ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ತಮ್ಮ ಚಾರ್ಟರ್ಡ್ ವಿಮಾನಗಳು ಇಳಿಯಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ರಾಜಸ್ಥಾನ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿಗಳ ಆರೋಪದ ವರದಿಗಳನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಶನಿವಾರ ನಿರಾಕರಿಸಿದೆ. ರಾಜ್ಯ ಮುಖ್ಯಮಂತ್ರಿಗಳ ವಿಮಾನಗಳಿಗೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
-
No request from CM Rajasthan has been denied. While all scheduled flights of commercial Aircrafts and movement of Governors and State Chief Ministers on their State aircrafts are allowed, private chartered flights require specific MHA approval. (2/2)
— Spokesperson, Ministry of Home Affairs (@PIBHomeAffairs) September 9, 2023 " class="align-text-top noRightClick twitterSection" data="
">No request from CM Rajasthan has been denied. While all scheduled flights of commercial Aircrafts and movement of Governors and State Chief Ministers on their State aircrafts are allowed, private chartered flights require specific MHA approval. (2/2)
— Spokesperson, Ministry of Home Affairs (@PIBHomeAffairs) September 9, 2023No request from CM Rajasthan has been denied. While all scheduled flights of commercial Aircrafts and movement of Governors and State Chief Ministers on their State aircrafts are allowed, private chartered flights require specific MHA approval. (2/2)
— Spokesperson, Ministry of Home Affairs (@PIBHomeAffairs) September 9, 2023
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತಮ್ಮ ವಿಮಾನಗಳನ್ನು ದೆಹಲಿಯಲ್ಲಿ ಇಳಿಸಲು ಅನುಮತಿ ನೀಡುತ್ತಿಲ್ಲ ಎಂದು ದೂರಿದ್ದರು. ದೆಹಲಿಯು ಈಗ ಹಾರಾಟ ನಿಷೇಧಿತ ವಲಯವಾಗಿದೆ. ಹೀಗಾಗಿ ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ20 ನಾಯಕರ ಶೃಂಗಸಭೆಯ ಔತಣಕೂಟದಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ಛತ್ತೀಸ್‌ಗಢ ಸಿಎಂ ಬಘೇಲ್ ತಿಳಿಸಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಇಲಾಖೆ ರಾಜ್ಯಗಳ ಮುಖ್ಯಮಂತ್ರಿಗಳ ವಿಮಾನಗಳಿಗೆ ಅನುಮತಿ ಕೊಡಲಾಗಿದೆ ಎಂದು ಹೇಳಿದೆ.
2023ರ ಸೆಪ್ಟೆಂಬರ್ 8ರಿಂದ 11ರವರೆಗೆ ದೆಹಲಿಯಲ್ಲಿ ನಡೆಯಲಿರುವ ಜಿ20 ನಾಯಕರ ಶೃಂಗಸಭೆಗೆ ಹೈಟೆಕ್ ಭದ್ರತಾ 'ಏರ್ ಕವರ್' ನಿಯೋಜಿಸಲಾಗಿದೆ. ಆದರೆ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ವಿಮಾನಗಳ ಹಾರಾಟಕ್ಕೆ ಅನುಮತಿಸಲಾಗಿದೆ ಎಂದು ಗೃಹ ಸಚಿವಾಲಯ ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟ್ಟರ್)ನಲ್ಲಿ ಪೋಸ್ಟ್ ಮಾಡಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೂ ಗೃಹ ಸಚಿವಾಲಯ ಇದೇ ರೀತಿಯ ಪ್ರತಿಕ್ರಿಯೆ ನೀಡಿದೆ. ರಾಜಸ್ಥಾನ ಸಿಎಂ ಅವರ ಯಾವುದೇ ಮನವಿಯನ್ನು ತಿರಸ್ಕರಿಸಿಲ್ಲ ಎಂದು ತಿಳಿಸಿದೆ. ವಾರ್ತಾ ವರದಿಗಳಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅವರು ತಮ್ಮ ಹೆಲಿಕಾಪ್ಟರ್ ಹಾರಾಟಕ್ಕೆ ಎಂಎಚ್‌ಎ ಅನುಮತಿ ನಿರಾಕರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸಿಕರ್ ಸೇರಿದಂತೆ ವಿಮಾನ ಅನುಮತಿಗಳಿಗಾಗಿ ರಾಜಸ್ಥಾನ ಸಿಎಂ ಅವರಿಂದ ನಾಲ್ಕು ವಿನಂತಿಗಳನ್ನು ಸ್ವೀಕರಿಸಲಾಗಿತ್ತು. ಎಲ್ಲವನ್ನೂ ಎಂಎಚ್‌ಎ ಅನುಮೋದಿಸಿದೆ ಎಂದು ತಿಳಿಸಿದೆ.
