ETV Bharat / bharat

ಮಗುವಾಗದ ಕಾರಣ ಪತ್ನಿಯ ಕೈ ಕಾಲು ಮುರಿದ ಪಾಪಿ ಪತಿ.. ಮಹಿಳೆ ಸ್ಥಿತಿ ಗಂಭೀರ - Andhra pradesh man broke Wifes leg arm

ಮಕ್ಕಳಾಗದ್ದಕ್ಕೆ ಪತ್ನಿಯ ಕೈ ಕಾಲು ಮುರಿದ ಪತಿ - ಆಂಧ್ರಪ್ರದೇಶದಲ್ಲಿ ಪತ್ನಿ ಮೇಲೆ ಪತಿ ದೌರ್ಜನ್ಯ - ಮಹಿಳೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ - ಕ್ರಮಕ್ಕೆ ಆಗ್ರಹಿಸಿ ಪೊಲೀಸ್​ ಠಾಣೆಗೆ ದೂರು

husband-broke-his-wifes-arm-and-leg
ಮಗುವಾಗದ ಕಾರಣ ಪತ್ನಿಯ ಕೈ ಕಾಲು ಮುರಿದ ಪಾಪಿ ಪತಿ
author img

By

Published : Dec 28, 2022, 12:22 PM IST

Updated : Dec 28, 2022, 12:37 PM IST

ಪತ್ತಿಕೊಂಡ(ಆಂಧ್ರಪ್ರದೇಶ): ಮಕ್ಕಳಾಗಲಿಲ್ಲ ಎಂಬ ಕಾರಣಕ್ಕಾಗಿ ಪತಿರಾಯನೊಬ್ಬ ಕೋಪದಲ್ಲಿ ಪತ್ನಿಯ ಕೈ - ಕಾಲು ಮುರಿದು ಹಾಕಿದ್ದಾನೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಮತ್ತು ಆತನ ಕುಟುಂಬಸ್ಥರ ಮೇಲೆ ದೂರು ದಾಖಲಿಸಲಾಗಿದೆ.

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಚಾನುಗೊಂಡಲ್​ ಎಂಬಲ್ಲಿ ಮಂಗಳವಾರ ಈ ಘಟನೆ ಬೆಳಕಿಗೆ ಬಂದಿದೆ. ಮೂರು ವರ್ಷಗಳ ಹಿಂದೆ ಆರೋಪಿ ಲಾಲಪ್ಪ ಮತ್ತು ಸಂತ್ರಸ್ತೆ ಆದಿಲಕ್ಷ್ಮಿಗೆ ವಿವಾಹವಾಗಿತ್ತು. ಅಂದಿನಿಂದಲೂ ಒಂದಲ್ಲಾ, ಒಂದು ಕಾರಣಕ್ಕೆ ಪತ್ನಿಯ ಜೊತೆಗೆ ಪತಿ ಕಿತ್ತಾಡುತ್ತಲೇ ಇದ್ದ. ಮಂಗಳವಾರ ಕೋಪಿಷ್ಠ ಲಾಲಪ್ಪ ವಿವಾಹವಾಗಿ ಮೂರು ವರ್ಷವಾದರೂ ಮಗು ಹೆತ್ತಿಲ್ಲ. ನೀನು ಬಂಜೆ ಎಂದು ನಿಂದಿಸಿ ಹಲ್ಲೆ ನಡೆಸಿದ್ದಾನೆ.

ಅಷ್ಟಕ್ಕೆ ಬಿಡದೇ ಒಂದು ಕೈ- ಕಾಲನ್ನೂ ಮುರಿದಿದ್ದಾನೆ. ಇದಕ್ಕೆ ಕುಟುಂಬಸ್ಥರು ಕೂಡ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಮಹಿಳೆ ನೋವಿನಿಂದ ಒದ್ದಾಡಿ ಮೂರ್ಛೆ ಹೋಗಿದ್ದಾರೆ. ಬಳಿಕ ವಿಷಯ ತಿಳಿದ ಮಹಿಳೆಯ ಕುಟುಂಬಸ್ಥರು ಮನೆಗೆ ಧಾವಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಂತ್ರಸ್ತೆಯ ಪೋಷಕರು ನೀಡಿದ ಮಾಹಿತಿಯ ಪ್ರಕಾರ, ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ತನ್ನ ಮಗಳಿಗೆ ಅಳಿಯ ಕಿರುಕುಳ ನೀಡುತ್ತಿದ್ದ. ಹಲವು ಬಾರಿ ತಿಳಿ ಹೇಳಿದರೂ ಕೇಳದೇ ಹಲ್ಲೆ ಮಾಡುತ್ತಿದ್ದ. ಮಂಗಳವಾರ ಆಕೆಯ ಕೈ ಕಾಲು ಮುರಿದು ಕ್ರೂರತ್ವ ಮೆರೆದಿದ್ದಾನೆ. ಇದನ್ನೂ ಕಂಡೂ ಕಾಣದಂತಿದ್ದ ಕುಟುಂಬಸ್ಥರು ಬೆಂಬಲಿಸಿದ್ದಾರೆ. ಮಗಳ ಮೇಲೆ ದೌರ್ಜನ್ಯ ಎಸಗಿದ ಆರೋಪಿ ಮತ್ತು ಕುಟುಂಬಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ಕುಟುಂಬಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಓದಿ: ವಿಚ್ಚೇದನ ಪಡೆದ ಬಳಿಕ ಕೋರ್ಟ್ ಆವರಣದಲ್ಲೇ ಯುವಕನ ಮೇಲೆ ತೀವ್ರ ಹಲ್ಲೆ

Last Updated : Dec 28, 2022, 12:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.