ETV Bharat / bharat

ಬಿಹಾರದಲ್ಲಿ ದಲೈಲಾಮಾ ವಿರುದ್ಧ ಗೂಢಾಚಾರಿಕೆ.. ಚೀನಿ ಮಹಿಳೆಯ ರೇಖಾಚಿತ್ರ ಬಿಡುಗಡೆ

ಟಿಬೆಟ್​ ಧರ್ಮಗುರು ದಲೈಲಾಮಾ ವಿರುದ್ಧ ಗೂಢಾಚಾರಿಕೆ- ಬಿಹಾರದಲ್ಲಿ ಗಯಾದಲ್ಲಿ ಚೀನಾ ಗೂಢಾಚಾರ- ದಲೈಲಾಮಾ ಹಿಂಬಾಲಿಸುತ್ತಿರುವ ಚೀನಿ ಮಹಿಳೆ- ಗೂಢಾಚಾರಿಣಿಯ ರೇಖಾಚಿತ್ರ ಬಿಡುಗಡೆ

spying-on-dalai-lama
ದಲೈಲಾಮಾ ವಿರುದ್ಧ ಗೂಢಾಚಾರಿಕೆ
author img

By

Published : Dec 29, 2022, 11:19 AM IST

ಗಯಾ (ಬಿಹಾರ): ಟಿಬೆಟ್​ ಧರ್ಮಗುರು ದಲೈಲಾಮಾ ಅವರ ವಿರುದ್ಧ ಬಿಹಾರದಲ್ಲಿ ಗೂಢಾಚಾರಿಕೆ ನಡೆಸುತ್ತಿರುವ ಚೀನಿ ಮಹಿಳೆಗಾಗಿ ಗುಪ್ತಚರ ದಳಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಇದರ ಭಾಗವಾಗಿ ಮಹಿಳೆಯ ರೇಖಾಚಿತ್ರವನ್ನು ಚಿತ್ರಿಸಿ ಬಿಡುಗಡೆ ಮಾಡಲಾಗಿದೆ.

ಜೀವ ಬೆದರಿಕೆ ಹಿನ್ನೆಲೆ ಬಿಹಾರದ ಗಯಾದಲ್ಲಿ ಆಶ್ರಯ ಪಡೆದಿರುವ ಟಿಬೆಟಿಯನ್​​ ಧರ್ಮಗುರು ದಲೈಲಾಮಾ ಅವರ ಚಲನವಲನಗಳ ಮೇಲೆ ಕಣ್ಣಿಡಲು ಚೀನಾ ಮಹಿಳೆಯೊಬ್ಬಳನ್ನು ಗೂಢಾಚಾರಿಕೆಗೆ ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ. ದಲೈಲಾಮಾ ಅವರಿಗೆ ಸರ್ಕಾರ ಬಿಗಿ ಭದ್ರತೆ ನೀಡಿದೆ. ಗೂಢಾಚಾರಿಕೆಯ ಶಂಕೆಯ ಮೇಲೆ ಚೀನಿ ಮಹಿಳೆಯ ಪತ್ತೆಗಾಗಿ ಕೇಂದ್ರ ಭದ್ರತಾ ಮತ್ತು ಗುಪ್ತಚರ ದಳ ಪತ್ತೆ ಕಾರ್ಯ ಆರಂಭಿಸಿದೆ.

ಚೀನಾದ ಮಹಿಳೆ ದೇಶದ ವಿವಿಧ ಭಾಗಗಳಲ್ಲಿ ತಲೆಮರೆಸಿಕೊಂಡು ಸಂಚರಿಸುತ್ತಿದ್ದಾಳೆ. ಬಿಹಾರದ ಗಯಾವನ್ನು ತಲುಪಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಶಂಕಿತ ಗೂಢಾಚಾರಿಣಿಯ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಆಕೆ 2 ವರ್ಷಗಳಿಂದ ದೇಶದಲ್ಲಿ ವಾಸಿಸುತ್ತಿದ್ದಾಳೆ. ಆಕೆಯ ರೇಖಾಚಿತ್ರ ಬಿಡಿಸಲಾಗಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಲಾಗಿದೆ. ಶೀಘ್ರವೇ ಆಕೆಯನ್ನು ಪತ್ತೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ನಿಷೇಧಿಸಿದ್ದರೂ ಪಿಎಫ್​ಐ ಸಕ್ರಿಯ ಚಟುವಟಿಕೆ.. ಕೇರಳದ 56 ಕಡೆ ಎನ್​ಐಎ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.