ETV Bharat / bharat

ಮಹಾ ಶಿವರಾತ್ರಿಯಂದು ಈ ರಾಶಿಯವರಿಗಿದೆ ಕಂಟಕ...!

ಮಹಾ ಶಿವರಾತ್ರಿಯಂದು ಕೆಲ ರಾಶಿಗಳಿಗೆ ಯೋಗ ಪ್ರಾಪ್ತಿಯಾದ್ರೆ, ಇನ್ನು ಕೆಲ ರಾಶಿಯವರಿಗಿ ಕಂಟಕ ಎದುರಾಗಿದೆ.

raipur  shivratri  mahashivratri  shivratri in raipur  shiv temple in raipur  vinit sharma  how to worship lord shiva on this mahashivratri  worship lord shiva  ಮಹಾ ಶಿವರಾತ್ರಿ  ಮಹಾ ಶಿವರಾತ್ರಿಯಂದು ಈ ರಾಶಿಯವರಿಗಿದೆ ಕಂಟಕ  ಮಹಾ ಶಿವರಾತ್ರಿ ಆಚರಣೆ
ಮಹಾ ಶಿವರಾತ್ರಿಯಂದು ಈ ರಾಶಿಯವರಿಗಿದೆ ಕಂಟಕ
author img

By

Published : Mar 11, 2021, 10:41 AM IST

ರಾಯ್‌ಪುರ: ಮಹಾಶಿವರಾತ್ರಿಯನ್ನು ಶಿವ ಮತ್ತು ಪಾರ್ವತಿಯ ವಿವಾಹ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಶಿವ ಮತ್ತು ಪಾರ್ವತಿಗೆ ವಿಶೇಷ ಅಲಂಕಾರಗಳ ಮೂಲಕ ಪೂಜಿಸಲಾಗುತ್ತದೆ. ಮಹಾಶಿವರಾತ್ರಿಯಂದು ಶಿವಾಲಯದಲ್ಲಿ ಭಕ್ತರ ಗುಂಪು ಸೇರಿ ಭಂ.. ಭಂ.. ಭೋಲೆನಾಥ್​ ಎಂದು ಶಿವನ ಘೋಷಣೆಗಳನ್ನ ಕೂಗುತ್ತಾರೆ.

ಈ ವರ್ಷ ಫಾಲ್ಗುನ್ ಕೃಷ್ಣ ಪಕ್ಷದ ತ್ರಯೋದಶಿ ಪ್ರದೋಷ್ ವ್ರತ ದಿನದಂದು ಮಹಾಶಿವರಾತ್ರಿಯ ಶುಭ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಜ್ಯೋತಿಶಾಚಾರ್ಯ ವಿನೀತ್ ಶರ್ಮಾ ಹೇಳಿದರು. ಧನಿಷ್ಟ ನಕ್ಷತ್ರದಲ್ಲಿ ಶಿವ ಯೋಗ ಪಂಚಕ್ ಪ್ರವೃತ್ತಿಯ ದಿನದಂದು ಈ ಮಹಾಪಾರವ ಗುರುವಾರದಂದು ಬರತ್ತದೆ. ಜೀವನದ ಶುಭ ಯೋಗದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಜ್ಯೋತಿಶಾಚಾರ್ಯ ಹೇಳಿದರು.

ಜ್ಯೋತಿಶಾಚಾರ್ಯರು ನಿಶ್ಚಿತ ಕಾಲದಲ್ಲಿ ಅಂದರೆ ಮಹಾಶಿವರಾತ್ರಿಯಲ್ಲಿ ಶಿವನ ಆರಾಧನೆ, ಅಭಿಷೇಕ ಮತ್ತು ದೇವಿ ಪಾರ್ವತಿಯ ವಿವಾಹದ ಪವಿತ್ರ ಯೋಗ ಎಂದು ಅವರು ಹೇಳಿದ್ದಾರೆ.

