ದೌಸಾ(ರಾಜಸ್ಥಾನ): ಉತ್ತರ ಪ್ರದೇಶ ಪೊಲೀಸರ ತಪ್ಪಿಗೆ ಜಿಲ್ಲೆಯ ಇಬ್ಬರು ಯುವಕರು ಹಲವು ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಓರ್ವ ಮಹಿಳೆಯನ್ನು ಕೊಲೆಗೈದ ಆರೋಪದಲ್ಲಿ ಈ ಇಬ್ಬರನ್ನು ಜೈಲಿಗೆ ಕಳುಹಿಸಲಾಗಿತ್ತು. ಆದ್ರೀಗ ಮಹಿಳೆ ಜೀವಂತವಾಗಿದ್ದು, ತನ್ನ ಎರಡನೇ ಪತಿಯೊಂದಿಗೆ ಜೀವನ ನಡೆಸುತ್ತಿದ್ದಾಳೆ.
ಮಹಿಳೆಯನ್ನು ಕೊಲೆಗೈದ ಆರೋಪದಲ್ಲಿ ಇಬ್ಬರೂ ಹಲವು ವರ್ಷಗಳವರೆಗೆ ಶಿಕ್ಷೆಗೆ ಗುರಿಯಾಗಿದ್ದರು. ಮಹಿಳೆ ಬದುಕಿರುವ ಬಗ್ಗೆ ತಿಳಿದ ತಕ್ಷಣ ಪೊಲೀಸರು ಆಕೆಯನ್ನು ಯುಪಿಗೆ ಕರೆದೊಯ್ದು, ಅಲ್ಲಿ ಹೇಳಿಕೆ ದಾಖಲಿಸಿಕೊಂಡ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ದೌಸಾದ ರಸೀದ್‌ಪುರ ನಿವಾಸಿ ಸೋನು ಸೈನಿ ಮತ್ತು ಉದಯಪುರದ ನಿವಾಸಿ ಗೋಪಾಲ್ ಸೈನಿ ಕೆಲವೊಮ್ಮೆ ಜೈಲು ಮತ್ತು ಕೆಲವೊಮ್ಮೆ ಜಾಮೀನಿಗಾಗಿ ನ್ಯಾಯಾಲಯದಲ್ಲಿದ್ದಾರೆ. ಅಪರಾಧ ಮಾಡದಿದ್ದರೂ ಇಬ್ಬರೂ ಗಂಭೀರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಇಬ್ಬರನ್ನು ಬಂಧಿಸುವ ಮೂಲಕ ಯುಪಿ ಪೊಲೀಸರು ಸಾಕಷ್ಟು ಪ್ರಶಂಸೆಗಳಿಸಿದ್ದು, 15,000 ರೂಪಾಯಿ ಬಹುಮಾನವನ್ನೂ ಪಡೆದಿದ್ದರು. ಕಳೆದ 7 ವರ್ಷಗಳಿಂದ ಕೊಲೆ ಆರೋಪ ಎದುರಿಸುತ್ತಿರುವ ಈ ಇಬ್ಬರು ಸಂತ್ರಸ್ತರು ವ್ಯಾಜ್ಯದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ.
ಪ್ರಕರಣದ ಕುರಿತು ಮತ್ತಷ್ಟು ವಿವರ: 2015ರಲ್ಲಿ ಮಹಿಳೆ ಆರತಿ ನಾಪತ್ತೆಯಾಗಿದ್ದರು. ನಂತರ ವೃಂದಾವನದ ನಾಗ್ಲಾ ಜಿಂಗಾ ಕಾಲುವೆಯಲ್ಲಿ ಶವ ಪತ್ತೆಯಾಗಿದೆ ಎಂದು ದೌಸಾದ ಮೆಹಂದಿಪುರ ಬಾಲಾಜಿ ಪೊಲೀಸ್ ಠಾಣಾಧಿಕಾರಿ ಅಜಿತ್ ಬಡ್ಸಾರಾ ತಿಳಿಸಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಆದರೆ ಕೆಲವು ದಿನಗಳ ನಂತರ ಆರತಿಯ ತಂದೆ ವೃಂದಾವನಕ್ಕೆ ಆಗಮಿಸಿ ಕಾಲುವೆಯಲ್ಲಿ ಪತ್ತೆಯಾದ ಶವ ತನ್ನ ಮಗಳು ಆರತಿಯದ್ದು ಎಂದು ಗುರುತಿಸಿ ಪತಿ ಸೋನು ಮತ್ತು ಆತನ ಸ್ನೇಹಿತ ಗೋಪಾಲ್ ಆರೋಪಿಗಳೆಂದು ದೂರು ನೀಡಿದ್ದರು.
ಇದನ್ನೂ ಓದಿ: ಗೋಧಿ ಚೀಲ ಕದ್ದ ಆರೋಪಿಯನ್ನ ಟ್ರಕ್ ಬಾನೆಟ್ಗೆ ಕಟ್ಟಿ ಠಾಣೆಗೆ ಕರೆದೊಯ್ದ ಚಾಲಕ..!
ಇದರಿಂದ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಿದ್ದರು. ಆರತಿ ಯುಪಿಯ ನಿವಾಸಿಯಾಗಿದ್ದರು. ಇತ್ತ ಇಬ್ಬರನ್ನು ಬಂಧಿಸಿ, ಜೈಲಿಗಟ್ಟಿದರೆ ಅತ್ತ ಆರತಿ ತನ್ನ ಎರಡನೇ ಪತಿ ಭಗವಾನ್ ಸಿಂಗ್ ರೆಬಾರಿಯೊಂದಿಗೆ ವಿಶಾಲ ಗ್ರಾಮದಲ್ಲಿ ವಾಸಿಸುತ್ತಿದ್ದಳು. ವೃಂದಾವನ ಪೊಲೀಸರು ಕೊಲೆ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡದೇ ಇದ್ದಿದ್ದೇಕೆ ಮತ್ತು ಇಬ್ಬರು ಅಮಾಯಕರನ್ನು ಬಂಧಿಸಿ ಸುದೀರ್ಘ ಕಾಲ ಕಂಬಿಗಳ ಹಿಂದೆ ಇರಿಸಿದ್ದೇಕೆ ಎಂಬ ಬಹುದೊಡ್ಡ ಪ್ರಶ್ನೆಗಳು ಮೂಡಿವೆ.
ಆರತಿಯ ತಂದೆ ತನ್ನ ಮಗಳ ಕೊಲೆಯಾಗಿದೆ ಎಂದು ಸುಳ್ಳು ಎಫ್‌ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಕಳೆದ 7 ವರ್ಷಗಳಿಂದ ಆರತಿ ನಿರಂತರವಾಗಿ ಫೋನ್‌ನಲ್ಲಿ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರೂ ಪೊಲೀಸರಿಗೆ ಈ ಬಗ್ಗೆ ತಿಳಿಸಿಲ್ಲ. ಹಾಗಾಗಿ ಈ ಇಬ್ಬರು ಅಮಾಯಕರಿಗೆ ನ್ಯಾಯ ದೊರಕಿಸಿಕೊಡಲು ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.