ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿನ ಮಶ್ಡಾದ ಗುಡ್ಡಗಾಡು ಪ್ರದೇಶದ ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ನಿಖರ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ಆದ್ರೆ ಅನಿಲ ಸೋರಿಕೆಯೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಸ್ತುತ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
-
Himachal Pradesh: Fire broke out in some houses along a hillside in Shimla due to alleged gas leakage. pic.twitter.com/2tpvYAMk1I
— ANI (@ANI) February 10, 2021 " class="align-text-top noRightClick twitterSection" data="
">Himachal Pradesh: Fire broke out in some houses along a hillside in Shimla due to alleged gas leakage. pic.twitter.com/2tpvYAMk1I
— ANI (@ANI) February 10, 2021Himachal Pradesh: Fire broke out in some houses along a hillside in Shimla due to alleged gas leakage. pic.twitter.com/2tpvYAMk1I
— ANI (@ANI) February 10, 2021
ಮೊದಲು ಒಂದು ಮನೆಯಲ್ಲಿ ಬೆಂಕಿ ಕಂಡು ಬಂದಿದ್ದು, ಸುತ್ತಮುತ್ತಲಿನ ಜನರು ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ. ಆದ್ರೂ ಬೆಂಕಿಯನ್ನು ನಿಯಂತ್ರಿಸಲಾಗಲಿಲ್ಲ. ಮನೆಯ ಕೆಳಗಿನ ಮಹಡಿಯಲ್ಲಿದ್ದ ಬೆಂಕಿ ಬಳಿಕ ಮೇಲಿನ ಮಹಡಿಗೂ ಹಬ್ಬಿದೆ. ಇದರಿಂದಾಗಿ ಸುತ್ತಮುತ್ತಲಿನ ಮನೆಗಳಿಗೂ ಬೆಂಕಿ ತಗುಲಿದೆ.
ಓದಿ: ಅಕ್ರಮ ಮದ್ಯ ಕಾರ್ಖಾನೆ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆಯೇ ಹಲ್ಲೆ: ಕಾನ್ಸ್ಟೇಬಲ್ ಸಾವು
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈವರೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಸಂತ್ರಸ್ತ ಕುಟುಂಬದವರಿಂದ ಮಾಹಿತಿ ಪಡೆದಿದ್ದಾರೆ.