ಮಹಾಶಿವರಾತ್ರಿ ಮುಹೂರ್ತ ಮತ್ತು ಪೂಜಾ ವಿಧಾನ

ನಿಶ್ಚಿತ ಕಾಲದಲ್ಲಿ ಪೂಜೆಯ 'ಶುಭ ಯೋಗ'

ಮಾರ್ಚ್ 10 ರ ರಾತ್ರಿ 11:49 ರಿಂದ 11 ಮಾರ್ಚ್ 12:37 ರವರೆಗೆ ವಿಶೇಷ ಯೋಗ

ಬಿಲ್ವಪತ್ರಿ, ಮಲ್ಲಿಗೆ, ಕಮಲದ ಹೂವಿನೊಂದಿಗೆ ಶಿವನಿಗೆ ಪೂಜೆ

'ಓಂ ನಮಃ ಶಿವಾಯ' ಮತ್ತು ಮಹಾಮೃತುಂಜಯ ಮಂತ್ರ ಜಪ

ಹಾಲು, ನೀರು ಮತ್ತು ಪಂಚಮೃತದೊಂದಿಗೆ ಭೋಲೆನಾಥ್‌ಗೆ ಅಭಿಷೇಕ

ಕನ್ಯೆಯರಿಗೆ ವಿಶೇಷ ವ್ರತ

ಮದುವೆಯಾಗದವರಿಗೆ ಮಹಾಶಿವರಾತ್ರಿಯ ಹಬ್ಬವು ವಿಶೇಷವಾಗಿದೆ. ಈ ದಿನ ಕನ್ಯೆಯರು ನೀರು, ಹಾಲು, ಗಂಗಾ ನೀರು ಮತ್ತು ಪಂಚಮೃತ ಇತ್ಯಾದಿಗಳನ್ನು ಭೋಲೇನಾಥ್‌ಗೆ ಅರ್ಪಿಸುತ್ತಾರೆ. ಈ ವೇಳೆ ಶಿವ ಅವರಿಗೆ ಬೇಕಾದ ವರವನ್ನು ನೀಡುತ್ತಾನೆ ಎಂಬುದು ಅವರ ನಂಬಿಕೆ.

ರಾಶಿಚಕ್ರದ ಪ್ರಕಾರ ಮಹಾದೇವನನ್ನು ಹೇಗೆ ಪೂಜಿಸುವುದು?

ಮೇಷ: ಮಹಾಶಿವರಾತ್ರಿಯ ದಿನದಂದು ಮೇಷ ರಾಶಿಯವರಿಗೆ ಸಂಪತ್ತಿನ ಯೋಗವಿದೆ. ಈ ದಿನ ಮೇಷ ರಾಶಿಯವರು ಶಿವನನ್ನು ಸೈಕಾಮೋರ್ ಹೂವುಗಳಿಂದ ಅಭಿಷೇಕ ಮಾಡಬೇಕು.

ವೃಷಭ ರಾಶಿ: ಮಹಾಶಿವರಾತ್ರಿಯ ದಿನದಂದು ವೃಷಭ ರಾಶಿಯವರಿಗೆ ಸಿದ್ಧಿ ಯೋಗ ಕೂಡಿ ಬಂದಿದೆ. ಈ ರಾಶಿಚಕ್ರದ ಜನರು ಈ ದಿನ ಶಿವನಿಗೆ ಬಿಲ್ವಾಪತ್ರಿಯನ್ನು ಅರ್ಪಿಸಬೇಕಂತೆ.

ಮಿಥುನ: ಮಹಾಶಿವರಾತ್ರಿಯ ದಿನದಂದು ಮಿಥುನ ರಾಶಿಯವರಿಗೆ ಅದೃಷ್ಟ ಸಾಥ್​ ನೀಡುತ್ತದೆ. ಮಿಥುನ ರಾಶಿಯವರು ಭೋಲೇನಾಥ್​ನನ್ನು ಕೇಸರಿ ಮತ್ತು ಶ್ರೀಗಂಧದ ಮರದಿಂದ ಅಭಿಷೇಕಿಸಬೇಕು ಎಂಬುದು ಜ್ಯೋತಿಷಿಗಳ ಆಂಭೋಣ

ಕಟಕ: ಮಹಾಶಿವರಾತ್ರಿಯ ದಿನದಂದು ಕಟಕ ರಾಶಿಯವರು ವಾಹನವನ್ನು ಎಚ್ಚರಿಕೆಯಿಂದ ಓಡಿಸಬೇಕು. ಗಂಗಾ ನೀರನ್ನು ನೀರಿನಲ್ಲಿ ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು.

