ಪೂಂಚ್, ಜಮ್ಮು ಕಾಶ್ಮೀರ: ಕಣಿವೆನಾಡು ಜಮ್ಮು ಕಾಶ್ಮೀರದಲ್ಲಿ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂಂಚ್ ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಪೂಂಚ್ನ ಎಸ್ಎಸ್ಪಿ ಡಾ.ವಿನೋದ್ ಕುಮಾರ್ ಮತ್ತು ಡಿಎಸ್ಪಿ ಮುನೀಶ್ ಶರ್ಮಾ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣಾ ತಂಡ (ಸ್ಪೆಷಲ್ ಆಪರೇಷನ್ ಗ್ರೂಪ್) ಸ್ಥಳೀಯ ಸೈನಿಕರ ಜೊತೆಗೂಡಿ ಕ್ವಾಸ್ಬಾ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದೆ.
ಇದನ್ನೂ ಓದಿ: ಕೋವಿಡ್ ಲಸಿಕೆ ಉತ್ಪಾದಕರಿಗೆ ಜಿಎಸ್ಟಿ ವಿನಾಯಿತಿ : ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್
ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆದಿದ್ದು, ಒಂದು ಎಕೆ-56, ಒಂದು ಮ್ಯಾಗಝೀನ್, 30 ಗುಂಡುಗಳು, ಎರಡು ಚೀನಾದ ಪಿಸ್ತೂಲ್ಗಳು, ಒಂದು ಪಿಸ್ತೂಲ್ ಮ್ಯಾಗಝೀನ್ ಅನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.