ETV Bharat / bharat

ಠಾಣೆ ಸ್ವಚ್ಛಗೊಳಿಸುವವನ ಮಗಳ ಮದುವೆಗೆ ಬಂದು ನೆರವು ನೀಡಿದ ಪೊಲೀಸರು - ಸೋಜತ್ ರೋಡ್​ ನಗರದಲ್ಲಿ ಪೊಲೀಸರ ಮಾನವೀಯತೆ

ಲಾಕ್​ಡೌನ್​ನಲ್ಲಿ ಕೋವಿಡ್ ಮಾರ್ಗಸೂಚಿ ಅನುಸಾರ ವಿವಾಹ ಕಾರ್ಯಕ್ರಮ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

human-angle-story-while-lockdown-for-national-desk
ಠಾಣೆ ಸ್ವಚ್ಛಗೊಳಿಸುವವನ ಮಗಳ ಮದುವೆ ಬಂದು ನೆರವು ನೀಡಿದ ಪೊಲೀಸ್​ ಸಿಬ್ಬಂದಿ
author img

By

Published : Apr 27, 2021, 3:49 PM IST

ಸೋಜತ್‌ ರೋಡ್ (ರಾಜಸ್ಥಾನ) : ಲಾಕ್​ಡೌನ್ ವೇಳೆ ಮದುವೆಯೊಂದಕ್ಕೆ ತೆರಳಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮಾನವೀಯತೆ ಮೆರೆದಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯ ಸೋಜತ್‌ರೋಡ್ ನಗರದಲ್ಲಿ ನಡೆದಿದೆ.

ಸೋಜತ್‌ರೋಡ್ ಪೊಲೀಸ್ ಠಾಣೆಯಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡುವ ರಮೇಶ್ ತನ್ನ ಮಗಳಿಗೆ ಮದುವೆ ಮಾಡುತ್ತಿದ್ದು, ಲಾಕ್​ಡೌನ್ ವೇಳೆ ಸಂಕಷ್ಟ ಎದುರಿಸುತ್ತಿದ್ದರು.

ಈ ವೇಳೆ ಅಲ್ಲಿಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿ ಸೀಮಾ ಜಾಕರ್​ ಮತ್ತು ಇತರ ಸಿಬ್ಬಂದಿ ವಧು-ವರರಿಗೆ ಆಶೀರ್ವಾದ ಮಾಡಿದ್ದಲ್ಲದೇ 51 ಸಾವಿರ ರೂ. ನಗದು ನೀಡಿ ಸಹಕರಿಸಿದ್ದಾರೆ.

ಇದನ್ನೂ ಓದಿ: ಗ್ವಾಲಿಯರ್‌ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ; 10 ಮಂದಿ ಬಲಿ ಪಡೆದ ಹೆಮ್ಮಾರಿ

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮಾಡಿದ ಕೆಲಸಕ್ಕೆ ರಮೇಶ್ ಹಾಗೂ ಅವರ ಕುಟುಂಬ ಧನ್ಯವಾದ ಹೇಳಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಕೇಳಿ ಬಂದಿದೆ.

ಲಾಕ್​ಡೌನ್​ನಲ್ಲಿ ಕೋವಿಡ್ ಮಾರ್ಗಸೂಚಿ ಅನುಸಾರ ವಿವಾಹ ಕಾರ್ಯಕ್ರಮ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.