ಮೇಷ: ಇಂದು ನೀವು ಸೂಕ್ಷ್ಮ ಕುಸುರಿ ಮತ್ತು ಸೌಂದರ್ಯಕ್ಕೆ ಗಮನ ನೀಡುತ್ತೀರಿ. ಸುಂದರ ವಸ್ತುಗಳ ಕುರಿತಾದ ಹೊಸ ಉದ್ಯಮ ಪ್ರಾರಂಭಿಸಲು ಬಯಸುತ್ತೀರಿ. ಆದರೆ ನಿರ್ಧಾರ ಕೈಗೊಳ್ಳುವುದು ಕಷ್ಟದ ಕೆಲಸ. ಆಯ್ಕೆಗಳನ್ನು ಆವಿಷ್ಕರಿಸಿ ಮತ್ತು ಮುಕ್ತ ಮನಸ್ಸಿನಿಂದ ಇರಲು ಪ್ರಯತ್ನಿಸಿ.
ವೃಷಭ: ಇಂದು ನಿಮ್ಮೊಂದಿಗೆ ನೀವು ಕೊಂಚ ಗುಣಮಟ್ಟದ ಸಮಯ ಕಳೆಯಲು ಅತ್ಯಂತ ಸೂಕ್ತವಾದ ದಿನವಾಗಿದೆ. ಹಿಂದೆಂದೂ ಇಲ್ಲದಂತೆ ನಿರಾಳವಾಗಿ ಮತ್ತು ನವೋತ್ಸಾಹ ತುಂಬಿಕೊಳ್ಳಿ. ಈ ದಿನದಲ್ಲಿ ನಿಮ್ಮ ಮಿತ್ರರು ಹಾಗೂ ಕುಟುಂಬದೊಂದಿಗೆ ಭೋಜನಕೂಟ ಹಾಗೂ ಮನರಂಜನೆ ಪಡೆಯುವ ಸಾಧ್ಯತೆ ಇದೆ. ನೀವು ಇಂದು ಖಾರ, ಸವಿಯಾದ ಮತ್ತು ಸ್ವಾದಿಷ್ಟ ತಿನಿಸನ್ನು ಬಯಸುತ್ತೀರಿ.
ಮಿಥುನ: ಇಂದು ನೀವು ಸಂಪೂರ್ಣ ಚೈತನ್ಯ ಮತ್ತು ಅತ್ಯಂತ ಉತ್ಸಾಹದಲ್ಲಿರುತ್ತೀರಿ. ನೀವು ವಿಷಯಗಳನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡುತ್ತೀರಿ, ಅದು ನಿಮ್ಮನ್ನು ಯಶಸ್ಸಿನತ್ತ ಕರೆದುಕೊಂಡು ಹೋಗಲು ನೆರವಾಗುತ್ತದೆ. ನೀವು ಮುಕ್ತವಾಗಿ ಕಾರ್ಯ ನಿರ್ವಹಿಸಲು ಶಕ್ತರಾಗುತ್ತೀರಿ, ಆದ್ದರಿಂದ ನಿಮಗೆ ಇಷ್ಟವಾಗುವ ವಿಷಯಗಳನ್ನು ತೆಗೆದುಕೊಳ್ಳುತ್ತೀರಿ. ನಿಮಗೆ ಅತ್ಯಂತ ಒತ್ತಡವಿರಬಹುದು, ಆದರೆ ಅದು ಶಾಂತಿಯುತ ಮತ್ತು ಪುರಸ್ಕಾರಯುತ ಫಲಿತಾಂಶಗಳನ್ನು ನೀಡುತ್ತದೆ.
ಕರ್ಕಾಟಕ : ನಿಮ್ಮ ಮನಸ್ಥಿತಿ ಅಥವಾ ಮನಸ್ಸು ಅವಿಶ್ರಾಂತ ಮತ್ತು ಕೆರಳಿಸುವಂತಿರುತ್ತದೆ. ಪ್ರತಿಕೂಲ ಪರಿಸ್ಥಿತಿಗಳು ನಿಮ್ಮ ಮನೆ ಬಾಗಿಲು ತಟ್ಟುತ್ತವೆ. ಆದ್ದರಿಂದ ತಾಳ್ಮೆ ಇರಲಿ ಮತ್ತು ಅವುಗಳನ್ನು ಧೈರ್ಯದಿಂದ ಎದುರಿಸಿರಿ. ಈ ಧೈರ್ಯ ನಿಮ್ಮನ್ನು ಅಗೋಚರವಾದ ಯಶಸ್ಸಿನತ್ತ ಮುನ್ನಡೆಸುತ್ತದೆ. ಮುಂಗೋಪದ ಮನೋಭಾವ ಬಿಟ್ಟುಬಿಡಿ.
ಸಿಂಹ: ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ನೀವು ಕೆಲಸದಲ್ಲಿ ಬಹಳ ಮಹತ್ವದ ನಿರ್ಧಾರಗಳನ್ನು ದೃಢವಾಗಿ ತೆಗೆದುಕೊಳ್ಳುತ್ತೀರಿ. ಇಂದು ಕೆಲಸ ಸುಸೂತ್ರವಾಗುವುದನ್ನು ಕಾಣುತ್ತೀರಿ ಮತ್ತು ಯಶಸ್ಸು ನಿಮ್ಮನ್ನು ಅನುಸರಿಸುತ್ತದೆ.
