ETV Bharat / bharat

ವರದಕ್ಷಿಣೆ ಭೂತ: ಪತ್ನಿ ಹಾಗೂ ಆರು ತಿಂಗಳ ಮಗು ಕೊಲೆ ಮಾಡಿದ ಪಾಪಿ ಗಂಡ - ಬಿಹಾರ ಮರ್ಡರ್​

ಕಟ್ಟಿಕೊಂಡ ಹೆಂಡತಿ ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕಾಗಿ ಆಕೆ ಹಾಗೂ ಮಗುವಿನ ಕೊಲೆ ಮಾಡಿದ್ದ ಪಾಪಿ ಗಂಡನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Bihar murder
Bihar murder
author img

By

Published : Aug 26, 2021, 4:47 PM IST

ಬಾಗಲ್ಪುರ್​​(ಬಿಹಾರ): ವರದಕ್ಷಿಣೆ ಕಿರುಕುಳ ನೀಡಿರುವ ಗಂಡನೊಬ್ಬ ಪತ್ನಿ ಹಾಗೂ ಆರು ತಿಂಗಳ ಮಗುವಿನ ಕೊಲೆ ಮಾಡಿರುವ ಘಟನೆ ಬಿಹಾರದ ಬಾಗಲ್ಪುರ್​​ದಲ್ಲಿ ನಡೆದಿದ್ದು, ಘಟನೆ ಬಳಿಕ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಗುರುವಾರ ಬೆಳಗ್ಗೆ ಈ ದುರ್ಘಟನೆ ನಡೆದಿದ್ದು, ಪತಿ ಸುನೀಲ್​ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಹೆಂಡತಿ ಹಾಗೂ 6 ತಿಂಗಳ ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು. ಆದರೆ, ಕಾರ್ಯಪ್ರವೃತ್ತರಾದ ಪೊಲೀಸರು ಈಗಾಗಲೇ ಆತನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಮೃತ ಮಹಿಳೆಯ ತಂದೆ, ಕಳೆದ ಕೆಲ ವರ್ಷಗಳಿಂದ ವರದಕ್ಷಿಣೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದರೂ ಎಂದಿದ್ದಾರೆ.

ಇದನ್ನೂ ಓದಿರಿ: ನಟಿಯರ ಜೊತೆ ಸಖತ್​ ಡ್ಯಾನ್ಸ್​​ ಮಾಡಿ, ಹೀರೋಯಿನ್​ ಕಾಲಿಗೆ ಬಿದ್ದ ರಾಮ್​ಗೋಪಾಲ್​ ವರ್ಮಾ!

ಮತ್ತೊಂದು ಘಟನೆ

ಕೌಟುಂಬಿಕ ಜಗಳದಿಂದಾಗಿ ಗಂಡನೊಬ್ಬ ಗರ್ಭಿಣಿ ಪತ್ನಿ ಹಾಗೂ ಇಬ್ಬರು ಮಕ್ಕಳ ಕೊಲೆ ಮಾಡಿರುವ ಘಟನೆ ಬಿಹಾರದ ಸೊಂಡಿಯಾರ್​ದಲ್ಲಿ ನಡೆದಿದೆ. ಕಳೆದ 10 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಗೆ ಎರಡು ಮಕ್ಕಳಿದ್ದರು. ಆದರೆ, ಮೇಲಿಂದ ಮೇಲೆ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.