ನವದೆಹಲಿ: ನಗರದ ಕಾಂಜಾವಾಲಾ ಸುಲ್ತಾನಪುರಿಯಲ್ಲಿ ಯುವತಿಗೆ ಕಾರು ಡಿಕ್ಕಿ ಹೊಡೆದು 12 ಕಿ ಮೀ ವರೆಗೂ ಎಳೆದೊಯ್ದ ಪ್ರಕರಣ ಮರೆ ಮಾಚುವ ಮುನ್ನವೇ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನವದೆಹಲಿಯಲ್ಲಿ ದಾಖಲಾಗಿ,ಸಾರ್ವಜನಿಕರನ್ನು ಕೆರಳಿಸಿದೆ. ಮಂಗಳವಾರ ತಡರಾತ್ರಿ ನೈಋತ್ಯ ದೆಹಲಿಯ ಐಐಟಿ ಬಳಿ ಸಂಭವಿಸಿದ ಹಿಟ್ ಅಂಡ್ ರನ್ ಪ್ರಕರಣ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಬ್ಬರನ್ನೂ ನಗರದ ಸಫ್ದರ್‌ಜಂಗ್ ಹಾಗೂ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಒಬ್ಬ ವಿದ್ಯಾರ್ಥಿಗೆ ತೀವ್ರ ಗಾಯಗಳಾಗಿದ್ದು, ಜೀವನ್ಮರಣ ಹೋರಾಟದಲ್ಲಿ ಬದುಕಿದ್ದಾನೆ.
ಅಶ್ರಫ್ ನವಾಜ್ ಖಾನ್ (30) ತೀವ್ರ ರಕ್ತಸ್ರಾವದಿಂದ ಬಳಲಿದ್ದ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದರೆ, ಇನ್ನೊಬ್ಬ ವಿದ್ಯಾರ್ಥಿ ಅಂಕುರ್ ಶುಕ್ಲಾ (29) ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ನೈಋತ್ಯ ಡಿಸಿಪಿ ಮನೋಜ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ನೈಋತ್ಯ ದೆಹಲಿಯ ಐಐಟಿ ಬಳಿ ನಡೆದ ಅಪಘಾತವನ್ನು ಖಚಿತಪಡಿಸಿದ್ದು, ಈ ಇಬ್ಬರೂ ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಇಬ್ಬರೂ ರಸ್ತೆ ದಾಟುತ್ತಿದ್ದರು. ವಿದ್ಯಾರ್ಥಿಗಳು ಐಐಟಿ ದೆಹಲಿಯಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.
ಅಶ್ರಫ್ ನವಾಜ್ ಖಾನ್ (30) ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ವೇಳೆ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅಂಕುರ್ ಶುಕ್ಲಾ (29) ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಕಾಲು ಮುರಿತವಾಗಿದೆ ಎಂದು ತಿಳಿಸಿದ್ದಾರೆ. ಇಬ್ಬರೂ ಎಸ್‌ಡಿಎ ಮಾರುಕಟ್ಟೆ ಬಳಿಯ ರೆಸ್ಟೋರೆಂಟ್‌ಗೆ ಹೋಗುತ್ತಿದ್ದರು. ಇಬ್ಬರು ರಸ್ತೆ ದಾಟುತ್ತಿದ್ದಾಗ ನೆಹರೂ ಪ್ಲೇಸ್ ಕಡೆಯಿಂದ ಬರುತ್ತಿದ್ದ ಅತಿ ವೇಗದ ಕಾರು ಡಿಕ್ಕಿ ಹೊಡೆದು, ಪರಾರಿಯಾಗಿದೆ. ಸ್ವಲ್ಪ ದೂರದಲ್ಲಿ ಆ ಕಾರನ್ನು ಅಪಘಾತದ ಸ್ಥಿತಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದರು. ಕಾರು ಚಾಲಕನನ್ನು ಗುರುತಿಸಲಾಗಿದೆ. ಆದರೆ, ಆತನನ್ನು ಇನ್ನೂ ಬಂಧಿಸಿಲ್ಲ ಎಂದು ನೈಋತ್ಯ ಡಿಸಿಪಿ ಮನೋಜ್ ತಿಳಿಸಿದ್ದಾರೆ.
ನೈಋತ್ಯ ದೆಹಲಿಯ ಐಐಟಿ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ವಿದ್ಯಾರ್ಥಿ ಸಾವು ಪ್ರಕರಣವೂ ದೆಹಲಿಯ ಕೇಜ್ರಿವಾಲ್ ಸರ್ಕಾರಕ್ಕೂ ಬಿಸಿ ತಟ್ಟಲಿದೆಯಾ? ಮತ್ತೆ ಇಕ್ಕಟ್ಟಿನಲ್ಲಿ ದೆಹಲಿ ಸರ್ಕಾರವನ್ನು ಸಿಲುಕಿಸಲು ಪ್ರತಿಪಕ್ಷಗಳು ಹೋರಾಟಕ್ಕಿಳಿಯಲಿವೆ ಎಂಬ ಚರ್ಚೆ ನವದೆಹಲಿ ವಲಯದಲ್ಲಿ ನಡೆಯುತ್ತಿದೆ.
ಯುವತಿಯನ್ನು 12 ಕಿಮೀ ವರೆಗೂ ಎಳೆದೊಯ್ದ ಕಾರು: ದೆಹಲಿಯ ಸುಲ್ತಾನ್‌ಪುರಿಯಲ್ಲಿ ಹೊಸ ವರ್ಷಾಚರಣೆ ನಡುವೆ ಡಿಸೆಂಬರ್ 31 ರ ತಡರಾತ್ರಿ 1.30 ರ ರಾತ್ರಿ ಅಂಜಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು, 12 ಕಿಮೀ ವರೆಗೂ ಎಳೆದೊಯ್ದಿತ್ತು. ದುಷ್ಟರ ಈ ಕೃತ್ಯದಿಂದ ಅಂಜಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹಿಟ್ ಅಂಡ್ ರನ್ ಪ್ರಕರಣದಿಂದ ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಯಿತು. ನಂತರ ಕಾರಿನಲ್ಲಿದ್ದ ಐವರು ಆರೋಪಿಗಳನ್ನು ಬಂಧಿಸಿ, ಮತ್ತಷ್ಟು ವಿಚಾರಣೆಗೊಳಪಡಿಸಲಾಗಿತ್ತು. ಮತ್ತೆ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ದೆಹಲಿ ಸರ್ಕಾರವು ತನ್ನ ವಿಸ್ತೃತ ತನಿಖಾ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿತ್ತು. ವರದಿಯನ್ನು ಪರಿಶೀಲಿಸಿ, ಮೂರು ಪಿಸಿಆರ್‌ಗಳು ಮತ್ತು ಎರಡು ಪೊಲೀಸ್ ಪಿಕೆಟ್‌ಗಳಲ್ಲಿ ನಿಯೋಜಿಸಿದ್ದ ಪೊಲೀಸರನ್ನು ಅಮಾನತುಗೊಳಿಸುವಂತೆ ಗೃಹ ಸಚಿವಾಲಯವು ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚಿಸಿತ್ತು. ಇದರ ನಂತರ 11 ಪೊಲೀಸರನ್ನು ಅಮಾನತುಗೊಳಿಸಲಾಯಿತು.
ಇದನ್ನೂಓದಿ:2018ರಲ್ಲಿ ಕಿಡ್ನ್ಯಾಪ್ ಆಗಿದ್ದ ಮಹಿಳೆ ಈಗ ಪೊಲೀಸ್ ಕಾನ್ಸ್ಟೆಬಲ್!