ETV Bharat / bharat

ಮರಾಠವಾಡದಲ್ಲಿ 23 ಸಾವಿರ ವರ್ಷಗಳ ಹಳೆಯ ಹಿಪಪಾಟಮಸ್‌ ಅವಶೇಷಗಳು ಪತ್ತೆ! - ​ ETV Bharat Karnataka

ಮರಾಠವಾಡ ಪ್ರದೇಶದಲ್ಲಿ ಡೆಕ್ಕನ್ ಕಾಲೇಜಿನ ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಹಲವು ಪ್ರಾಣಿಗಳ ಅವಶೇಷಗಳು ಕಂಡು ಬಂದಿವೆ.

ಹಿಪಪಾಟಮಸ್‌ ಅವಶೇಷಗಳು
ಹಿಪಪಾಟಮಸ್‌ ಅವಶೇಷಗಳು
author img

By ETV Bharat Karnataka Team

Published : Dec 12, 2023, 4:50 PM IST

ಪುಣೆ (ಮಹಾರಾಷ್ಟ್ರ) : ಇಲ್ಲಿನ ಮರಾಠವಾಡದಲ್ಲಿ ಡೆಕ್ಕನ್ ಕಾಲೇಜಿನ ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆಯಲ್ಲಿ 23 ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ನೀರ್ಗುದುರೆ (ಹಿಪಪಾಟಮಸ್‌) ಅವಶೇಷಗಳು ಪತ್ತೆಯಾಗಿವೆ. ಅಲ್ಲದೇ, ಈ ಸಂಶೋಧನೆಯಲ್ಲಿ ನೀರ್ಗುದುರೆ ಸೇರಿದಂತೆ ಆನೆ ಮತ್ತು ಹುಲಿಗಳ ಅವಶೇಷಗಳು ಪತ್ತೆಯಾಗಿವೆ.

ಈಗ ಮರಾಠವಾಡ ಬರಪೀಡಿತ ಪ್ರದೇಶವಾಗಿದ್ದು, ಸಾಕಷ್ಟು ನೀರಿನ ಸಮಸ್ಯೆ ಎದುರಿಸುತ್ತಿದೆ. ಆದರೆ, ಈ ಹಿಂದೆ ಮರಾಠವಾಡದಲ್ಲಿ ದೊಡ್ಡ ಜಲಸಂಪನ್ಮೂಲ ಮತ್ತು ಸಸ್ಯವರ್ಗವಿತ್ತು. ಹಾಗಾಗಿ ಇಲ್ಲಿ ಪ್ರಾಣಿಗಳು ಅತಿ ಹೆಚ್ಚು ವಾಸವಾಗಿದ್ದವು ಎಂದು ಸಂಶೋಧನೆ ತಿಳಿಸಿದೆ. ಡೆಕ್ಕನ್ ಕಾಲೇಜಿನ ಪುರಾತತ್ವ ವಿಭಾಗದ ಮಾಜಿ ಪ್ರಾಧ್ಯಾಪಕ ಡಾ. ವಿಜಯ್ ಸಾಠೆ ಅವರ ಮಾರ್ಗದರ್ಶನದಲ್ಲಿ 2004 ರಿಂದ ಲಾತೂರ್, ಬೀಡ್‌ನಲ್ಲಿ ಸಂಶೋಧನೆ ಪ್ರಾರಂಭವಾಯಿತು. 2004 ರಿಂದ 2023 ರವರೆಗೆ ಲಾತೂರ್ ಜಿಲ್ಲೆಯ ಹಾರವಾಡಿ, ಅಂಬಾಜೋಗೈ ಪ್ರದೇಶದಲ್ಲಿ ನಡೆಸಿದ ಸಂಶೋಧನೆ ಪ್ರಕಾರ ಅನೇಕ ಪ್ರಾಣಿಗಳು ವಾಸಿಸುತ್ತಿರುವುದು ಕಂಡು ಬಂದಿದೆ. ಉತ್ಖನನ (ಭೂಮಿಯನ್ನು ಅಗೆಯುವುದು)ದ ನಂತರ ದೊರೆತ ಅವಶೇಷಗಳಲ್ಲಿ ಮಹಾರಾಷ್ಟ್ರಕ್ಕಿಂತ ಮೊದಲು ಬೃಹತ್​ ಅರಣ್ಯ ಪ್ರದೇಶ ಇದಾಗಿತ್ತು ಎಂದು ಹೇಳಲಾಗುತ್ತಿದೆ.

