ಶಿಮ್ಲಾ, ಹಿಮಾಚಲ ಪ್ರದೇಶ: ಹೊಸ ವರ್ಷಾಚರಣೆ ವೇಳೆ ಹಿಮಾಚಲ ಪ್ರದೇಶ ಪೊಲೀಸರು ಅಲರ್ಟ್ ಆಗಿದ್ದಾರೆ. ಶಿಮ್ಲಾದ ರಿಡ್ಜ್ ಮೈದಾನದಲ್ಲಿ ಬಾಂಬ್ ಸ್ಫೋಟಿಸಲು ಪಾಕ್ ಮೂಲದ ಸಂಘಟನೆ ಸಂಚು ರೂಪಿಸಿರುವುದಾಗಿ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿರುವ ಜನರನ್ನು ಹೊರಗೆ ಕಳುಹಿಸಿ, ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಹೊಸ ವರ್ಷಾಚರಣೆ ವೇಳೆ ಶಿಮ್ಲಾದ ರಿಡ್ಜ್ ಮೈದಾನ ಮತ್ತು ಹರಿಯಾಣ ಸ್ಥಳವೊಂದರ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಉನ್ನತ ಮೂಲಗಳು ಮಾಹಿತಿ ನೀಡಿವೆ. ಬಾಂಬ್ ಸ್ಫೋಟಿಸಲು ಸಂಚು ರೂಪಿಸಿರುವ ಹರಿಯಾಣದ ಸ್ಥಳ ಯಾವುದು ಎಂಬುದು ಇನ್ನೂ ಗೊತ್ತಿಲ್ಲ ಎಂದು ಹಿಮಾಚಲ ಪ್ರದೇಶ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಅಧಿಕೃತ ಹೇಳಿಕೆ ಪ್ರಕಟಿಸಿದೆ.
![Himachal Police asks people to vacate Ridge Ground in Shimla after inputs about planned-bomb blast in area](https://etvbharatimages.akamaized.net/etvbharat/prod-images/14063508_letter.jpg)
ಈ ಸಂಚಿನ ಮಾಹಿತಿ ಬಹಿರಂಗವಾದ ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಹೋಟೆಲ್‌ಗಳು, ಗುರುದ್ವಾರಗಳು, ಮಸೀದಿಗಳು, ದೇವಸ್ಥಾನಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಆಸ್ಪತ್ರೆಗಳು ಇತ್ಯಾದಿಗಳನ್ನು ಆಗಾಗ್ಗೆ ಪರಿಶೀಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: 2022ಕ್ಕೆ ಸ್ವಾಗತ: ದೇಶದಾದ್ಯಂತ ಸಂಭ್ರಮ, ಹೀಗಿತ್ತು ಜನರ ಸಡಗರ - Photos