ರಾಜಸ್ಥಾನದ ಮುಖ್ಯಮಂತ್ರಿಗಳ ಯಾವುದೇ ಮನವಿಯನ್ನು ತಿರಸ್ಕರಿಸಲಾಗಿಲ್ಲ. ವಾಣಿಜ್ಯ ವಿಮಾನಗಳ ಎಲ್ಲ ನಿಗದಿತ ವಿಮಾನಗಳು ಮತ್ತು ರಾಜ್ಯಪಾಲರು ಮತ್ತು ರಾಜ್ಯ ಮುಖ್ಯಮಂತ್ರಿಗಳ ಅವರ ರಾಜ್ಯದ ವಿಮಾನಗಳಲ್ಲಿ ಹಾರಾಟ ಮಾಡಲು ಅನುಮತಿಸಲಾಗಿದೆ, ಖಾಸಗಿ ಚಾರ್ಟರ್ಡ್ ವಿಮಾನಗಳಿಗೆ ನಿರ್ದಿಷ್ಟವಾಗಿ ಗೃಹ ಸಚಿವಾಲಯದ ಅನುಮೋದನೆ ಅಗತ್ಯವಿರುತ್ತದೆ ಎಂದು ಮತ್ತೊಂದು ಪೋಸ್ಟ್ ಮಾಡಲಾಗಿದೆ.
ಇದಕ್ಕೂ ಮೊದಲು ದೆಹಲಿ ವಿಮಾನ ನಿಲ್ದಾಣವು ಎರಡು ದಿನಗಳ ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ನಿಗದಿತ ವಿಮಾನಯಾನ ವಿಮಾನಗಳು ಮತ್ತು ವಿಶೇಷ ಜಿ20 ಶೃಂಗಸಭೆಯ ವಿಮಾನಗಳಿಗೆ ಮಾತ್ರ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಮತ್ತು ಟೇಕ್ ಆಫ್ ಮಾಡಲು ಅನುಮತಿ ನೀಡಲಾಗುವುದು ಎಂದು ತಿಳಿಸಿತ್ತು. ಈ ಸೂಚನೆಯ ಪ್ರಕಾರ, ಸಾಮಾನ್ಯ ವಿಮಾನಗಳು ಮತ್ತು ನಿಗದಿತವಲ್ಲದ ಚಾರ್ಟರ್ ವಿಮಾನಗಳು ಸೇರಿದಂತೆ ನಿಗದಿತವಲ್ಲದ ಎಲ್ಲ ಇತರ ವಿಮಾನಗಳಿಗೆ ಶೃಂಗಸಭೆ ಮುಗಿಯುವವರೆಗೆ ವಿಮಾನ ನಿಲ್ದಾಣವನ್ನು ಬಳಸುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: G20 ಔತಣಕೂಟಕ್ಕೆ 170 ಗಣ್ಯರಿಗೆ ರಾಷ್ಟ್ರಪತಿ ಮುರ್ಮು ಆಹ್ವಾನ: ರಾಜಕೀಯ ನಾಯಕರಿಗಿಲ್ಲ Invite..