ETV Bharat / bharat

ಹೆಂಡತಿಯನ್ನು ಬರ್ಬರವಾಗಿ ಕೊಂದು ತುಂಡು ತುಂಡಾಗಿ ಕತ್ತರಿಸಿದ ಪತಿ! - ಪತ್ನಿ ಕೊಲೆ ಮಾಡಿದ ಪತಿ

ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿರುವ ಅಮಾನವೀಯ ಘಟನೆ ಜಾರ್ಖಂಡ್​ನ ಸಾಹಿಬ್‌ಗಂಜ್‌ನಲ್ಲಿ ನಡೆದಿದೆ.

murder
ಕೊಲೆ
author img

By

Published : Dec 18, 2022, 11:32 AM IST

ರಾಂಚಿ: ಮುಂಬೈ ಮೂಲದ ಯುವತಿ ಶ್ರದ್ಧಾ ಭೀಕರ ಹತ್ಯೆ ಪ್ರಕರಣ​ ನೆನಪಿಸುವ ರೀತಿಯಲ್ಲೇ ಜಾರ್ಖಂಡ್​ನ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ ಘಟನೆಯೊಂದು ನಡೆದಿದೆ. ದುರುಳನೊಬ್ಬ ತನ್ನ ಹೆಂಡತಿಯನ್ನು ಬರ್ಬರವಾಗಿ ಕೊಂದು ಮೃತದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ್ದಾನೆ.

ಬುಡಕಟ್ಟು ಪಹಾರಿ ಸಮಾಜಕ್ಕೆ ಸೇರಿದ ರುಬಿಕಾ ಪಹಾರಿಯಾ ಮೃತಪಟ್ಟಿರುವ ಮಹಿಳೆ. ದಿಲ್ದಾರ್ ಅನ್ಸಾರಿ ಕೊಲೆ ಆರೋಪಿ. ಈತ ರುಬಿಕಾಳನ್ನು ಎರಡನೇ ಮದುವೆಯಾಗಿದ್ದ. ಕಳೆದ ಕೆಲ ದಿನಗಳಿಂದ ಆಕೆ ನಾಪತ್ತೆಯಾಗಿದ್ದರು. ಶನಿವಾರ ಸಂಜೆ ಮಹಿಳೆಯ ಸಂಬಂಧಿಕರು ಬೋರಿಯೊ ಪೊಲೀಸ್ ಠಾಣೆಗೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶನಿವಾರ ರಾತ್ರಿ ಮಹಿಳೆಯ ಮೃತದೇಹದ ತುಂಡುಗಳು ಪತ್ತೆಯಾಗಿವೆ ಎಂದು ಸಾಹಿಬ್‌ಗಂಜ್ ಎಸ್​ಪಿ ಅನುರಂಜನ್ ಕಿಸ್ಪೊಟ್ಟಾ ತಿಳಿಸಿದರು.

ಇದನ್ನೂ ಓದಿ: ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ.. ತುಂಡಾಗಿ ಕತ್ತರಿಸಿ ಬೀದಿಗಳಲ್ಲಿ ಎಸೆದ ಪ್ರಿಯಕರ!

ಶ್ವಾನದಳ, ವೈದ್ಯರ ತಂಡ ಸೇರಿದಂತೆ ಪೊಲೀಸರು ಶೋಧ ಕಾರ್ಯ ಮುಂದುವರಿದ್ದಾರೆ. ಆರೋಪಿ ದಿಲ್ದಾರ್ ಅನ್ಸಾರಿ ತಲೆಮರೆಸಿಕೊಂಡಿದ್ದಾನೆ. ಆತನ ಕುಟುಂಬಸ್ಥರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್​ಪಿ ಹೇಳಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ರೀತಿಯ ಮತ್ತೊಂದು ಕೇಸ್​ ಬಯಲು.. ಪತಿಯ ದೇಹವನ್ನು 22 ತುಂಡುಗಳಾಗಿ ಕತ್ತರಿಸಿದ ಪತ್ನಿ: ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.