ETV Bharat / bharat

ಉತ್ತರಪ್ರದೇಶದ ಜೈಲಿನ 23 ಕೈದಿಗಳಿಗೆ ಹೆಚ್​ಐವಿ ಸೋಂಕು - ಕೈದಿಗಳಿಗೆ ಏಡ್ಸ್​ ಸೋಂಕು

ಉತ್ತರಪ್ರದೇಶದ ಜಿಲ್ಲಾ ಕಾರಾಗೃಹದಲ್ಲಿನ 23 ಕೈದಿಗಳಿಗೆ ಕ್ಷಯರೋಗದ ಬಳಿಕ ಹೆಚ್​ಐವಿ ಸೋಂಕು ಕಾಣಿಸಿಕೊಂಡಿದೆ. ಹೊಸ ಮತ್ತು ಹಳೆದ ಕೈದಿಗಳು ಇದರಲ್ಲಿದ್ದಾರೆ. ಸೋಂಕಿನ ಹಿನ್ನೆಲೆಯನ್ನು ಜೈಲಧಿಕಾರಿಗಳು, ಆರೋಗ್ಯ ಇಲಾಖೆ ಪತ್ತೆ ಕಾರ್ಯಕ್ಕೆ ಮುಂದಾಗಿದೆ.

ಉತ್ತರಪ್ರದೇಶದ ಜೈಲಿನ 23 ಕೈದಿಗಳಿಗೆ ಹೆಚ್​ಐವಿ ಸೋಂಕು

author img

By

Published : Jul 12, 2022, 3:52 PM IST

ಸಹರಾನ್​ಪುರ: ಉತ್ತರಪ್ರದೇಶದ ಸಹರಾನ್​ಪುರ ಜಿಲ್ಲಾ ಕಾರಾಗೃಹದ 23 ಕೈದಿಗಳಿಗೆ ಮಾರಣಾಂತಿಕ ಹೆಚ್​ಐವಿ ಸೋಂಕು ತಗುಲಿದೆ. ಇದನ್ನು ಆರೋಗ್ಯ ಇಲಾಖೆಯೇ ದೃಢಪಡಿಸಿದ್ದು, ಜೈಲು ಅಧಿಕಾರಿಗಳನ್ನು ಕಂಗೆಡಿಸಿದೆ. ಸೋಂಕಿನ ಮೂಲದ ಬಗ್ಗೆ ಪತ್ತೆ ಮಾಡಲು ಆದೇಶಿಸಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಮಾಹಿತಿ ರವಾನಿಸಲಾಗಿದೆ.

ಜೂನ್ 15 ರಂದು ಸಹರಾನ್‌ಪುರ ಜಿಲ್ಲಾ ಕಾರಾಗೃಹದಲ್ಲಿ ಒಂದು ವಾರ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಈ ವೇಳೆ, ನಡೆಸಿದ ತಪಾಸಣೆಯಲ್ಲಿ ಕೈದಿಗಳಿಗೆ ಏಡ್ಸ್​ ಇರುವುದು ಗೊತ್ತಾಗಿದೆ. ಸೋಂಕಿತ ಕೈದಿಗಳಿಗೆ ಅಗತ್ಯ ಚಿಕಿತ್ಸೆ ನೀಡುವುದರ ಜೊತೆಗೆ, ಕಾರಾಗೃಹದಲ್ಲಿರುವ 2200 ಕೈದಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ.

23 ಖೈದಿಗಳಿಗೆ ಹೆಚ್​ಐವಿ ಪಾಸಿಟಿವ್ ಕಂಡು ಬಂದಿದ್ದರಲ್ಲಿ ಹೆಚ್ಚಿನ ಖೈದಿಗಳು ಬೆಹತ್, ಗಂಗೋಹ್, ನಕುದ್ ಮತ್ತು ದಿಯೋಬಂದ್‌ನಿಂದ ಬಂದವರಾಗಿದ್ದು, ಆರೋಗ್ಯ ಇಲಾಖೆ ಈಗ ಅವರ ಹಿನ್ನೆಲೆಯನ್ನು ಸಂಗ್ರಹಿಸುತ್ತಿದೆ. ಈ ಕೈದಿಗಳ ಚಿಕಿತ್ಸೆಗಾಗಿ ಜೈಲು ಆಡಳಿತವು ಎಆರ್‌ಟಿ ಕೇಂದ್ರಕ್ಕೆ ಪತ್ರವನ್ನೂ ಬರೆದಿದೆ.

ಸೋಂಕಿನ ಹಿನ್ನೆಲೆ ಪತ್ತೆ: "ಎಚ್‌ಐವಿ ಪಾಸಿಟಿವ್‌ ಬಂದ 23 ಕೈದಿಗಳ ಪೈಕಿ 6 ಮಂದಿ ಹೊಸಬರಾಗಿದ್ದಾರೆ. ಉಳಿದವರು ಹಳೆಯ ಕೈದಿಗಳು. ಅವರಲ್ಲಿ ಹೆಚ್ಚಿನವರು ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸೋಂಕು ತಗುಲಿದ ಬಗ್ಗೆ ಪತ್ತೆ ಕಾರ್ಯ ನಡೆಸಲಾಗುತ್ತಿದೆ" ಎಂದು ಜೈಲು ಅಧೀಕ್ಷಕಿ ಅನಿತಾ ದುಬೆ ತಿಳಿಸಿದ್ದಾರೆ.

“ಕಳೆದ 5 ತಿಂಗಳಲ್ಲಿ 2 ಬಾರಿ ಜೈಲಿನಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ. ಕಳೆದ ಬಾರಿ ಕೆಲವು ಕೈದಿಗಳಿಗೆ ಕ್ಷಯರೋಗ(ಟಿ.ಬಿ) ಇರುವುದು ಪತ್ತೆಯಾದ ಕಾರಣ ಅವರ ಹೆಚ್‌ಐವಿ ಪರೀಕ್ಷೆಯನ್ನೂ ಮಾಡಿಸಲಾಗಿತ್ತು. ಈ ವೇಳೆ, ಹೆಚ್​​ಐವಿ ಪಾಸಿಟಿವ್​ ಕಂಡು ಬಂದಿದೆ. ಈ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಓದಿ: Viral Video: ಟೋಲ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ದಿ ಗ್ರೇಟ್ ಖಲಿ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.