ಮುಂಬೈ(ಮಹಾರಾಷ್ಟ್ರ): ಶಾಸಕರ ಬಂಡಾಯದಿಂದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾವಿಕಾಸ್ ಅಘಾಡಿ ಸರ್ಕಾರ ಪತನದಂಚಿಗೆ ತಲುಪಿದೆ. ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ದಿನೇ ದಿನೆ ತಿರುವು ಪಡೆಯುತ್ತಿದ್ದು, ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆರೋಪ, ಪತ್ಯಾರೋಪಗಳು ಜೋರಾಗಿವೆ.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಯುವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಮತ್ತು ಸಂಸದ ಸಂಜಯ್ ರಾವುತ್, ಏಕನಾಥ್ ಶಿಂದೆ ಮತ್ತು ಬಂಡಾಯ ಶಾಸಕರ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದ್ದಾರೆ. ಈ ನಡುವೆ ಇದೀಗ ಟ್ವೀಟ್ ಮೂಲಕ ಏಕನಾಥ್ ಶಿಂದೆ ಅವರು ಶಿವಸೇನೆ ಮತ್ತು ಉದ್ಧವ್ ಠಾಕ್ರೆ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.
-
मुंबई बाँबस्फोट घडवून निष्पाप मुंबईकरांचा जीव घेणाऱ्या दाऊदशी थेट संबंध असणाऱ्यांना हिंदुहृदयसम्राट वंदनीय बाळासाहेब ठाकरे यांची शिवसेना समर्थन कशी करू शकते…?
— Eknath Shinde - एकनाथ शिंदे (@mieknathshinde) June 26, 2022 " class="align-text-top noRightClick twitterSection" data="
यालाच विरोध म्हणून उचललेलं हे पाऊल; आम्हा सर्वांना मृत्यूच्या दारात घेऊन गेले तरी बेहत्तर..#MiShivsainik @rautsanjay61
">मुंबई बाँबस्फोट घडवून निष्पाप मुंबईकरांचा जीव घेणाऱ्या दाऊदशी थेट संबंध असणाऱ्यांना हिंदुहृदयसम्राट वंदनीय बाळासाहेब ठाकरे यांची शिवसेना समर्थन कशी करू शकते…?
— Eknath Shinde - एकनाथ शिंदे (@mieknathshinde) June 26, 2022
यालाच विरोध म्हणून उचललेलं हे पाऊल; आम्हा सर्वांना मृत्यूच्या दारात घेऊन गेले तरी बेहत्तर..#MiShivsainik @rautsanjay61मुंबई बाँबस्फोट घडवून निष्पाप मुंबईकरांचा जीव घेणाऱ्या दाऊदशी थेट संबंध असणाऱ्यांना हिंदुहृदयसम्राट वंदनीय बाळासाहेब ठाकरे यांची शिवसेना समर्थन कशी करू शकते…?
— Eknath Shinde - एकनाथ शिंदे (@mieknathshinde) June 26, 2022
यालाच विरोध म्हणून उचललेलं हे पाऊल; आम्हा सर्वांना मृत्यूच्या दारात घेऊन गेले तरी बेहत्तर..#MiShivsainik @rautsanjay61
ಮುಂಬೈನಲ್ಲಿ ಬಾಂಬ್ ಸ್ಫೋಟ ನಡೆಸಿ ಅಮಾಯಕ ಮುಂಬೈಗರನ್ನು ಕೊಂದ ದಾವೂದ್ನೊಂದಿಗೆ ನೇರ ಸಂಪರ್ಕ ಹೊಂದಿದ್ದವರ ಜತೆ ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆ ಹೇಗೆ ಬೆಂಬಲಿಸುತ್ತದೆ? ಎಂಬ ಪ್ರಶ್ನೆಯನ್ನು ಶಿಂದೆ ಕೇಳಿದ್ದಾರೆ. ನಮ್ಮೆಲ್ಲರನ್ನೂ ಸಾವಿನ ಅಂಚಿಗೆ ಕೊಂಡೊಯ್ದರೂ ಪರವಾಗಿಲ್ಲ, ಪ್ರತಿಭಟನೆ ಹೆಜ್ಜೆ ಇಡುವುದು ಉತ್ತಮ ಎಂದು ಶಿಂದೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಇಂದು ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ
ಸಂಜಯ್ ರಾವುತ್ ಹೇಳಿದ್ದೇನು? : ದಹಿಸರ್‌ನಲ್ಲಿ ನಡೆದ ಶಿವಸೇನೆ ರ್ಯಾಲಿಗೆ ಮಾರ್ಗದರ್ಶನ ನೀಡುತ್ತಿದ್ದ ಸಂಜಯ್ ರಾವತ್, 40 ಶಾಸಕರ ಪಾರ್ಥಿವ ಶರೀರ ನೇರವಾಗಿ ಗುವಾಹಟಿಯಿಂದ ಬರಲಿದೆ ಎಂದು ಹೇಳಿದ್ದರು. ಮರಣೋತ್ತರ ಪರೀಕ್ಷೆಗಾಗಿ ನೇರವಾಗಿ ಶವಾಗಾರಕ್ಕೆ ಕಳುಹಿಸುತ್ತೇವೆ ಎಂದು ರಾವುತ್ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಏಕನಾಥ್ ಶಿಂದೆ ಈ ರೀತಿಯ ಟ್ವೀಟ್ ಮಾಡಿದ್ದಾರೆ. ಪ್ರತಿಭಟನೆ ಹೆಜ್ಜೆ ಇಡುವುದು ಉತ್ತಮ. ಸಾವು ಸತ್ತರೂ ಪರವಾಗಿಲ್ಲ ಎಂದು ಶಿಂದೆ ಹೇಳಿದ್ದಾರೆ.