ಮುಂಬೈ(ಮಹಾರಾಷ್ಟ್ರ): ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳ ಆಸ್ಪತ್ರೆಗಳಲ್ಲಿ ಈಗಾಗಲೇ ಒಬ್ಬರ ಹೃದಯ ಮತ್ತೊಬ್ಬರಿಗೆ ಕಸಿ ಮಾಡುವ ಮೂಲಕ ಅನೇಕರ ಪ್ರಾಣ ಉಳಿಸಿರುವ ಘಟನೆಗಳು ನಡೆದಿವೆ. ಮಹಾರಾಷ್ಟ್ರದ ವೈದ್ಯರು ಅಂತಹ ಸಾಹಸಕ್ಕೆ ಕೈಹಾಕಿದ್ದು, ಹಿಂದೂ ಮಹಿಳೆಯೋರ್ವರ ಹೃದಯವನ್ನು ಮುಸ್ಲಿಂ ಯುವಕನಿಗೆ ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
ಮಿದುಳು ನಿಷ್ಕ್ರೀಯಗೊಂಡ ಮಹಿಳೆಯ ಹೃದಯವನ್ನು ಮುಸ್ಲಿಂ ಯುವಕನ ದೇಹದಲ್ಲಿ ಕಸಿ ಮಾಡುವ ಮೂಲಕ ಆತನಿಗೆ ಹೊಸ ಜೀವನ ನೀಡಲಾಗಿದೆ. ಇದಕ್ಕೋಸ್ಕರ ವೈದ್ಯರು ವಿಶಿಷ್ಠ ಇಮ್ಯುನೊ-ಡಯಾಗ್ನೋಸ್ಟಿಕ್ ತಂತ್ರ(immuno-diagnostic technique) ಬಳಸಿದ್ದಾರೆ.
41 ವರ್ಷದ ಹಿಂದೂ ಮಹಿಳೆ ಚಿಕಿತ್ಸೆಗೋಸ್ಕರ ಪಾರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಆಕೆಯ ಬ್ರೈನ್ ನಿಷ್ಕ್ರೀಯಗೊಂಡಿದೆ ಎಂದು ತಿಳಿಸಲಾಗಿತ್ತು. ಈ ವೇಳೆ ಆಕೆಯ ಕುಟುಂಬಸ್ಥರು ಮೃತ ಮಹಿಳೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಇದು 31 ವರ್ಷದ ಫರೀದ್ಗೆ ಸಹಾಯವಾಗಿದೆ. ಸುಮಾರು ಮೂರು ತಿಂಗಳ ಕಾಲ ಚಿಕಿತ್ಸೆ ನಡೆದಿದ್ದು, ಇದೀಗ ಸಂಪೂರ್ಣವಾಗಿ ಪೂರ್ಣಗೊಂಡಿದೆ.
ಇದನ್ನೂ ಓದಿ: ಅಂಬಾನಿ ನಂ.1 ಶ್ರೀಮಂತ: ಭಾರತದಲ್ಲಿ 1 ಸಾವಿರ ವ್ಯಕ್ತಿಗಳ ಸಂಪತ್ತು 1 ಸಾವಿರ ಕೋಟಿ ರೂ!
ಕಳೆದ ಜುಲೈ ತಿಂಗಳಲ್ಲಿ ಕಾರ್ಡಿಯೋಮಯೋಪತಿ(cardiomyopathy) ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ವೈದ್ಯರು ಹೃದಯ ಕಸಿ ಮಾಡುವಂತೆ ಸೂಚಿಸಿದ್ದರು. ಇದಕ್ಕಾಗಿ ಕುಟುಂಬಸ್ಥರು ಹೆಸರು ನೋಂದಣಿ ಸಹ ಮಾಡಿಸಿದ್ದರು. ಕಾಕತಾಳೀಯವೆಂಬಂತೆ ಅದೇ ಆಸ್ಪತ್ರೆಯಲ್ಲಿ ಮಹಿಳೆಗೆ ಬ್ರೈನ್ಡೆಡ್ ಆಗಿದ್ದು, ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಲಾಗಿತ್ತು. ಈ ವೇಳೆ ವೈದ್ಯರು ಫರೀದ್ಗೆ ಹೃದಯ ಕಸಿ ಮಾಡಲು ಮುಂದಾಗಿದ್ದಾರೆ. ಆತನಿಗೆ ಈಗಾಗಲೇ ಹೃದಯ ಕಸಿ ಮಾಡಲಾಗಿದ್ದು, ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.