ETV Bharat / bharat

ಬಿರಿಯಾನಿ ಚೆನ್ನಾಗಿಲ್ಲ ಎಂದಿದ್ದಕ್ಕೆ ಇಬ್ಬರಿಗೆ ಥಳಿಸಿದ ಹೋಟೆಲ್ ಸಿಬ್ಬಂದಿ - ಹೈದರಾಬಾದ್ ಅಪರಾಧ ಸುದ್ದಿ

ಹೋಟೆಲ್​ನಲ್ಲಿ ಬಿರಿಯಾನಿ ಚೆನ್ನಾಗಿಲ್ಲ ಎಂದು ಹೇಳಿದ್ದಕ್ಕೆ ಹೋಟೆಲ್​ ಸಿಬ್ಬಂದಿ ಇಬ್ಬರಿಗೆ ಥಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

Hotel staff Beat two persons when they said Biryani is not good
ಬಿರಿಯಾನಿ ಚೆನ್ನಾಗಿಲ್ಲ ಎಂದಿದ್ದಕ್ಕೆ ಇಬ್ಬರಿಗೆ ಥಳಿಸಿದ ಹೋಟೆಲ್ ಸಿಬ್ಬಂದಿ
author img

By

Published : Jun 17, 2021, 6:51 AM IST

ಹೈದರಾಬಾದ್: ಬಿರಿಯಾನಿ ಸರಿಯಿಲ್ಲ ಎಂದಿದ್ದಕ್ಕೆ ಹೋಟೆಲ್ ಸಿಬ್ಬಂದಿ ಗ್ರಾಹಕರಿಬ್ಬರನ್ನು ಕ್ರೂರವಾಗಿ ಥಳಿಸಿದ ಘಟನೆ ಹೈದರಾಬಾದ್​ನ ಮೈಲರ್​ದೇವ್​ ಪಲ್ಲಿ ಎಂಬಲ್ಲಿ ನಡೆದಿದೆ. ಓರ್ವ ಗ್ರಾಹಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೈಲರ್​ ದೇವ್​ಪಲ್ಲಿಯ ದುರ್ಗಾನಗರ ಎಂಬಲ್ಲಿರುವ ಮೇಫಿಲ್ ಹೋಟೆಲ್​ ಎಂಬಲ್ಲಿಗೆ ಹೋಗಿದ್ದ ಗ್ರಾಹಕರು ಮಟನ್ ಬಿರಿಯಾನಿ ಚೆನ್ನಾಗಿರಲಿಲ್ಲ ಎಂದು ಹೇಳಿದ್ದಕ್ಕೆ ಕೆರಳಿದ ಹೋಟೆಲ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ.

ಗ್ರಾಹಕರಿಗೆ ಥಳಿಸಿದ ದೃಶ್ಯಗಳು

ಸ್ಥಳಕ್ಕೆ ಧಾವಿಸಿದ ಪೊಲೀಸರು ಹಲ್ಲೆ ಮಾಡಿದ ಹೋಟೆಲ್ ಸಿಬ್ಬಂದಿಯನ್ನು ಬಂಧಿಸಿದ್ದು, ಕೋವಿಡ್ ನಿಯಮಾವಳಿ ಪಾಲನೆ ಮಾಡದೇ ಹೋಟೆಲ್ ನಡೆಸುತ್ತಿದ್ದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಜೊತೆಗೆ ಕರ್ಫ್ಯೂ ವೇಳೆಯೂ ಹೋಟೆಲ್ ನಡೆಸುತ್ತಿದ್ದ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ‘ಕೋವಿಶೀಲ್ಡ್ ಡೋಸ್​ಗಳ ನಡುವಿನ ಅಂತರ ಹೆಚ್ಚಿಸುವ ನಿರ್ಧಾರ ಮೂಲಭೂತ ವೈಜ್ಞಾನಿಕ ಕಾರಣಗಳನ್ನು ಆಧರಿಸಿದೆ’

ETV Bharat Logo

Copyright © 2024 Ushodaya Enterprises Pvt. Ltd., All Rights Reserved.