ನವದೆಹಲಿ : ಇಡೀ ದೇಶವೇ ಡಿಸೆಂಬರ್ 31, 2020ರ ರಾತ್ರಿ ಹೊಸ ವರ್ಷವನ್ನು ಸ್ವಾಗತಿಸಲು ಹಾತೊರೆಯುತ್ತಿತ್ತು. ಇನ್ನೊಂದೆಡೆ, ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪಂಜಿನ ಮೆರವಣಿಗೆ ನಡೆಸಿದ್ದಾರೆ.
ರಾಜಸ್ಥಾನ-ಹರಿಯಾಣ ಗಡಿಯಲ್ಲಿರುವ ಅಲ್ವಾರ್ ಜಿಲ್ಲೆಯ ಶಹಜಹಾನಪುರದಲ್ಲಿ ಈಟಿವಿ ಭಾರತದ ಪ್ರತಿನಿಧಿ ನಡೆಸಿದ ಗ್ರೌಂಡ್ ರಿಪೋರ್ಟ್ನಲ್ಲಿ ರೈತರು ಪ್ರತಿಭಟನೆ ಮತ್ತು ಹೊಸ ವರ್ಷದ ಸ್ವಾಗತ ಹೇಗೆ ಮಾಡುತ್ತಿದ್ದಾರೆಂಬ ವಿಚಾರವನ್ನು ಹಂಚಿಕೊಡಿದ್ದಾರೆ.
ಪಂಜಿನ ಮೆರವಣಿಗೆ ಮೂಲಕ 2021ನ್ನು ಸ್ವಾಗತಿಸಿದ ರೈತರು, ಈ ವೇಳೆ ಕೃಷಿ ಕಾನೂನುಗಳ ವಿರುದ್ಧ ಘೋಷಣೆ ಕೂಗಿದರು.