ETV Bharat / bharat

100 ಕೆಜಿ, 6.1 ಮೀಟರ್​ ಉದ್ದದ ಹೆಬ್ಬಾವು.. ಬೃಹತ್​ ಪೈಥಾನ್ ಎತ್ತಲು ಬಂತು ಕ್ರೇನ್​ - ಬೃಹತ್ ಹೆಬ್ಬಾವು

ಪ್ರಪಂಚದಲ್ಲೇ ಅತಿದೊಡ್ಡದು ಎನ್ನಲಾಗಿರುವ ಹೆಬ್ಬಾವುವೊಂದು ಪತ್ತೆಯಾಗಿದ್ದು, ಕ್ರೇನ್​ ಮೂಲಕ ಅದನ್ನ ಮೇಲೆ ಎತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Huge Snake
Huge Snake
author img

By

Published : Oct 22, 2021, 6:53 PM IST

ಧನ್ಬಾದ್​(ಜಾರ್ಖಂಡ್​): ಜಾರ್ಖಂಡ್​​ನ ಧನ್ಬಾದ್​ನಲ್ಲಿ ಸಿಕ್ಕಿರುವ ಬೃಹತ್​ ಗಾತ್ರದ ಹೆಬ್ಬಾವುವೊಂದು ಸಿಕ್ಕಿದ್ದು, ನೋಡುಗರನ್ನ ಹೌಹಾರಿಸಿದೆ ಎನ್ನಲಾಗಿದೆ. ಇದು ಬರೋಬ್ಬರಿ 100 ಕೆಜಿ ತೂಕ ಹಾಗೂ 6.1 ಮೀಟರ್​ ಉದ್ದವಿದ್ದು, ಎತ್ತಲು ಕ್ರೇನ್​ ಬಳಕೆ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​​ ಆಗಿದ್ದು, ಕಳೆದ ಎರಡು ವಾರಗಳಿಂದ ಸಿಂಧ್ರಿಯಲ್ಲಿ ಈ ಹಾವು ಹರಿದಾಡುತ್ತಿತ್ತು ಎನ್ನಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಶ್ವದ ಅತಿದೊಡ್ಡ ಹಾವು ಎಂದು ಹೇಳಲಾಗ್ತಿದೆ. ರಾಜ್ಯಸಭಾ ಸದಸ್ಯರಾಗಿರುವ ಪರಿಮಲ್ ನಾಥ್ವಾನಿ ತಮ್ಮ ಟ್ವಿಟರ್​​ನಲ್ಲಿ ಈ ಹಾವಿನ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿರಿ: ಭಾರತ - ಇಂಗ್ಲೆಂಡ್​ ನಡುವೆ ರದ್ದಾದ ಫೈನಲ್​​ ಟೆಸ್ಟ್​​ ಪಂದ್ಯಕ್ಕೆ ಮುಹೂರ್ತ ಫಿಕ್ಸ್​​.. ಈ ತಿಂಗಳಲ್ಲಿ ಹಣಾಹಣಿ

ಕೆಲವೊಂದು ಮಾಹಿತಿ ಪ್ರಕಾರ ಡೊಮಿನಿಕಾ ಅರಣ್ಯ ಪ್ರದೇಶದಲ್ಲಿ ಈ ಹಾವು ಕಂಡು ಬಂದಿದ್ದು, ಟಿಕ್​ಟಾಕ್​​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಜಾರ್ಖಂಡ್​​ನಲ್ಲಿ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಧನ್ಬಾದ್​ನ ಸ್ಥಳೀಯ ಆಡಳಿತ ಮಂಡಳಿ ಕೂಡ ಇದೇ ರೀತಿಯ ಹೇಳಿಕೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.