ಹೈದರಾಬಾದ್: ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್ ಡಾರ್ಸಿ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿದ್ದಂತೆ ಆ ಸ್ಥಾನಕ್ಕೆ ಭಾರತೀಯ ಮೂಲದ ಪರಾಗ್ ಅಗರವಾಲ್ ನೇಮಕಗೊಂಡಿದ್ದಾರೆ.
ಮುಂಬೈನ ಐಐಟಿಯಲ್ಲಿ ಬಿಟೆಕ್ ಪದವಿ ಪಡೆದ ಪರಾಗ್ ಅಗರವಾಲ್ ಅವರು ಸ್ಟ್ಯಾನ್ಫೋರ್ಡ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪಿಹೆಚ್ಡಿ ಪಡೆದಿದ್ದಾರೆ. ಮೈಕ್ರೋಸಾಫ್ಟ್, ಯಾಹೂ ಮತ್ತು ಎಟಿ ಆ್ಯಂಡ್ ಟಿ ಲ್ಯಾಬ್ಸ್ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ 2011ರಲ್ಲಿ ಟ್ವಿಟರ್ ಸಂಸ್ಥೆ ಸೇರಿಕೊಂಡಿರುವ 37 ವರ್ಷದ ಪರಾಗ್ ಇದೀಗ ಟ್ವಿಟರ್ ಸಂಸ್ಥೆಯ ಪ್ರಮುಖ ಹುದ್ದೆಗೆ ಏರಿದ್ದಾರೆ.
ಇದನ್ನೂ ಓದಿರಿ: ಟ್ವಿಟರ್ ಸಿಇಒ ಸ್ಥಾನಕ್ಕೆ ಜಾಕ್ ಡಾರ್ಸಿ ರಾಜೀನಾಮೆ: ಭಾರತೀಯ ಪರಾಗ್ ಅಗರ್ವಾಲ್‌ಗೆ ಮಹತ್ವದ ಹುದ್ದೆ
ದೈತ್ಯ ಕಂಪನಿಯ ಮುಖ್ಯಸ್ಥರಾಗಿ ಆಯ್ಕೆಯಾಗುತ್ತಿದ್ದಂತೆ ಅವರು ವಾರ್ಷಿಕವಾಗಿ ಎಷ್ಟು ಸಂಬಳ ಪಡೆದುಕೊಳ್ಳಲಿದ್ದಾರೆಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುವಾಗಿವೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ವಾರ್ಷಿಕವಾಗಿ ಅವರಿಗೆ 1 ಮಿಲಿಯರ್ ಡಾಲರ್ ಸಂಬಳ ಹಾಗೂ ಬೋನಸ್ ಸಿಗಲಿದೆ ಎಂದು ತಿಳಿದು ಬಂದಿದೆ.
ಪರಾಗ್ ಅಗರವಾಲ್ ಅವರಿಗೆ ವಾರ್ಷಿಕವಾಗಿ 7,51,17,500 ಕೋಟಿ ರೂ. ಸಂಬಳ ಸಿಗಲಿದ್ದು, ಪ್ರತಿ ತಿಂಗಳು 62,59,000 ರೂ. ಸ್ಯಾಲರಿ ಜೊತೆಗೆ ಬೋನಸ್ ಪಡೆಯಲಿದ್ದಾರೆ.
ಟ್ವಿಟರ್ ಕಂಪನಿಯ ಯುಎಸ್ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸೆಂಜ್ಗೆ ಸಲ್ಲಿಸಿರುವ ದಾಖಲೆಯಿಂದ ಈ ಮಹತ್ವದ ಅಂಶ ಬಹಿರಂಗಗೊಂಡಿದೆ. ಕಂಪನಿಯ ಸಿಇಒ ಆಗಿ ನೇಮಕಗೊಂಡಿರುವ ಪರಾಗ್ ಅವರಿಗೆ 12.5 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಷೇರು ಸಿಗಲಿದೆ ಎಂದು ತಿಳಿದುಬಂದಿದೆ.