ಸಿಂಹ ರಾಶಿ: ಮಹಾಶಿವರಾತ್ರಿ ಸಿಂಹ ರಾಶಿಯವರಿಗೆ ಅನುಕೂಲಕರ ಹೊಂದಾಣಿಕೆ ಪ್ರಾಪ್ತಿಯಾಗಿದೆ. ಈ ರಾಶಿಯವರು ಶಿವನಿಗೆ ಶ್ರೀಗಂಧವನ್ನು ಅರ್ಪಿಸಬೇಕು.

ಕನ್ಯಾ ರಾಶಿ: ಮಹಾಶಿವರಾತ್ರಿ ದಿನದಂದು ಕನ್ಯಾ ರಾಶಿಯವರು ಎಚ್ಚರಿಕೆಯಿಂದ ಇದ್ದು, ಈಶ್ವರನಿಗೆ ಪಂಚಮೃತ ಮತ್ತು ಹಾಲಿನಿಂದ ಅಭಿಷೇಕಿಸಬೇಕು.

ತುಲಾ: ಮಹಾಶಿವರಾತ್ರಿ ದಿನದಂದು ತುಲಾ ರಾಶಿಯವರಿಗೆ ನ್ಯಾಯ ಸಿಗುತ್ತದೆ. ಇವರು ಶಿವನಿಗೆ ಯಕ್ಕದ ಹೂಗಳನ್ನು ಅರ್ಪಿಸಬೇಕು.

ವೃಶ್ಚಿಕ ರಾಶಿ: ಮಹಾಶಿವರಾತ್ರಿಯ ದಿನದಂದು, ವೃಶ್ಚಿಕ ರಾಶಿಯವರಿಗೆ ಮನೆಯಲ್ಲಿ ಸಂತೋಷದ ಯೋಗ ಕೂಡಿ ಬರುತ್ತೆ. ಈ ರಾಶಿಯವರು ವಾಹನದಿಂದ ಪ್ರಯೋಜನವನ್ನು ಪಡೆಯುತ್ತಾರೆ. ಈ ದಿನ ಅವರು ಶಿವನನ್ನು ದ್ರವಗಳಿಂದ ಅಭಿಷೇಕಿಸಿ.

ಧನು ರಾಶಿ: ಮಹಾಶಿವರಾತ್ರಿಯ ದಿನದಂದು ಧನು ರಾಶಿಯ ಜನರು ನಂಬಿಕೆಯೊಂದಿಗೆ ಕೆಲಸ ಮಾಡಬೇಕು. ಈ ದಿನ ಅವರು ಗಣಗಲೆ (ಕಾನರ್) ಹೂವುಗಳನ್ನು ಅರ್ಪಿಸಬೇಕು.

ಮಕರ ರಾಶಿ: ಮಹಾಶಿವರಾತ್ರಿಯ ದಿನದಂದು ಮಕರ ರಾಶಿ ಜನರು ಕುಟುಂಬ ಸದಸ್ಯರಿಂದ ಲಾಭ ಪಡೆಯುತ್ತಾರೆ. ಈ ದಿನ ಅವರು ನಾಗಕೇಸರ್ ಹೂವುಗಳನ್ನು ಶಿವನಿಗೆ ಅರ್ಪಿಸಬೇಕು.

ಕುಂಭ: ಮಹಾಶಿವರಾತ್ರಿ ದಿನವು ಕುಂಭ ರಾಶಿ ಜನರಿಗೆ ಅನುಕೂಲಕರ ಸಮಯ. ಈ ದಿನ ಅವರು ಮಹಾಮೃತುಂಜಯ ಜಪವನ್ನು ಪಠಿಸಬೇಕು.

ಮೀನ: ಮಹಾಶಿವರಾತ್ರಿಯ ದಿನದಂದು ಮೀನ ರಾಶಿಯವರು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಶಿವನಿಗೆ ಮಲ್ಲಿಗೆ ಮತ್ತು ಕಮಲದ ಹೂಗಳನ್ನು ಅರ್ಪಿಸಬೇಕಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.