ETV Bharat / bharat

10 ತಿಂಗಳ ಮಗುವಿಗೆ ಮನೆ ಕೆಲಸದಾಕೆಯ ಚಿತ್ರಹಿಂಸೆ.. ವಿಡಿಯೋ ವೈರಲ್​

author img

By

Published : Oct 2, 2021, 5:01 PM IST

ಸ್ಮಾರ್ಟ್​​​ಫೋನ್​ ಮೂಲಕ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡ್ತಿದ್ದ ವೇಳೆ ಪೋಷಕರು ಬೆಚ್ಚಿಬಿದ್ದಿದ್ದಾರೆ. ಮನೆಕೆಲಸದಾಕೆ ಕಲ್ಪನಾ ಮಗುವಿನ ಮೇಲೆ ಅಮಾನವೀಯ ರೀತಿ ಹಲ್ಲೆ ನಡೆಸುತ್ತಿರುವುದು, ಚಿತ್ರಹಿಂಸೆ ನೀಡುತ್ತಿರುವುದು ಕಂಡು ಬಂದಿದೆ. ಮಗು ಅಳಲು ಶುರು ಮಾಡಿದಾಗಲೂ ಸಹ ಸಹಾನುಭೂತಿ ತೋರಿಸದೇ ಹಲ್ಲೆ ಮಾಡಿದ್ದಾಳೆ..

Housemaid arrested for torturing 10- month old

ಪನ್ಸ್ಕುರಾ (ಪಶ್ಚಿಮಬಂಗಾಳ) : 10 ತಿಂಗಳ ಮಗುವಿಗೆ ಮನೆ ಕೆಲಸದಾಕೆ ಚಿತ್ರಹಿಂಸೆ ನೀಡಿರುವ ಘಟನೆ ಪಶ್ಚಿಮ ಬಂಗಾಳದ ಪನ್ಸ್ಕುರಾದಲ್ಲಿ ನಡೆದಿದೆ. ಈಗಾಗಲೇ ಆಕೆಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಮಗುವಿಗೆ ಮೇಲಿಂದ ಮೇಲೆ ಚಿತ್ರಹಿಂಸೆ ನೀಡುವುದು ಖಚಿತಗೊಂಡಿದೆ.

10 ತಿಂಗಳ ಮಗುವಿಗೆ ಮನೆ ಕೆಲಸದಾಕೆಯಿಂದ ಚಿತ್ರಹಿಂಸೆ..

ಘಟನೆಯ ಸಂಪೂರ್ಣ ವಿವರ

ಪೊಲೀಸರು ತಿಳಿಸಿರುವ ಪ್ರಕಾರ ಚಿತ್ರಹಿಂಸೆಗೊಳಗಾಗಿರುವ ಮಗು ಡಾ.ದೇಬಶಿಶ್ ದಾಸ್​ ಮತ್ತು ನಬಮಿತಾ ಭಟ್ಟಾಚಾರ್ಯ ಅವರ ಪುತ್ರಿ. ಡಾ. ದಾಸ್​​ ಹಾಗೂ ಆತನ ಪತ್ನಿ ವೈದ್ಯರಾಗಿದ್ದ ಕಾರಣ ಮನೆ ಬಿಟ್ಟು ಬೇರೆ ನಗರದಲ್ಲಿ ವಾಸವಾಗಿದ್ದರು.

ವಾರಾಂತ್ಯದಲ್ಲಿ ಮಾತ್ರ ಮನೆಗೆ ಬರುತ್ತಿದ್ದ ಕಾರಣ ಕಲ್ಪನಾ ಎಂಬ ಯುವತಿಗೆ ಮಗು ನೋಡಿಕೊಳ್ಳುವ ಜವಾಬ್ದಾರಿ ನೀಡಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದರು. ಮಗು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದ ಮಹಿಳೆ ಕಳೆದ ಕೆಲ ದಿನಗಳಿಂದ ಅದರ ಮೇಲೆ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದಳು.

ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಘಟನೆ ಬಹಿರಂಗ

ಸ್ಮಾರ್ಟ್​​​ಫೋನ್​ ಮೂಲಕ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡ್ತಿದ್ದ ವೇಳೆ ಪೋಷಕರು ಬೆಚ್ಚಿಬಿದ್ದಿದ್ದಾರೆ. ಮನೆಕೆಲಸದಾಕೆ ಕಲ್ಪನಾ ಮಗುವಿನ ಮೇಲೆ ಅಮಾನವೀಯ ರೀತಿ ಹಲ್ಲೆ ನಡೆಸುತ್ತಿರುವುದು, ಚಿತ್ರಹಿಂಸೆ ನೀಡುತ್ತಿರುವುದು ಕಂಡು ಬಂದಿದೆ. ಮಗು ಅಳಲು ಶುರು ಮಾಡಿದಾಗಲೂ ಸಹ ಸಹಾನುಭೂತಿ ತೋರಿಸದೇ ಹಲ್ಲೆ ಮಾಡಿದ್ದಾಳೆ.

ಇದನ್ನೂ ಓದಿರಿ: ಲೇಹ್​ನಲ್ಲಿ 2 ಸಾವಿರ ಅಡಿ ಎತ್ತರದಲ್ಲಿ ವಿಶ್ವದ ಅತಿದೊಡ್ಡ ಭಾರತದ ತ್ರಿವರ್ಣ ಧ್ವಜ- ವಿಡಿಯೋ

ವಿಡಿಯೋ ನೋಡಿರುವ ಇಬ್ಬರು ಪನ್ಸ್ಕುರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ವಿಡಿಯೋ ದೃಶ್ಯ ನೋಡಿರುವ ಪೊಲೀಸರು ಆಕೆಯ ಬಂಧನ ಮಾಡಿದ್ದಾರೆ. ಈ ವೇಳೆ ತಾನು ಮಾಡಿರುವ ಅಪರಾಧ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.