ಈ ಸಂಶೋಧನೆ ಬಗ್ಗೆ ಸಂಶೋಧಕ ಡಾ. ವಿಜಯ್ ಸಾಠೆ ಅವರು ಮಾತನಾಡಿದ್ದು, 2016ರಲ್ಲಿ ಲಾತೂರ್ ಜಿಲ್ಲೆಯಿಂದ 20 ಕಿಮೀ ದೂರದಲ್ಲಿರುವ ರೇನಾಪುರ ಮತ್ತು 13 ಕಿಮೀ ದೂರದಲ್ಲಿರುವ ಹಾರವಾಡಿ ಬಳಿ ಈ ಸಂಶೋಧನೆ ನಡೆಸಲಾಗಿತ್ತು. ಈ ಪ್ರದೇಶವು ಮಾಂಜ್ರಾ ನದಿಯ ಜಲಾನಯನ ಪ್ರದೇಶದ ಒಂದು ಭಾಗವಾಗಿದೆ. ನದಿ ಪಾತ್ರದಲ್ಲಿ ನೀರಿಲ್ಲದಿದ್ದಾಗ ಸಂಶೋಧನೆ ನಡೆಸಿದ್ದು, ಪತ್ತೆಯಾದ ಅವಶೇಷಗಳನ್ನು ನೋಡಿ ವಿಜ್ಞಾನಿಗಳೂ ಬೆಚ್ಚಿ ಬಿದ್ದಿದ್ದಾರೆ.

ನೀರ್ಗುದುರೆಯ ಸಂಪೂರ್ಣ ದವಡೆಯು ಸುಮಾರು 23 ಸಾವಿರ ವರ್ಷಗಳ ಹಳೆಯದಾಗಿದೆ. ಇದರಿಂದ ನೀರಿಲ್ಲದ ಈ ಬರ ಪೀಡಿತ ಪ್ರದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಜಲಚರ ಪ್ರಾಣಿಗಳು ವಾಸಿಸುತ್ತಿದ್ದವು ಎಂಬುದರ ಜೊತೆಗೆ ಜಲಸಂಪನ್ಮೂಲ ಈ ಭಾಗದಲ್ಲಿ ಹೆಚ್ಚಿತ್ತು ಎಂಬುದು ತಿಳಿಯುತ್ತದೆ. ಆದ್ದರಿಂದ ಇಲ್ಲಿ ಸಂಶೋಧನೆ ಸಂದರ್ಭದಲ್ಲಿ ಪ್ರಾಣಿಗಳ ಪಳೆಯುಳಿಕೆಗಳ ಅವಶೇಷಗಳು ಪತ್ತೆಯಾಗಿವೆ. ಇನ್ನೂ ಹೆಚ್ಚಿನ ಸಂಶೋಧನೆಗಳು ಮರಾಠವಾಡದಲ್ಲಿ ನಡೆಯುತ್ತಿವೆ ಎಂದು ವಿಜಯ್ ಸಾಠೆ ಹೇಳಿದ್ದಾರೆ.

ಇದನ್ನೂ ಓದಿ : ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ 2 ಲಕ್ಷ ರೂಪಾಯಿ ನೋಟುಗಳನ್ನು ತಿಂದು ಹಾಕಿದ ಇಲಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.