ನವದೆಹಲಿ: ಅಸ್ಸೋಂ-ಮಿಜೋರಾಂ ಗಡಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ. ಅಮಿತ್ ಶಾ ಜನರಲ್ಲಿ ‘ದ್ವೇಷ ಮತ್ತು ಅಪನಂಬಿಕೆ ಬಿತ್ತುವ’ ಮೂಲಕ ದೇಶವನ್ನು ವಿಫಲಗೊಳಿಸಿದ್ದಾರೆ. ಈಗ ದೇಶದಲ್ಲಿ ಜನ ಭಯಾನಕ ಸ್ಥಿತಿ ಎದುರಿಸುವಂತಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
-
Heartfelt condolences to the families of those who’ve been killed. I hope the injured recover soon.
— Rahul Gandhi (@RahulGandhi) July 27, 2021 " class="align-text-top noRightClick twitterSection" data="
HM has failed the country yet again by sowing hatred and distrust into the lives of people. India is now reaping its dreadful consequences. #AssamMizoramBorder pic.twitter.com/HJ3n2LHrG8
">Heartfelt condolences to the families of those who’ve been killed. I hope the injured recover soon.
— Rahul Gandhi (@RahulGandhi) July 27, 2021
HM has failed the country yet again by sowing hatred and distrust into the lives of people. India is now reaping its dreadful consequences. #AssamMizoramBorder pic.twitter.com/HJ3n2LHrG8Heartfelt condolences to the families of those who’ve been killed. I hope the injured recover soon.
— Rahul Gandhi (@RahulGandhi) July 27, 2021
HM has failed the country yet again by sowing hatred and distrust into the lives of people. India is now reaping its dreadful consequences. #AssamMizoramBorder pic.twitter.com/HJ3n2LHrG8
ಅಸ್ಸೋಂ ಮತ್ತು ಮಿಜೋರಾಂ ಗಡಿಯಲ್ಲಿ ಸೋಮವಾರ ಭುಗಿಲೆದಿದ್ದ ಹಿಂಸಾಚಾರದಲ್ಲಿ ಆರು ಅಸ್ಸೋಂ ಪೊಲೀಸರು ಸಾವನ್ನಪ್ಪಿದ್ದು ಮತ್ತು 60ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.
ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಕುಟುಂಬಗಳಿಗೆ ಸಂತಾಪ ಹೇಳಿರುವ ಅವರು, ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಅಂತಾ ಹಿಂಸಾಚಾರದ ಉದ್ದೇಶಿತ ವೀಡಿಯೊವನ್ನು ಟ್ಯಾಗ್ ಮಾಡಿ ರಾಗಾ ಟ್ವೀಟ್ ಮಾಡಿದ್ದಾರೆ.
ಜನರ ಜೀವನದಲ್ಲಿ ದ್ವೇಷ ಮತ್ತು ಅಪನಂಬಿಕೆಯನ್ನು ಬಿತ್ತುವ ಮೂಲಕ ಕೇಂದ್ರ ಗೃಹ ಸಚಿವ ದೇಶವನ್ನು ಮತ್ತೊಮ್ಮೆ ವಿಫಲಗೊಳಿಸಿದ್ದಾರೆ. ಈಗ ಇದರ ಭಯಾನಕ ಪರಿಣಾಮಗಳನ್ನು ದೇಶ ಎದುರಿಸುತ್ತಿದೆ ಎಂದು ಕಾಂಗ್ರೆಸ್ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಲೈಟ್ ಮೆಷಿನ್ ಗನ್ (ಎಲ್‌ಎಂಜಿ) ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡು ಪ್ರಮುಖ ವೈಶಿಷ್ಟ್ಯಗಳಿಂದ ಮಿಜೋರಾಂ ಪೊಲೀಸರು ಅಸ್ಸೋಂ ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಸ್ಸೋಂ ಸರ್ಕಾರ ಸೋಮವಾರ ಆರೋಪಿಸಿದೆ.
ಅಸ್ಸೋಂನ ಬರಾಕ್ ಕಣಿವೆ ಜಿಲ್ಲೆಗಳಾದ ಕ್ಯಾಚರ್, ಕರಿಂಗಂಜ್ ಮತ್ತು ಹೈಲಕಂಡಿ ಮಿಜೋರಾಂನ ಮೂರು ಜಿಲ್ಲೆಗಳಾದ ಐಜಾಲ್, ಕೋಲಾಸಿಬ್ ಮತ್ತು ಮಾಮಿಟ್ ಜೊತೆ 164 ಕಿ.ಮೀ ಗಡಿಯನ್ನು ಹಂಚಿಕೊಂಡಿದ್ದಾರೆ. ಪ್ರಾದೇಶಿಕ ವಿವಾದದ ನಂತರ, ಆಗಸ್ಟ್ 2020 ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಅಂತರ ರಾಜ್ಯ ಗಡಿಯಲ್ಲಿ ಘರ್ಷಣೆಗಳು ನಡೆದವು.