ಮಥುರಾ(ಉತ್ತರ ಪ್ರದೇಶ): ದೇಶಾದ್ಯಂತ ಇಂದು ಸಡಗಡ ಸಂಭ್ರಮದಿಂದ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲಾಗುತ್ತಿದೆ. ಉತ್ತರ ಪ್ರದೇಶದ ಮಥುರಾ ಸಮೀಪದಲ್ಲಿ ಹೋಳಿ ಹಬ್ಬದ ನಿಮಿತ್ತ ಉರಿಯುತ್ತಿರುವ ಬೃಹತ್ ಬೆಂಕಿಯ ಜ್ವಾಲೆಯನ್ನು ವ್ಯಕ್ತಿಯೊರ್ವ ಹಾದು ಹೋಗುವ ಪ್ರಾಚೀನಾಕಾಲದ ಸಂಪ್ರದಾಯ ಮೈ ಜುಮ್ ಎನಿಸುವಂತಿದೆ.
ಶೆರ್ಗಢ್ ಪ್ರದೇಶದ ಫಲೇನ್ ಗ್ರಾಮದಲ್ಲಿ ಬೆಂಕಿ ದಾಟುವ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪಾಂಡವರ ಮನೆತನದ ಮೋನು ಪಂದಳ ಒಂದು ತಿಂಗಳ ಕಠಿಣ ತಪಸ್ಸಿನ ನಂತರ ಹೋಲಿ ದಹನದ ಬೆಂಕಿಯಿಂದ ಹೊರಬಂದು ಪ್ರಹ್ಲಾದ ಕುಂಡದಲ್ಲಿ ಸ್ನಾನ ಮಾಡುತ್ತಾರೆ. ಧಗಧಗನೆ ಉರಿಯುವ ಜ್ವಾಲೆ ನಡುವೆಯೂ ಬರಿಗಾಲಿನಲ್ಲಿ ಹೊರಬರುವ ಮೋನುಗೆ ಮೈಮೇಲೆ ಒಂದೇ ಒಂದು ಸಣ್ಣ ಗಾಯವೂ ಆಗುವುದಿಲ್ಲ.
ಇದನ್ನು ನೋಡಲು ಲಕ್ಷಾಂತರ ಭಕ್ತರು ಫಲೇನ್ ಗ್ರಾಮಕ್ಕೆ ಆಗಮಿಸಿದ್ದರು. ಈ ಗ್ರಾಮವನ್ನು ಪ್ರಹ್ಲಾದ್ ನಗರಿ ಎಂತಲೂ ಕರೆಯುತ್ತಾರೆ. ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರದಲ್ಲಿರುವ ಶೇರ್ಗಢ್ ಪ್ರದೇಶದಲ್ಲಿರುವ ಫಲೇನ್‌ನಲ್ಲಿ ವಿಶಿಷ್ಟ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ.
ಗ್ರಾಮದಲ್ಲಿರುವ ಪುರಾತನ ಪ್ರಹ್ಲಾದ ಕುಂಡದಲ್ಲಿ ನಿತ್ಯ ಸ್ನಾನ, ಪ್ರಹ್ಲಾದ ದೇವಸ್ಥಾನದಲ್ಲಿ ಕಠಿಣ ತಪಸ್ಸು ಮಾಡಲಾಗುತ್ತದೆ. ತಪಸ್ಸಿಗೆ ಕುಳಿತುಕೊಳ್ಳುವ ಈತ ಒಂದು ತಿಂಗಳು ಮನೆಗೆ ಹೋಗುವುದಿಲ್ಲ. ಒಬ್ಬನೇ ತಪಸ್ಸು ಮಾಡಿ ಪ್ರಹ್ಲಾದನ ಭಕ್ತಿಯಲ್ಲಿ ಮಗ್ನನಾಗುತ್ತಾನೆ.
ಪಾಂಡ ಕುಟುಂಬದ ಸದಸ್ಯರೊಬ್ಬರಿಗೆ ಹಿಂದೆ ದೇವರು ಕನಸಿನಲ್ಲಿ ಕಾಣಿಸಿಕೊಂಡು ಭಕ್ತ ಪ್ರಹ್ಲಾದನನ್ನು ಮರದ ಕೆಳಗೆ ಸಮಾಧಿ ಮಾಡಲಾಗಿದೆ. ವಿಗ್ರಹವನ್ನು ಹೊರತೆಗೆದು ದೇವಾಲಯವನ್ನು ಸ್ಥಾಪಿಸಬೇಕು ಎಂದು ಹೇಳಿದ್ದನಂತೆ. ಈ ಕುಟುಂಬದ ಸದಸ್ಯರು ಮರದ ಬಳಿ ಬಂದು ನೋಡಿದಾಗ ನೆಲದೊಳಗೆ ಪ್ರಹ್ಲಾದನ ವಿಗ್ರಹ ಕಂಡಿದ್ದರಂತೆ. ಆ ನಂತರ ಇಲ್ಲಿ ಭವ್ಯವಾದ ದೇವಾಲಯ ನಿರ್ಮಿಸಲಾಯಿತು. ಅಂದಿನಿಂದ ಈ ಪ್ರದೇಶವನ್ನು ಪ್ರಹ್ಲಾದ್ ನಗರ ಎಂದು ಕರೆಯುತ್ತಾರೆ.
ಇದನ್ನೂ ಓದಿ: ದೇಶಾದ್ಯಂತ ಕಳೆಗಟ್ಟಿದ ಹೋಳಿ ಸಂಭ್ರಮ.. ಎಲ್ಲೆಲ್ಲಿ ಹೇಗಿತ್ತು ಸಡಗರ?