ETV Bharat / bharat

ಸಿಲಿಂಡರ್ ಸ್ಫೋಟದಿಂದ ಎರಡು ಅಂತಸ್ತಿನ ಮನೆ ಕುಸಿತ : ನಾಲ್ವರ ಸಾವು - ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ

ಗ್ಯಾಸ್​ಸಿಂಡರ್​ ಸ್ಫೋಟಗೊಂಡು ಎರಡು ಅಂತಸ್ಥಿನ ಮನೆ ಕುಸಿದ್ದಿದ್ದು, ನಾಲ್ವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶ ಗಾಜಿಯಾಬಾದ್​ನಲ್ಲಿ ನಡೆದಿದೆ.

2-storey house collapsed due to cylinder
ಸಿಲಿಂಡರ್ ಸ್ಫೋಟದಿಂದ ಎರಡು ಅಂತಸ್ತಿನ ಮನೆ ಕುಸಿತ
author img

By

Published : Oct 5, 2022, 5:57 PM IST

ಗಾಜಿಯಾಬಾದ್​ (ಉತ್ತರ ಪ್ರದೇಶ) : ಬೆಳಗ್ಗೆ ಹತ್ತು ಗಂಟೆ ವೇಳೆಗೆ ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡಿದ್ದು ಎರಡು ಅಂತಸ್ಥಿನ ಮನೆ ಕುಸಿದು ಬಿದ್ದಿದೆ. ಮನೆಯ ಅವಶೇಷದ ಅಡಿ ಸಿಲುಕಿದ್ದ ಐವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ವೇಳೆ ಇಬ್ಬರು ಮಕ್ಕಳು ಮತ್ತು ಮಹಿಳೆ ಮರಣ ಹೊಂದಿರುವ ಬಗ್ಗೆ ತಿಳಿದು ಬಂದಿದೆ.

ಘಟನೆ ಗಾಜಿಯಾಬಾದ್‌ನ ಲೋಣಿ ಪೊಲೀಸ್ ಠಾಣೆ ವ್ಯಾಪ್ತಿಯ ಬಬ್ಲು ಗಾರ್ಡನ್‌ನಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಲೋಣಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಅವಶೇಷಶಗಳ ಅಡಿ ಸಿಲುಕಿದ್ದವರನ್ನು ಬಿಡಿಸಿದ್ದಾರೆ. ಗ್ಯಾಸ್​ ಸಿಲಿಂಡರ್​ ಸ್ಫೋಟ ಗೊಂಡ ಮನೆ ಬಬ್ಲು ಗಾರ್ಡನ್‌ ವಾಸಿ ಮುನಿರ್​ ಎಂಬುವವರದ್ದು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಮುನೀರ್, ಅವರ ಪತ್ನಿ ಮತ್ತು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ.

ಸಿಲಿಂಡರ್ ಸ್ಫೋಟದಿಂದ ಎರಡು ಅಂತಸ್ತಿನ ಮನೆ ಕುಸಿತ

ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಗ್ಯಾಸ್​ ಸಿಲಿಂಡರ್​ ನೆಲದಡಿ ಇರಿಸಲಾಗಿತ್ತು ಸ್ಫೋಟದ ತೀರ್ವತೆಗೆ, ಮನೆ ಕುಸಿದಿದೆ ಎನ್ನಲಾಗಿದೆ. ಮನೆ ಹಳೆಯದಾಗಿದ್ದರಿಂದ ಗೋಡೆಗಳು ದುರ್ಬಲವಾಗಿದ್ದವು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ : ಗಾಳಿಯಲ್ಲಿ ಗುಂಡು ಹಾರಿಸಿದ ಶಾಸಕ ಕೆ ಶಿವನಗೌಡ ನಾಯಕ: ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.