ETV Bharat / bharat

ಹೆಣ್ಣು ಹುಟ್ಟಿದ್ದಕ್ಕೆ ಕೋಪ : ಪತ್ನಿ ಕೊಲೆಗೈದ ಪಾಪಿ ಗಂಡ - ತೆಲಂಗಾಣ ಇತ್ತೀಚಿನ ನ್ಯೂಸ್​

ಸೆ.25ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಪಲ್ಲವಿ ಜೊತೆ ಗಂಡ ವೆಂಕಟೇಶ್ ಜಗಳವಾಡಿದ್ದಾನೆ. ಈ ವೇಳೆ ಕತ್ತು ಹಿಸುಕಿದ್ದಾನೆ. ಪ್ರಜ್ಞಾಹೀನಳಾಗಿದ್ದ ಪಲ್ಲವಿಯನ್ನ ಗದ್ವಾಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದಾಳೆ..

HUSBAND KILLED WIFE
HUSBAND KILLED WIFE
author img

By

Published : Sep 27, 2021, 5:24 PM IST

ಗದ್ವಾಲ,(ತೆಲಂಗಾಣ) : ಹೆಣ್ಣು ಹುಟ್ಟಿದ್ದರಿಂದ ಕೋಪಗೊಂಡ ಗಂಡನೋರ್ವ ಆಕೆಯ ಕೊಲೆ ಮಾಡಿರುವ ಘಟನೆ ತೆಲಂಗಾಣದ ಗದ್ವಾಲದಲ್ಲಿ ನಡೆದಿದೆ. ಆದರೆ, ಈಗ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗದ್ವಾಲ ಜಿಲ್ಲೆಯ ಮಾಲ್ದಕರ್​ ಸಂಸದರ ಕಚೇರಿಯಲ್ಲಿ ಅಂಟೆಡರ್​​ ಆಗಿ ವೆಂಟೇಶ್​​ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದರು. ಪತ್ನಿ ಪಲ್ಲವಿ ಎಂಬುವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ, ಕೋಪಗೊಂಡು ಆಕೆಯ ಪತಿ ವೆಂಕಟೇಶ್‌ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ. ಗದ್ವಾಲದ ನಲ್ಲಕುಂಟ ಇಡಮ್ಮ ಗುಡಿ ಬಳಿ ವಾಸವಾಗಿದ್ದ ವೆಂಕಟೇಶ್​​ 2009ರಲ್ಲಿ ಪಲ್ಲವಿ ಎಂಬ ಯುವತಿ ಜೊತೆ ವಿವಾಹವಾಗಿದ್ದ.

ಇದನ್ನೂ ಓದಿರಿ: ತೆಲಂಗಾಣ ಮಳೆಯಾರ್ಭಟ.. ಆಸ್ಪತ್ರೆಯ ICU ವಾರ್ಡ್​ನಲ್ಲಿ ರೋಗಿ ಮೇಲೆ ಕಳಚಿ ಬಿದ್ದ ಮೇಲ್ಛಾವಣಿ..

ಈ ವೇಳೆ ವರದಕ್ಷಿಣೆ ರೂಪದಲ್ಲಿ 60 ಗ್ರಾಂ ಚಿನ್ನ, 6 ಲಕ್ಷ ರೂ. ನಗದು ಹಣ ಪಡೆದುಕೊಂಡಿದ್ದಾನೆ. ಇದಾದ ಬಳಿಕ ಕೂಡ ಹೆಚ್ಚುವರಿ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಪಲ್ಲವಿ ಈಗಾಗಲೇ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ತಿಂಗಳ 22ರಂದು 2ನೇ ಹೆರಿಗೆ ವೇಳೆ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸೆ.25ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಪಲ್ಲವಿ ಜೊತೆ ಗಂಡ ವೆಂಕಟೇಶ್ ಜಗಳವಾಡಿದ್ದಾನೆ. ಈ ವೇಳೆ ಕತ್ತು ಹಿಸುಕಿದ್ದಾನೆ. ಪ್ರಜ್ಞಾಹೀನಳಾಗಿದ್ದ ಪಲ್ಲವಿಯನ್ನ ಗದ್ವಾಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದಾಳೆ. ಈಗಾಗಲೇ ಮೃತ ಮಹಿಳೆ ತಂದೆ ಆಂಜನೇಯ ಎಂಬುವರು ಪ್ರಕರಣ ದಾಖಲು ಮಾಡಿದ್ದು, ತನಿಖೆ ಆರಂಭಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.