ETV Bharat / bharat

ಕಾಡಿನಿಂದ ಬಂದು ಬಾವಿಯೊಳಗೆ ಬಿದ್ದ ಕಾಡಾನೆ ಮರಿ.. ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ - ಇಲ್ಲಿನ ಕೋಥಮಂಗಲಂನಲ್ಲಿ ಬಾವಿಯೋಳಗೆ ಬಿದ್ದು ಒದ್ದಾಡುತ್ತಿದ್ದ ಕಾಡಾನೆ

ಸ್ಥಳಕ್ಕಾಗಮಿಸಿದ ಸಿಬ್ಬಂದಿ ಜೆಸಿಬಿ ಬಳಿಸಿ ಬಾವಿಯ ಒಂದು ಭಾಗದಲ್ಲಿ ಆನೆ ಹತ್ತಿ ಬರಲು ಅನುವು ಮಾಡಿಕೊಟ್ಟರು. ಆದರೆ, ಇದಕ್ಕೂ ಮೊದಲು ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.

hours-long-rescue-operation-wild-elephant-escaped-from-well
ಕಾಡಿನಿಂದ ಬಂದು ಬಾವಿಯೊಳಗೆ ಬಿದ್ದಿದ್ದ ಕಾಡಾನೆ ಮರಿ ರಕ್ಷಣೆ
author img

By

Published : Jun 16, 2021, 7:49 PM IST

Updated : Jun 16, 2021, 10:47 PM IST

ಎರ್ನಾಕುಲಂ (ಕೇರಳ): ಇಲ್ಲಿನ ಕೋಥಮಂಗಲಂನಲ್ಲಿ ಬಾವಿಯೋಳಗೆ ಬಿದ್ದು ಒದ್ದಾಡುತ್ತಿದ್ದ ಕಾಡಾನೆ ಮರಿಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಗಂಟೆಗೂ ಹೆಚ್ಚು ಹೊತ್ತು ನಡೆಸಿದ ಕಾರ್ಯಾಚರಣೆಯ ಬಳಿಕ ಆನೆ ಮರಿಯನ್ನು ಯಶಸ್ವಿಯಾಗಿ ಬಾವಿಯಿಂದ ಮೇಲೆತ್ತಲಾಗಿದೆ. ಕೋಥಮಂಗಲಂನ ಗೋಪಾಲಕೃಷ್ಣ ಎಂಬುವರ ಜಮೀನಿನಲ್ಲಿದ್ದ ಸುಮಾರು 5 ಅಡಿ ಬಾವಿಯೊಳಗೆ ಬಿದ್ದಿದ್ದ ಆನೆ ಮರಿ ಮೇಲೆ ಬರಲಾಗದೇ ಒದ್ದಾಡುತ್ತಿತ್ತು.

ಇದನ್ನು ಗಮನಿಸಿದ ಸ್ಥಳೀಯರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಗೋಪಾಲಕೃಷ್ಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಜೆಸಿಬಿ ಬಳಿಸಿ ಬಾವಿಯ ಒಂದು ಭಾಗದಲ್ಲಿ ಆನೆ ಹತ್ತಿ ಬರಲು ಅನುವು ಮಾಡಿಕೊಟ್ಟರು. ಆದರೆ ಇದಕ್ಕೂ ಮೊದಲು ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.

ಕಾಡಿನಿಂದ ಬಂದು ಬಾವಿಯೊಳಗೆ ಬಿದ್ದ ಕಾಡಾನೆ ಮರಿ ರಕ್ಷಣೆ

ಆನೆ ದಾಳಿಯನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದ ಸ್ಥಳೀಯರು ಕೆಲಸಕ್ಕೆ ಅಡ್ಡಿಯಾದರು. ಈ ವೇಳೆ, ಡಿಎಫ್​ಒ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಆನೆ ದಾಳಿಗೆ ಪರಿಹಾರ ನೀಡುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಓದಿ: ಎಲ್‌ಜೆಪಿ ಬಿಕ್ಕಟ್ಟು; ಚಿರಾಗ್‌ ಪಾಸ್ವಾನ್‌ ಹೇಳೋದೇನು...?

Last Updated : Jun 16, 2021, 10:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.