಲಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಪತಿ ಕಣಿವೆಯಲ್ಲಿ ಕಾರನ್ನು ನಿಲ್ಲಿಸಿ ಬೆಟ್ಟದ ತುದಿಗೆ ಕೊಂಡೊಯ್ದಿದ್ದಾನೆ. ಅಲ್ಲಿ ಚಿಪ್ಸ್ ತಿಂದು ಮೂರ್ಛೆ ಹೋದ ಆಕೆಯನ್ನು ಕತ್ತು ಹಿಸುಕಿ ಸಾಯಿಸಲು ಯತ್ನಿಸಿ ಅಲ್ಲೇ ಇಟ್ಟಿದ್ದ ಕಲ್ಲಿನಿಂದ ಮುಖಕ್ಕೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಆ ಬಳಿಕ ಅವರನ್ನ ಅಲ್ಲಿಂದ ಕೆಳಕ್ಕೆ ತಳ್ಳಿದ್ದರಿಂದ, ಪತ್ನಿ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಆಸ್ಪತ್ರೆಗೆ ಕರೆದೊಯ್ದ ಜನರು: ಸುಮಾರು ಮೂರು ಗಂಟೆಗಳ ನಂತರ ಮಹಿಳೆಗೆ ಪ್ರಜ್ಞೆ ಬಂದಿದೆ. ನಂತರ ಕಾರಿನ ಸದ್ದು ಕೇಳಿ ಹೇಗೋ ರಸ್ತೆ ತಲುಪಿದ್ದಾರೆ. ದಾರಿಯಲ್ಲಿ ಒಬ್ಬ ವಾಹನ ಚಾಲಕ ಗಾಯಗೊಂಡ ಮಹಿಳೆಯನ್ನು ನೋಡಿ ಚಿಕಿತ್ಸೆಗಾಗಿ ರೆಫರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಬಳಿಕ ಅವರು ಅಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗಾಯಗೊಂಡ ಮಹಿಳೆಯನ್ನು ಬೇಗುಸರಾಯ್‌ನ ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ತರಬನ್ನಾ ಗ್ರಾಮದ ನಿವಾಸಿ ಸಿಕಂದರ್ ಮಹತೋ ಅವರ ಪುತ್ರಿ ನಿಶಾ ಕುಮಾರಿ ಎಂದು ಗುರುತಿಸಲಾಗಿದೆ.
'ನಾವು ದಿಯೋಘರ್‌ಗೆ ಹೋಗುತ್ತಿದ್ದಾಗ ನನ್ನ ಪತಿ ಜಮುಯಿ - ದಿಯೋಘರ್ ಮುಖ್ಯ ರಸ್ತೆಯ NH 333 ರ ಸಮೀಪ ಬೆಟ್ಟದ ಮೇಲೆ ಸೆಲ್ಫಿ ತೆಗೆದುಕೊಳ್ಳೋಣ ಎಂದು ಕರೆದುಕೊಂಡು ಹೋದರು. ಆಗ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ನನ್ನನ್ನು ಕೊಲ್ಲಲು ಪ್ರಯತ್ನಿಸಿದರು ಮತ್ತು ಬೆಟ್ಟದ ತುದಿಯಿಂದ ತಳ್ಳಿದರು' ಎಂದು ಹಲ್ಲೆಗೊಳಗಾದ ಮಹಿಳೆ ನಿಶಾ ತಾವು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಹೆತ್ತ ಮಗಳ ಕತ್ತು ಸೀಳಿ ಕೊಂದ ತಂದೆ, ಮಗನಿಂದ ಹತಳಾದ ತಾಯಿ: ಆರೋಪಿಗಳ ಬಂಧನ