ETV Bharat / bharat

ಭಾವೈಕ್ಯತೆಯ ಮದುವೆ: ಕುಟುಂಬಸ್ಥರ ಸಮ್ಮುಖದಲ್ಲೇ ಹಿಂದೂ ಹುಡುಗ-ಮುಸ್ಲಿಂ ಹುಡುಗಿ ವಿವಾಹ

author img

By

Published : Apr 3, 2021, 10:51 PM IST

ದೇಶದಲ್ಲಿ ಅಂತರ್ಜಾತಿ, ಅಂತರಧರ್ಮಿಯ ವಿವಾಹಗಳಿಗೆ ಒಪ್ಪಿಗೆಗಿಂತಲೂ ವಿರೋಧ ವ್ಯಕ್ತವಾಗುವುದೇ ಹೆಚ್ಚು. ಆದರೆ ಕೊಲ್ಲಾಪುರದಲ್ಲಿ ಹಿಂದೂ-ಮುಸ್ಲಿಂ ಕುಟುಂಬಸ್ಥರು ತಮ್ಮ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ.

Hindu-Muslim marriage
Hindu-Muslim marriage

ಕೊಲ್ಲಾಪುರ(ಮಹಾರಾಷ್ಟ್ರ): ಜಾತಿ ಮತ್ತು ಧರ್ಮದ ಅಡೆತಡೆ ಮುರಿದು ಕೊಲ್ಲಾಪುರದಲ್ಲಿ ಹಿಂದೂ-ಮುಸ್ಲಿಂ ಕುಟುಂಬದ ವಿವಾಹ ಸಮಾರಂಭ ಶನಿವಾರ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರಗತಿಪರ ವಿಚಾರ ಉತ್ತೇಜಿಸುವ ನಿಟ್ಟಿನಲ್ಲಿ ಈ ಮದುವೆ ಮಾಡಲಾಗಿದ್ದು, ಮುಜಾವರ್​ ಮತ್ತು ಯಾದವ್​ ಕುಟುಂಬಗಳು ಒಟ್ಟಿಗೆ ಸೇರಿ ಈ ಕೆಲಸ ಮಾಡಿವೆ. ಎರಡು ಕುಟುಂಬ ಜಾತಿ ಮತ್ತು ಧರ್ಮದ ಗೋಡೆ ಮುರಿದು ತಮ್ಮ ಮಕ್ಕಳ ಮದುವೆ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ಆಚರಿಸಿವೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿಂದೂ-ಮುಸ್ಲಿಂ ಪ್ರೇಮಿಗಳು

ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದಕ್ಕೆ ಎರಡು ಕುಟುಂಬದಿಂದಲೂ ವಿರೋಧ ವ್ಯಕ್ತವಾಗಿಲ್ಲ. ರಾಜರ್ಷಿ ಶಾಹು ಮಹಾರಾಜ್​​ ಅವರ ಆಲೋಚನೆಯಂತೆ ಮಕ್ಕಳ ವಿವಾಹ ಸಮಾರಂಭ ನಡೆದಿದೆ. ವಿಶೇಷವೆಂದರೆ ಈ ಮದುವೆ ಕಾರ್ಯಕ್ರಮದಲ್ಲಿ ಹಿಂದೂ ಮತ್ತು ಮುಸ್ಲಿಂ ಕುಟುಂಬದ ಮದುವೆ ಆಚರಣೆ ಸಂಪ್ರದಾಯ ನಡೆದಿವೆ.

ಇದನ್ನೂ ಓದಿ: ಅಂಧ ಯುವಕನ ಬಾಳಿಗೆ ಬೆಳಕಾದ ವೀರಮ್ಮ.. ಪೋಷಕರ ವಿರೋಧದ ನಡುವೆ ಮದುವೆ!

ಮುಜಾವರ್ ಮತ್ತು ಯಾದವ್ ಕುಟುಂಬ ಕಳೆದ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಸ್ನೇಹ ಬಂಧ ಮುಂದುವರೆಸುವ ಉದ್ದೇಶದಿಂದ ವಧು ಮಾರ್ಷಾ ನದೀಮ್ ಮುಜಾವರ್ ಮತ್ತು ವರ ಸತ್ಯಜಿತ್ ಸಂಜಯ್ ಯಾದವ್​ ಮದುವೆ ಮಾಡಿಕೊಂಡಿದ್ದಾರೆ. ಇಬ್ಬರು ಕಳೆದ 10 ವರ್ಷಗಳಿಂದ ಮಾರ್ಷಾ ಹಾಗೂ ಸತ್ಯಜಿತ್​ ಉತ್ತಮ ಸ್ನೇಹಿತರಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಹಿಂದೂ-ಮುಸ್ಲಿಂ ಆಗಿರುವ ಕಾರಣ ಭವಿಷ್ಯದಲ್ಲಿ ಮದುವೆಯಾಗುತ್ತಾರೋ ಇಲ್ಲವೋ ಎಂಬ ಸಂಶಯ ಕೂಡ ವ್ಯಕ್ತವಾಗಿತ್ತು. ಆದರೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.