ಕನ್ಯಾ: ವೈಯಕ್ತಿಕ ವ್ಯವಹಾರಗಳು ವೃತ್ತಿಪರತೆಯನ್ನು ಮಸುಕಾಗಿಸುತ್ತವೆ. ಇಂದು ನೀವು ನಿಮ್ಮ ಸಮಸ್ಯೆಗಳನ್ನು ಎದುರಿಸಲು ಮುಂದಾಗುತ್ತೀರಾ. ಭಾವನಾತ್ಮಕವಾಗಿ ಮುಖ್ಯವಾಗಿ ಸಂಜೆಯ ವೇಳೆ ಗೊಂದಲಗಳಿಗೆ ಸಿಲುಕಿಕೊಳ್ಳಬೇಡಿ.
ತುಲಾ: ದೀರ್ಘಕಾಲದಿಂದ ಅಥವಾ ಹಿಂದಿನ ಕಾನೂನು ಸಮಸ್ಯೆಗಳು ಕೊನೆಗೊಳ್ಳುತ್ತವೆ. ಅವುಗಳು ನ್ಯಾಯಾಲಯ ಅಥವಾ ಪರಸ್ಪರ ತಿಳಿವಳಿಕೆಯಿಂದ ಇತ್ಯರ್ಥವಾಗಬಹುದು. ಕಾರ್ಯದೊತ್ತಡ ಸಾಮಾನ್ಯವಾಗಿರುತ್ತದೆ ಮತ್ತು ಕೆಲ ಸಮಸ್ಯಾತ್ಮಕ ಸನ್ನಿವೇಶಗಳಿಂದ ಹೊರಬರಲು ಅತ್ಯುತ್ತಮ ಯೋಜನೆ ರೂಪಿಸಲು ನಿಮಗೆ ಸಮಯ ದೊರೆಯಬಹುದು.
ವೃಶ್ಚಿಕ: ಇಂದು ಕೆಲಸ ಅತಿಯಾಗಿರುತ್ತದೆ. ನೀವು ಇಂದು ಅತಿಯಾದ ಕಾರ್ಯದೊತ್ತಡ ಮತ್ತು ಜವಾಬ್ದಾರಿಗಳ ನಡುವೆ ಸಿಲುಕಿಕೊಳ್ಳುತ್ತೀರಿ. ಮಿತ್ರರೊಂದಿಗೆ ಕಳೆದ ಕಾಲ ನವೋತ್ಸಾಹ ನೀಡುತ್ತದೆ.
ಧನು: ನಿಮ್ಮ ಪ್ರೀತಿ ಚಲನೆಯಲ್ಲಿರುವಂತೆ ಕಾಣುತ್ತಿದೆ. ನೀವು ಪ್ರಣಯದ ಅಥವಾ ತಾರೆಗಳ ಪ್ರಭಾವದಲ್ಲಿದ್ದೀರಿ. ಅತ್ಯಂತ ಜಾಗರೂಕರಾಗಿರಿ ಮತ್ತು ನಿಮ್ಮ ಪ್ರೀತಿಯ ಆಸಕ್ತಿಯನ್ನು ಮುಂದಕ್ಕೆ ಕೊಂಡೊಯ್ಯುವುದನ್ನು ತಪ್ಪಿಸಿ.
ಮಕರ: ನಿಮ್ಮ ದಿನಚರಿ ಅತ್ಯಂತ ಒತ್ತಡದಲ್ಲಿದೆ ಮತ್ತು ನೀವು ದಿನದ ಅಂತ್ಯಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬರಿದಾಗುತ್ತೀರಿ. ಹೊರಗಡೆ ಸ್ಪರ್ಧಾತ್ಮಕ ಜಗತ್ತು ಇದೆ. ಆದ್ದರಿಂದ ಅತ್ಯಂತ ಜಾಗರೂಕತೆ ವಹಿಸಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಕಾಲೆಳೆಯಲು ಒಂದು ಸಣ್ಣ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಜಾಣ್ಮೆಯಿಂದಿರಿ ಮತ್ತು ನಿಮ್ಮನ್ನು ಕೆಳಕ್ಕೆಳೆಯಲು ಪ್ರಯತ್ನಿಸಿದವರಿಗೆ ಎಲ್ಲವನ್ನೂ ಹಿಂದಿರುಗಿಸಿ ನೀಡಿ.
ಕುಂಭ: ಶೈಕ್ಷಣಿಕ ವಿಷಯಕ್ಕೆ ಬಂದರೆ ನಿಮಗೆ ಅಸಾಧಾರಣ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಸುತ್ತಲಿನ ಬಹುತೇಕರನ್ನು ಪ್ರೇರೇಪಿಸುತ್ತೀರಿ. ನಿಮ್ಮ ಇಮೇಜ್ ಕುರಿತು ಎಚ್ಚರವಾಗಿರಿ, ಅತಿಯಾದ ಮಹತ್ವಾಕಾಂಕ್ಷೆಗೆ ಬೀಳಬೇಡಿ. ಜನರ ಕುರಿತಾಗಿ ನಮ್ರ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಿ.
ಮೀನ: ದಣಿವಿರದೆ ಹಾಗೂ ಅತ್ಯಂತ ಕಠಿಣ ಪರಿಶ್ರಮಪಡುವವರಿಗೆ ಇದು ಅತ್ಯುತ್ತಮ ದಿನವಾಗಿದೆ. ಇಂದು ನಿಮ್ಮ ಕೆಲಸದಲ್ಲಿ ಆವಿಷ್ಕಾರ ಮತ್ತು ಸೃಜನಶೀಲತೆಯನ್ನು ತರುತ್ತೀರಿ. ದೇವರ ಆಶೀರ್ವಾದ ಯಶಸ್ಸಿಗೆ ದಾರಿಯಾಗುತ್ತದೆ. ಆದ್ದರಿಂದ ಶ್ರಮವಹಿಸಿ ಕೆಲಸ ಮಾಡಿ ಮತ್ತು ವೈಫಲ್ಯಗಳಿಂದ ಕಂಗೆಡಬೇಡಿ.