ಡೆಹ್ರಾಡೂನ್ (ಉತ್ತರಾಖಂಡ): ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ರನ್ನು ಸಾಹಿತ್ಯ ಕೃತಿಗಳಿಗಾಗಿ ಕೆನಡಾದ ಹಿಂದಿ ಬರಹಗಾರರ ವೇದಿಕೆ (ಹಿಂದಿ ರೈಟರ್ಸ್ ಗಿಲ್ಡ್) ಪ್ರಶಸ್ತಿ ನೀಡಿ ಗೌರವಿಸಿದೆ.
ವರ್ಚುವಲ್ ಕಾರ್ಯಕ್ರಮದ ಮೂಲಕ ರಾಜ್ಯಪಾಲರ ಸಮ್ಮುಖದಲ್ಲಿ ನಿಶಾಂಕ್ ಅವರಿಗೆ 'ಸಾಹಿತ್ಯ ಗೌರವ ಸಮ್ಮಾನ್' ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ರಾಜಭವನದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಗೌರವ ಸ್ವೀಕರಿಸಿ ಮಾತನಾಡಿದ ಪೋಖ್ರಿಯಾಲ್, ಕೆನಡಾದ ಹಿಂದಿ ಬರಹಗಾರರ ವೇದಿಕೆ, ಕೆನಡಾದಲ್ಲಿ ವಾಸಿಸುವ ಭಾರತೀಯರು ಮತ್ತು ಅಲ್ಲಿ ಹಿಂದಿಯಲ್ಲಿ ವ್ಯವಹರಿಸುತ್ತಿರುವ ಎಲ್ಲಾ ಸಂಸ್ಥೆಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಸಚಿವರು ತಮ್ಮ ಈ ಪ್ರಶಸ್ತಿಯನ್ನು ಭಾರತದ ಕೋಟ್ಯಂತರ ಕಾರ್ಮಿಕರು, ರೈತರು, ಶಿಕ್ಷಕರಿಗೆ ಅರ್ಪಿಸಿದ್ದಾರೆ.
ಇದ್ನನೂ ಓದಿ: ಶಾ ಕರ್ನಾಟಕ ಪ್ರವಾಸದಲ್ಲಿರುವಾಗ ಕ್ಯಾತೆ ತೆಗೆದ 'ಮಹಾ' ಸಿಎಂ: ರಾಜ್ಯದ ಗಡಿ ಮರುಸೇರ್ಪಡೆಗೆ ಸಿದ್ಧ ಎಂದ ಠಾಕ್ರೆ
ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಶಾಸಕರಾಗಿ, ಸಂಸದರಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ಮತ್ತು ಈಗ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಾ ಜನಪ್ರಿಯ ರಾಜಕೀಯ ನಾಯಕರಾಗಿದ್ದರೂ ಕೂಡ ನಿರಂತರವಾಗಿ ಬರೆಯುವ ಮೂಲಕ ಸಾಹಿತ್ಯದ ಬಗ್ಗೆ ತಮ್ಮ ಸಮರ್ಪಣೆಯನ್ನು ಸಾಬೀತುಪಡಿಸಿದ್ದಾರೆ ಎಂದು ಉತ್ತರಾಖಂಡ ಗವರ್ನರ್ ಬೇಬಿ ರಾಣಿ ಮೌರ್ಯ ಅವರು ಅಭಿನಂದಿಸಿದ್ದಾರೆ.