ETV Bharat / bharat

ಘೋರ ಕೃತ್ಯ ಮಾಡಿದ ಅಪರಾಧಿಗಳು ಬಿಡುಗಡೆಗೆ ಹೇಗೆ ಅರ್ಹರು?: ಬಿಲ್ಕಿಸ್​ ಬಾನೊ ಕೇಸಲ್ಲಿ ಸುಪ್ರೀಂಕೋರ್ಟ್​ ಪ್ರಶ್ನೆ - ಘೋರ ಕೃತ್ಯ ಮಾಡಿದ ಅಪರಾಧಿಗಳು ಬಿಡುಗಡೆಗೆ ಹೇಗೆ ಅರ್ಹರು

ಬಿಲ್ಕಿಸ್​ ಬಾನೊ ಪ್ರಕರಣದಲ್ಲಿ ಅಪರಾಧಿಗಳು ಬಿಡುಗಡೆಯಾಗಲು ಮತ್ತು ದೀರ್ಘ ಪೆರೋಲ್​ ಪಡೆಯಲು ಇರುವ ಮಾನದಂಡವೇನು ಎಂದು ಸುಪ್ರೀಂಕೋರ್ಟ್​ ಕೇಳಿದೆ.

ಬಿಲ್ಕಿಸ್​ ಬಾನೊ ಕೇಸಲ್ಲಿ ಸುಪ್ರೀಂಕೋರ್ಟ್​ ಪ್ರಶ್ನೆ

author img

By ETV Bharat Karnataka Team

Published : Sep 14, 2023, 10:16 PM IST

ನವದೆಹಲಿ: 2002 ರ ಗುಜರಾತ್​ ಗಲಭೆಯಲ್ಲಿ ಬಿಲ್ಕಿಸ್​​ ಬಾನೊ ಮೇಲೆ ಅತ್ಯಾಚಾರ ಮಾಡಿ, ಅವರ ಕುಟುಂಬಸ್ಥರನ್ನು ಹತ್ಯೆ ಮಾಡಿದ ಅಪರಾಧಿಗಳು ಜೈಲಿನಿಂದ ಶಿಕ್ಷೆ ಅವಧಿಗೂ ಮೊದಲೇ ಬಿಡುಗಡೆ ಹೊಂದಲು ಮತ್ತು ಇನ್ನಿತರರು ದೀರ್ಘಾವಧಿ ಪೆರೋಲ್ ಪಡೆಯಲು ಹೇಗೆ ಅರ್ಹರು ಎಂಬುದನ್ನು ವಿವರಿಸಲು ಅಪರಾಧಿಗಳ ಪರ ವಕೀಲರನ್ನು ಪ್ರಶ್ನಿಸಿದೆ.

ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿ, ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಪ್ರಕರಣದ ಅಪರಾಧಿಗಳ ಪರ ವಾದ ಮಂಡಿಸುತ್ತಿರುವ ವಕೀಲರ ಮೇಲೆ ಗುರುವಾರ ಪ್ರಶ್ನೆಗಳ ಸುರಿಮಳೆಯನ್ನೆ ಹರಿಸಿದೆ. ಹೆಣ್ಣು ಮಗಳನ್ನು ರೇಪ್​ ಮಾಡಿ ಆಕೆಯ ಕುಟುಂಬವನ್ನು ಬಲಿ ಪಡೆದ ಪಾತಕಿಗಳು ಕ್ಷಮಾದಾನಕ್ಕೆ ಹೇಗೆ ಅರ್ಹ ಮತ್ತು ಅವರು ಪೆರೋಲ್​ ಮೇಲೆ ಹೇಗೆ ಹೊರಬರಲು ಅವಕಾಶ ನೀಡಬೇಕು ಎಂಬುದನ್ನು ತಿಳಿಸುವಂತೆ ಸೂಚಿಸಿತು.

