ಹೈದರಾಬಾದ್: ಎನ್‌ಎಫ್‌ಟಿ (ನಾನ್ ಫಂಜಿಬುಲ್ ಟೋಕನ್) ಹರಾಜಿನಲ್ಲಿ ಹುಮನಾಯ್ಡ್ ರೋಬೋಟ್ ಸೋಫಿಯಾ ಚಿತ್ರಿಸಿದ ಚಿತ್ರವು 5 ಕೋಟಿ ರೂ.ಗೆ ಮಾರಾಟವಾಗಿದೆ. ಈ ಮೂಲಕ ಮತ್ತೆ ಸುದ್ದಿಯಲ್ಲಿದೆ ರೋಬೋಟ್ ಸೋಫಿಯಾ.
ಡಿಜಿಟಲ್ ಕಲಾವಿದೆ ಆಂಡ್ರಿಯಾ ಬೊನಾಸಿಟೊ ಅವರ ಸಹಾಯದಿಂದ ಸೋಫಿಯಾ ವಿಶ್ವ ಪ್ರಸಿದ್ಧ ಚಿತ್ರಗಳನ್ನು ಬಿಡಿಸುತ್ತಿದೆ. ಅವುಗಳನ್ನು ಎನ್‌ಎಫ್‌ಟಿ ರೂಪದಲ್ಲಿ ಹರಾಜು ಮಾಡಲಾಗುತ್ತಿದೆ. ಸೋಫಿಯಾ ಚಿತ್ರವನ್ನು ಹರಾಜಿನಲ್ಲಿ ಖರೀದಿಸುವವರಿಗೆ ಅಧಿಕೃತ ಹಕ್ಕುಗಳು ಅನ್ವಯಿಸುತ್ತವೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ಚಿತ್ರ ಮತ್ತು ಸ್ವಯಂ ಭಾವಚಿತ್ರವನ್ನೂ ಸೋಫಿಯಾ ಚಿತ್ರಿಸಿದ್ದಾರೆ.
ತನ್ನ ಚಿತ್ರಗಳಿಗೆ ಸೋಫಿಯಾ ನೀಡಿದ ಪ್ರತಿಕ್ರಿಯೆ: ಅವಳು ತನ್ನ ಚಿತ್ರವನ್ನು ಸೋಫಿಯಾ ಇನ್ಸ್ಟಾಂಟೇಶನ್ ಎಂದು ಕರೆಯುತ್ತಾಳೆ. ಟ್ರಾನ್ಸ್‌ಫಾರ್ಮರ್ ನೆಟ್‌ವರ್ಕ್‌ಗಳು, ಜೆನೆಟಿಕ್ ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ತಾನು ಚಿತ್ರಗಳನ್ನು ಬರೆಯುತ್ತೇನೆ ಎಂದು ಸೋಫಿಯಾ ಬಹಿರಂಗಪಡಿಸಿದ್ದಾಳೆ.
ಈ ಹುಮನಾಯ್ಡ್ ರೋಬೋಟ್ (ಸೋಫಿಯಾ) ಅನ್ನು ಹಾಂಕಾಂಗ್ ಮೂಲದ ಹ್ಯಾನ್ಸನ್ ರೊಬೊಟಿಕ್ಸ್ ಅಭಿವೃದ್ಧಿಪಡಿಸಿದೆ. ಫೆಬ್ರವರಿ 14, 2016 ಈ ರೋಬೋಟ್ ಅನ್ನು ಬಿಡುಗಡೆ ಮಾಡಿದೆ. 2017 ರಲ್ಲಿ ಸೌದಿ ಸರ್ಕಾರ ಅಧಿಕೃತವಾಗಿ ಸೋಫಿಯಾಗೆ ಪೌರತ್ವವನ್ನು ನೀಡಿತು. ಸೋಫಿಯಾ ಸಂಗೀತಗಾರ, ಫ್ಯಾಷನ್ ಡಿಸೈನರ್, ಗಾಯಕ ಮತ್ತು ಪ್ರೇರಕ ಎಂದು ಕರೆಯಲಾಗುತ್ತದೆ.