ಬನಾರಸ್ (ಉತ್ತರ ಪ್ರದೇಶ): ಬನಾರಸ್ನ ಸುಮಾರು 80 ಘಾಟ್ಗಳಲ್ಲಿ ಹಿಂದೂ ಮಹಿಳೆಯರು ಉರ್ದು ಸಾಹಿತ್ಯದ ಪುಸ್ತಕಗಳನ್ನು ಮಾರಾಟ ಮಾಡಿ ಗಮನ ಸೆಳೆಯುತ್ತಿದ್ದಾರೆ.
ಮಿರ್ಜಾ ಗಾಲಿಬ್, ಮೀರ್, ಫೈಜ್ ಅಹ್ಮದ್ ಫೈಜ್, ಪರ್ವೀನ್ ಶಕೀರ್ ಮುಂತಾದವರ ಪುಸ್ತಕಗಳನ್ನು ಇಲ್ಲಿ ಮಾರಲಾಗುತ್ತಿದ್ದು, ಪುಸ್ತಕ ಪ್ರಿಯರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಮೊಬೈಲ್ಗಳಲ್ಲಿ ಕಳೆದುಹೋಗಿರುವ ಯುವ ಜನಾಂಗವನ್ನು ಮತ್ತೆ ಪುಸ್ತಕಗಳತ್ತ ಸೆಳೆಯಲು ಈ ಮಹಿಳೆಯರು ಯಶಸ್ವಿಯಾಗಿದ್ದಾರೆ.
ಕವಿ ಮಿರ್ಜಾ ಗಾಲಿಬ್ ಅವರು ಚಿರಾಗ್ ದಹರ್ ಎಂಬ ಪುಸ್ತಕದಲ್ಲಿ ಬನಾರಸ್ನ ನಾಗರಿಕತೆ, ಸಂಸ್ಕೃತಿ ಸೇರಿದಂತೆ ಹಲವು ವಿಶೇಷತೆಗಳ ಬಗ್ಗೆ ಬರೆದಿರುವುದು ಸೊಗಸಾಗಿದೆ. ಈ ರೀತಿಯ ಪುಸ್ತಕಗಳು ಸಾಕಷ್ಟು ಪ್ರಸಿದ್ದಿ ಪಡೆದಿವೆ ಎಂದು ಪುಸ್ತಕ ಮಾರಾಟ ಮಾಡುವ ಓರ್ವ ಮಹಿಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓದಿ: ವಾರಣಾಸಿಯಲ್ಲಿ ಭೀಕರ ಮಳೆ: ಉಕ್ಕಿದ ಗಂಗಾ ನದಿ, ಘಾಟ್ಗಳು ಜಲಾವೃತ
ಮೂರು ವರ್ಷಗಳಿಂದ ಬನಾರಸ್ನ ಸುಮಾರು 80 ಘಾಟ್ಗಳಲ್ಲಿ ಪುಸ್ತಕ ವ್ಯಾಪಾರ ನಡೆಯುತ್ತಿದ್ದು, ಹಿಂದಿಗೆ ತರ್ಜುಮೆಯಾಗಿರುವ ಉರ್ದು ಸಾಹಿತ್ಯವನ್ನು ಕೂಡಾ ಮಾರಾಟ ಮಾಡಲಾಗುತ್ತಿದೆ. ಯುವ ಪೀಳಿಗೆ ಅದರಲ್ಲೂ ಕಂಪನಿಗಳಲ್ಲಿ ಕೆಲಸ ಮಾಡುವ ಹಲವರು ಉರ್ದು ಸಾಹಿತ್ಯದ ಕವಿಗಳ ಎಲ್ಲಾ ಆವೃತ್ತಿಯನ್ನು ಕೊಂಡು ಓದುತ್ತಿದ್ದಾರೆ ಎಂದು ಪುಸ್ತಕ ವ್ಯಾಪಾರಿ ಸೋನಿ ಮಾಹಿತಿ ನೀಡಿದ್ದಾರೆ.