ಅಪರಾಧಿಗಳಲ್ಲಿ ಒಬ್ಬರನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು, ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠದ ಮುಂದೆ ವಾದ ಮಂಡಿಸಿ, ಶಿಕ್ಷೆಗೆ ಒಳಗಾದವರು ಘೋರ ಅಪರಾಧ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಅವರಿಗಿರುವ ಯಾವುದೇ ವಿನಾಯಿತಿಯ ಪ್ರಯೋಜನವನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದರು.

ಅಪರಾಧದ ಸ್ವರೂಪ ಮತ್ತು ಪ್ರಕರಣದಲ್ಲಿನ ಸಾಕ್ಷ್ಯಗಳ ಆಧಾರದ ಮೇಲೆ ಘೋರ ಅಪರಾಧ ಮಾಡಿರುವವರಿಗೆ ಶೀಘ್ರ ಬಿಡುಗಡೆಗೆ ಪರಿಗಣಿಸುವ ಅಂಶಗಳಲ್ಲ ಎಂದು ಹೇಳಿದ ಪೀಠ, ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಜೈಲಿನಿಂದ ಅಕಾಲಿಕ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದಾದರೂ ವಿಶೇಷ ಅರ್ಹತೆ ಹೊಂದಿದ್ದಾರೆಯೇ ಎಂಬುದನ್ನು ತಿಳಿಸಲು ಸೂಚಿಸಿತು.

ಅಪರಾಧಿಗಳು 1500 ದಿನಗಳವರೆಗೆ ಪೆರೋಲ್​ ಪಡೆದಿದ್ದಾರೆ. ಈ ಅಪರಾಧಿಗಳು ಇತರರಿಗಿಂತ ಹೆಚ್ಚು ಸವಲತ್ತು ಹೇಗೆ ಪಡೆಯಲು ಸಾಧ್ಯ. ಅಪರಾಧಿಗಳನ್ನು ವಿಭಿನ್ನವಾಗಿ ಪರಿಗಣಿಸುವ ಮಾನದಂಡ ಏನು ಎಂದು ಸುಪ್ರೀಂ ಕೋರ್ಟ್ ವಕೀಲರನ್ನು ಕೇಳಿದೆ.

ಆಗ ಪ್ರತಿಕ್ರಿಯಿಸಿದ ವಕೀಲರು, ಅಪರಾಧಿಗಳಿಗೂ ತಮ್ಮದೇ ಸ್ವಾತಂತ್ರ್ಯವಿದೆ. ಶಿಕ್ಷೆ ಯಾವಾಗ ಕೊನೆಗೊಳ್ಳುತ್ತದೆ ಎಂಬುದು ಅವರಲ್ಲಿರುತ್ತದೆ. ಇವರು ಸ್ವಾತಂತ್ರ್ಯದಿಂದ ವಂಚಿತರಾಗಬೇಕೇ? ಈ ಬಗ್ಗೆ ನಿರ್ಧರಿಸುವ ಅಧಿಕಾರ ಕಾರ್ಯಾಂಗಕ್ಕೆ ಇಲ್ಲವೇ? ಎಂದು ಲೂತ್ರಾ ವಾದಿಸಿದರು. ಇದಾದ ಬಳಿಕ ಕೋರ್ಟ್​ ಹೆಚ್ಚಿನ ವಿಚಾರಣೆಗಾಗಿ ಸೆಪ್ಟೆಂಬರ್ 20 ರಂದು ಪ್ರಕರಣವನ್ನು ಮುಂದೂಡಿತು.

ಇದನ್ನೂ ಓದಿ: ಕರ್ನಾಟಕದ ಭಯೋತ್ಪಾದನಾ ಚಟುವಟಿಕೆಯ ಕಿಂಗ್​ಪಿನ್​ ಅರಾಫತ್​ ಅಲಿ ದೆಹಲಿಯಲ್ಲಿ ಬಂಧಿಸಿದ ಎನ್​ಐಎ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.