ETV Bharat / bharat

ತಾಯಿ ಆಸ್ತಿ ಹೆಸರಿಗೆ ಬರೆದುಕೊಡದಿದ್ದಕ್ಕೆ ಪತ್ನಿಯನ್ನು ಕೊಂದ ಹಾಕಿದ ಪತಿ! - ಪೊಲೀಸರು ತನಿಖೆ

ಆಸ್ತಿಗಾಗಿ ಕೊಲೆ ಪ್ರಕರಣ: ಪತಿ ಪತ್ನಿಯನ್ನು ಕೊಂದು ದೇಹದ ಅಂಗಾಂಗಳನ್ನು ಗ್ರಾಮದ ವಿವಿಧೆಡೆ ಎಸೆದು ಪರಾರಿಯಾಗಿರುವ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ. ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದು, ತನಿಖೆ ಮುಂದುವರಿದಿದೆ.

Wife killed case
ಪತ್ನಿ ಕೊಲೆ ಪ್ರಕರಣ
author img

By

Published : Mar 26, 2023, 8:43 PM IST

ನಳಂದಾ(ಬಿಹಾರ): ಆಸ್ತಿಗಾಗಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಆಕೆಯ ದೇಹವನ್ನು ಕತ್ತರಿಸಿ ಬೇರೆ ಬೇರೆ ಕಡೆ ಎಸೆದಿರುವ ಅಮಾನವೀಯ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ. ಮೃತರನ್ನು ಸಂಗೀತಾ ದೇವಿ ಎಂದು ಗುರುತಿಸಲಾಗಿದೆ. ಆರೋಪಿ ನಿತೀಶ್ ಕುಮಾರ್ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಮಾರ್ಚ್ 19 ರಿಂದ ನಾಪತ್ತೆಯಾಗಿದ್ದ ಮಹಿಳೆ..​ ಥಾರ್ಥಾರಿ ಪೊಲೀಸ್ ಠಾಣೆ ವ್ಯಾಪ್ತಿ ಮಸನ್ ಘಾಟ್ ಬಳಿ ಈ ದುಷ್ಕೃತ್ಯ ನಡೆದಿದೆ. ಮಾರ್ಚ್ 19 ರಿಂದ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಅವರ ದೇಹದ ಭಾಗಗಳು ಗ್ರಾಮದ ವಿವಿಧ ಕಡೆ ಪತ್ತೆಯಾದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು. ಬೀದಿನಾಯಿಗಳ ದಾಳಿಯಿಂದ ದೇಹದ ಭಾಗಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ಸ್ಥಳೀಯರಿಂದ ಸಿಕ್ಕಿತ್ತು ಮಾಹಿತಿ.. ಪೊಲೀಸರಿಗೆ ದೂರು ದಾಖಲಿಸಿಕೊಂಡು ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಮಹಿಳೆಯ ದೇಹದ ಕೈ, ಕಾಲು, ಕುತ್ತಿಗೆ ಪತ್ತೆಯಾಗಿದ್ದವು. ಆದರೆ ಮುಂಡ ನಾಪತ್ತೆಯಾಗಿತ್ತು. ಎರಡು ದಿನದ ಬಳಿಕ ಸ್ಥಳೀಯರು ಬಾವಿಯಲ್ಲಿ ಮಹಿಳೆಯ ಮುಂಡವನ್ನು ಕಂಡು ಮಾಹಿತಿ ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತಳ ಮಾವ ಹೇಳುವ ಪ್ರಕಾರ, ಸಂಗೀತಾ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದರು. ಸಂಗೀತಾ ಅವರನ್ನು ತಮ್ಮ ಮಗ ನಿತೀಶ್ ಕುಮಾರ್ ಕೊಡಲಿಯಿಂದ ಕೊಂದು ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಶವ ಪತ್ತೆಯಾದ ಬಳಿಕ ಎರಡು ದಿನಗಳ ಹಿಂದೆ ಗ್ರಾಮದ ಬಾವಿಯಿಂದ ಹೊರತೆಗೆಯಲಾಯಿತು. ನಂತರ ಪೊಲೀಸರು ಅದನ್ನು ಮಸಾನ್ ಘಾಟ್‌ನಲ್ಲಿ ಹೂಳಲು ಆದೇಶಿಸಿದ್ದರು. ಶವವನ್ನು ಹೂಳಿದಾಗ, ಬೀದಿ ನಾಯಿಗಳು ಮೃತದೇಹವನ್ನು ಹೊರತೆಗೆದು ಹಾನಿಗೊಳಿಸಿದ್ದವು ಎಂದು ಪೊಲೀಸ್ ಅಧಿಕಾರಿ ಪ್ರಸಾದ್ ತಿಳಿಸಿದ್ದಾರೆ.

ಮೃತಳ ಮಾವ ಹೇಳುವ ಪ್ರಕಾರ, ತಮ್ಮ ಮಗ ನಿತೀಶ್ ಕುಮಾರ್ ಸಂಗೀತಾಳನ್ನು ಕೊಡಲಿಯಿಂದ ಕೊಂದು ದೇಹದ ಭಾಗಗಳನ್ನು ಪ್ರದೇಶದ ವಿವಿಧೆಡೆ ಎಸೆದು ಆ ಪ್ರದೇಶದಿಂದ ಪರಾರಿಯಾಗಿದ್ದಾನೆ ಹಾಗೂ ನಿತೀಶ್ ಸಂಗೀತಾರನ್ನು ಆಕೆಯ ನಿವಾಸದಲ್ಲೇ ಕೊಂದಿದ್ದಾನೆ ಎಂದು ಪೊಲೀಸರು ಎದುರು ಆರೋಪ ಮಾಡಿದ್ದಾರೆ.

ತಾಯಿ ಆಸ್ತಿ ಬರೆದುಕೊಡದಿದ್ದಕ್ಕೆ ಕೊಲೆ: ಸಂಗೀತಾ ದೇವಿ ಅವರು ಆರೋಪಿ ನಿತೀಶ್ ಕುಮಾರ್ ಅವರನ್ನು 2006ರಲ್ಲಿ ಮದುವೆಯಾಗಿದ್ದರು. ಸಂಗೀತಾ ಅವರ ತಂದೆಗೆ ಒಬ್ಬಳೇ ಮಗಳು. ಪತಿ ನಿತೀಶ್ ಕುಮಾರ್ ಪತ್ನಿ ತಾಯಿಯ ಆಸ್ತಿಯನ್ನು ತನ್ನ ಹೆಸರಿಗೆ ಬರೆಸುವಂತೆ ಒತ್ತಾಯಿಸಿದ್ದನು. ಆದರೆ ಅದನ್ನು ಮಾಡಲು ನಿರಾಕರಿಸಿದಳು. ಇದರಿಂದ ಕೋಪಗೊಂಡ ನಿತೀಶ್​ಕುಮಾರ್ ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ಪತ್ತೆಗೆ ಪೊಲೀಸ್ ತಂಡ: ಈ ಕೊಲೆ ಪ್ರಕರಣದ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದೇವೆ. ಕೊಲೆಗೈದು ಆರೋಪಿ ನಿತೀಶ್ ಕುಮಾರ್ ಅವರು ತಲೆಮರೆಸಿಕೊಂಡಿದ್ದಾನೆ. ಆರೋಪಿ ಬಂಧನಕ್ಕೆ ಪೊಲೀಸ್ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಭೂ ವಿವಾದದಲ್ಲಿ ಎಂಟು ವರ್ಷದ ಬಾಲಕಿಗೆ ಗುಂಡಿಕ್ಕಿ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.