ETV Bharat / bharat

ಬಸಂತ ಪಂಚಮಿ ಹಿನ್ನೆಲೆ ಮಥುರಾ ದೇವಾಲಯಗಳಲ್ಲಿ ವಿಶೇಷ ಪೂಜೆ.. ಹೋಳಿ ಸಂಭ್ರಮ ಶುರು

author img

By

Published : Feb 5, 2022, 1:34 PM IST

ಮಥುರಾ - ವೃಂದಾವನದಲ್ಲಿ ತಾಯಿ ಶಾರದಾ ಪೂಜೆಯನ್ನು ಅದ್ಧೂರಿಯಾಗಿ ಮಾಡಲಾಗಿದೆ. ಈ ಪೂಜೆ ಹೋಳಿ ಹಬ್ಬದ ಆಗಮನವನ್ನು ಸೂಚಿಸುತ್ತದೆ.

holi begins in vrindavan with basant panchami
ಹೋಳಿ ಸಂಭ್ರಮ ಶುರು

ಮಥುರಾ (ಉತ್ತರ ಪ್ರದೇಶ): ತಾಯಿ ಸರಸ್ವತಿ ದೇವಿಯ ಆರಾಧನೆಗೆ ಮೀಸಲಾದ ದಿನವೇ ವಸಂತ ಅಥವಾ ಬಸಂತ ಪಂಚಮಿ. ಇದನ್ನು ಪ್ರತಿವರ್ಷ ಮಾಘ ಶುಕ್ಲ ಪಂಚಮಿಯಲ್ಲಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಫೆಬ್ರವರಿ 5ರ ಇಂದು ವಸಂತ ಪಂಚಮಿ ಹಬ್ಬ ಬಂದಿದೆ. ವಸಂತ ಪಂಚಮಿ ದಿನವನ್ನು ಜ್ಞಾನ, ಸಂಗೀತ, ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನದ ದೇವತೆಯಾದ ಸರಸ್ವತಿಗೆ ಸಮರ್ಪಿಸಲಾಗಿರುವುದರಿಂದ ಇದನ್ನು 'ಸರಸ್ವತಿ ಪೂಜೆ' ಎಂದೂ ಕರೆಯುತ್ತಾರೆ. ವಸಂತ ಪಂಚಮಿಯು ಹೋಳಿ ಹಬ್ಬದ ಆಗಮನವನ್ನು ಸೂಚಿಸುತ್ತದೆ.

ಮಥುರಾ-ವೃಂದಾವನದಲ್ಲಿ ತಾಯಿ ಶಾರದಾ ಪೂಜೆಯನ್ನು ಅದ್ಧೂರಿಯಾಗಿ ಮಾಡಲಾಗಿದೆ. ಈ ಪೂಜೆ ಹೋಳಿ ಹಬ್ಬದ ಆಗಮನ ಸೂಚಿಸುತ್ತದೆ. ಇಂದು ಭಕ್ತರಿಗೆ ಗುಲಾಲ್​ ಮತ್ತು ಅಬೀರ್ ಅನ್ನು (ಬಣ್ಣ/ಹೋಳಿ) ಸುರಿಯಲಾಗುತ್ತದೆ. ಬ್ರಜ್‌ನ ಎಲ್ಲಾ ದೇವಾಲಯಗಳಲ್ಲಿ ಬಣ್ಣ ಎರಚುವ ಸಂಪ್ರದಾಯವಿದೆ. ಈ ಬಣ್ಣದ ಉತ್ಸವದಲ್ಲಿ ಭಾಗವಹಿಸಲು ಭಕ್ತರು ಇಲ್ಲಿಗೆ ಬರಲು ಆರಂಭಿಸಿದ್ದಾರೆ.

ಮಥುರಾ ದೇವಾಲಯಗಳಲ್ಲಿ ವಿಶೇಷ ಪೂಜೆ..... ಹೋಳಿ ಸಂಭ್ರಮ ಶುರು

ಬ್ರಜ್‌ನ ದೇವಾಲಯಗಳಲ್ಲಿ 40 ದಿನಗಳ ಕಾಲ ಹೋಳಿ ಸಂಭ್ರಮ ಇರುತ್ತದೆ. ಜೊತೆಗೆ ಹೂವುಗಳ ಹೋಳಿಯೂ ಇರುತ್ತದೆ. ಒಟ್ಟಾರೆ ಭಕ್ತರು ಬಣ್ಣಗಳಲ್ಲಿ ಮಿಂದೇಳುತ್ತಾರೆ. ಇಲ್ಲಿನ ದೇವಾಲಯಗಳಲ್ಲಿ ಬಿಳಿ ಮತ್ತು ಹಳದಿ ಬಟ್ಟೆಗಳನ್ನು ಧರಿಸಿ ಬಸಂತ್ ಪಂಚಮಿ ಆಚರಿಸುತ್ತಾರೆ.

ಇದನ್ನೂ ಓದಿ: UP Polls: ನಾಮಪತ್ರ ಸಲ್ಲಿಕೆಗೆ 'ಕಸರತ್ತು'.. ಓಡೋಡಿ ಬಂದು ಯುಪಿ ಸಚಿವನ ನಾಮಿನೇಷನ್

ಬಸಂತ್ ಪಂಚಮಿ ಸಲುವಾಗಿ ಭದ್ರತೆ ವಹಿಸಲಾಗಿದೆ. ವೃಂದಾವನ ಬಂಕೆ ಬಿಹಾರಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಚಾರ ವ್ಯವಸ್ಥೆಯನ್ನೂ ಸುಧಾರಿಸಲಾಗಿದೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ ಕೋವಿಂದ್​ ಬಸಂತ ಪಂಚಮಿಯ ಶುಭಾಶಯ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.