ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಚ್ಚಿ ಬೀಳಿಸುವಂತಹ ಆಘಾತಕಾರಿ ಘಟನೆವೊಂದು ಹಾಡಹಗಲೇ ನಡೆದಿದ್ದು, ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ದೆಹಲಿಯ ವಿಜಯ್ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪತಿಯೊಬ್ಬ ಹೆಂಡತಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದು, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸಾರ್ವಜನಿಕರು ಆರೋಪಿ ಗಂಡನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಕೃತ್ಯ ನಡೆದಿದೆ ಎಂಬ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ, ಅಕ್ರಮ ಸಂಬಂಧದ ಮೇಲೆ ಈ ಕೃತ್ಯವೆಸಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ: ’ಕೊರೊನಾದಿಂದ ಕಾಪಾಡು ತಾಯಿ’: ಏರ್ಪೋರ್ಟ್ನಲ್ಲಿ ಪೂಜೆ ಮಾಡಿದ ಮಧ್ಯಪ್ರದೇಶದ ಸಚಿವೆ!
ಕೊಲೆ ಮಾಡಿ ಸ್ಥಳದಿಂದ ಓಡಿ ಹೋಗಲು ಯತ್ನಿಸಿದ ವ್ಯಕ್ತಿಯನ್ನ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಮೃತ ಮಹಿಳೆಯನ್ನ ನೀಲು ಎಂದು ಗುರುತಿಸಲಾಗಿದ್ದು, ಆರೋಪಿಯನ್ನ ಗುಜರಾತ್ನ ಹರೀಶ್ ಮೆಹ್ತಾ ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳಿಂದ ಮಹಿಳೆ ಏಕಾಂಗಿಯಾಗಿ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಈ ವೇಳೆ ಆಕೆಯನ್ನ ಬಲವಂತವಾಗಿ ಭೇಟಿ ಮಾಡಲು ಹರೀಶ್ ಮೆಹ್ತಾ ಪ್ರಯತ್ನಪಟ್ಟಿದ್ದನು ಎನ್ನಲಾಗಿದೆ. ಆದರೆ ಆಕೆ ಬಾಗಿಲು ತೆರೆದಿರಲಿಲ್ಲ. ಇದೀಗ ರಸ್ತೆಯಲ್ಲಿ ಹೋಗ್ತಿದ್ದ ಆಕೆಯನ್ನ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಯಲ್ಲಿ ನಡೆದ ಮೂರನೇ ಕೊಲೆ ಇದಾಗಿರುವ ಕಾರಣ ಅಲ್ಲಿನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.