ETV Bharat / bharat

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ರಹಸ್ಯ ಅಧಿಕಾರಿ ಎಂದು ಅಕ್ರಮ ಎಸಗುತ್ತಿದ್ದವನ ಬಂಧನ.. ಸಹಚರರಿಗಾಗಿ ಹುಡುಕಾಟ - ETV Bharath Kannada news

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿ ಎಂದು ಹೇಳಿ ಕೊಂಡು ಮಾದಕ ವಸ್ತುಗಳನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

FAKE IPS
FAKE IPS
author img

By ETV Bharat Karnataka Team

Published : Sep 11, 2023, 9:34 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ಪೊಲೀಸ್​ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರೆ ಅಂತಹ ಮನೆ, ಅವರ ಮೇಲೆ ಗೌರವ ಮತ್ತ ಭಯ ಇರುತ್ತದೆ. ಈ ವಿಚಾರವನ್ನೇ ಬಳಸಿಕೊಂಡು ಇಲ್ಲಿನ ಕಾಂಗ್ರಾ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಖನಿಯಾರಾದ ತಾರಪದ ಗ್ರಾಮದ ವ್ಯಕ್ತಿಯೊಬ್ಬ ಕಳೆದ ಒಂದೂವರೆ ವರ್ಷಗಳಿಂದ ವಂಚನೆ ಮಾಡುತ್ತಿದ್ದ. ಈಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸವಿದ್ದು, ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಆರೋಪಿ ಮಹಾರಾಷ್ಟ್ರದ ನಿವಾಸಿ ವಿವೇಕ್ ಹೀರಾ ಸಿಂಗ್ ರಾಥೋಡ್ ಎಂದು ಗುರುತಿಸಲಾಗಿದೆ. ಆರೋಪಿಯು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ರಹಸ್ಯ ಅಧಿಕಾರಿ ಎಂದು ಬಿಂಬಿಸಿಕೊಂಡು ಓಡಾಡುತ್ತಿದ್ದ. ಐಪಿಎಸ್ ಅಧಿಕಾರಿಯಂತೆ ಪೋಸು ಕೊಡುತ್ತಿದ್ದ ವಿವೇಕ್ ಕುಮಾರ್ ಬಗ್ಗೆ ಗುಪ್ತಚರ ಇಲಾಖೆಯಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಸಿವಿಲ್​ ಡ್ರೆಸ್​ನಲ್ಲಿ ಪೊಲೀಸರು ವಿವೇಕ್ ಕುಮಾರ್ ಮನೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಆತ ಜಗಳವಾಡಿದ್ದರಿಂದ ಸೇನೆಯ ಸಹಾಯದಿಂದ ಕಾರ್ಯಾಚರಣೆ ಮಾಡಿದ್ದಾರೆ. ಆತನಿಂದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸದಸ್ಯ ಎಂಬ ನಕಲಿ ಗುರುತಿನ ಚೀಟಿ, ಪಿಸ್ತೂಲ್ ಕವರ್, ಎರಡು ವಾಕಿ ಟಾಕಿ, ಬೈಕ್ ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಈ ಹಿಂದೆ ಧರ್ಮಶಾಲಾದಲ್ಲಿ ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದು, ನಂತರ ನಕಲಿ ಗುರುತಿನ ಚೀಟಿಯನ್ನು ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಇದಾದ ನಂತರ, ಐಪಿಎಸ್ ಅಧಿಕಾರಿಯಾದ ನಂತರ, ಅವರು ರಾತ್ರಿಯಿಡೀ ಖನಿಯಾರ ಮತ್ತು ಧರ್ಮಶಾಲಾ ಪ್ರದೇಶಗಳಲ್ಲಿ ದಾಳಿ ನಡೆಸುತ್ತಿದ್ದರು. ದಾಳಿಯ ವೇಳೆ ವಶಕ್ಕೆ ಪಡೆದ ಮಾದಕ ವಸ್ತುಗಳನ್ನು ಸಿಗರೇಟಿನ ರೀತಿ ಮಾಡಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಮೊದಲು ಬೈಕ್​ನಲ್ಲಿ ಈ ಕೆಲಸ ಮಾಡುತ್ತಿದ್ದ, ಈತ 3 ತಿಂಗಳ ಹಿಂದೆ ಗುಜರಾತಿನ ನಂಬರ್ ಪ್ಲೇಟ್​ ಇರುವ ಕಾರು ತಂದಿದ್ದ. ಕಾರಿನ ಎರಡು ಬದಿಯಲ್ಲಿ ಭಾರತ ಸರ್ಕಾರ ಎಂದು ಬರೆದು ನಕಲಿ ಗುರುತಿನ ಚೀಟಿಯನ್ನು ಕಾರಿನೊಳಗೆ ನೇತು ಹಾಕುತ್ತಿದ್ದರು. ಇಲ್ಲಿ ಅವನು ತಮ್ಮೊಂದಿಗೆ ಕೆಲವು ಯುವಕರನ್ನು ಸೇರಿಕೊಂಡಿದ್ದ ಮತ್ತು ಅವರು ಈ ಕೆಲಸದಲ್ಲಿ ಅವನಿಗೆ ಸಹಾಯ ಮಾಡುತ್ತಿದ್ದರು.

'ಆರೋಪಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ರಹಸ್ಯ ಅಧಿಕಾರಿ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಆತನನ್ನು ಬಂಧಿಸಲಾಗಿದೆ. ಇದಲ್ಲದೇ ಆತನ ಸಹಚರರೊಬ್ಬರ ಮನೆಯಲ್ಲೂ ಶೋಧ ನಡೆಸಲಾಗುತ್ತಿದೆ' ಎಂದು ಎಸ್​ಪಿ ವೀರ್ ಬಹದ್ದೂರ್ ಮಾಹಿತಿ ನೀಡಿದ್ದಾರೆ.

ಈ ವಿಚಾರವಾಗಿ ಧರ್ಮಶಾಲಾ ನ್ಯಾಯಾಲಯದ ಖಾಸಗಿ ಕೆಫೆಯೊಂದರ ಮಾಲೀಕ ಗಹ್ಲಿಯನ್ ನಿವಾಸಿ ಮದನ್ ಲಾಲ್ ವಾಲಿಯಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸೆಪ್ಟೆಂಬರ್ 3 ರಂದು ವಿವೇಕ್ ಹೀರಾ ಸಿಂಗ್ ರಾಥೋಡ್ ಕೆಲಸಕ್ಕಾಗಿ ತಮ್ಮ ಬಳಿಗೆ ಬಂದಿದ್ದರು ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಹಣ್ಣಿನ ವ್ಯಾಪಾರಿಗಳ ಹೆಸರಲ್ಲಿ500 ಕೋಟಿ ಮೌಲ್ಯದ ಆಸ್ತಿ.. ಒಂಟಿ ಮಹಿಳೆಗೆ ಸೇರಿದ ಆಸ್ತಿಗೆ ಕನ್ನ; ತನಿಖೆಗೆ ಸೂಚಿಸಿದ ಕೋರ್ಟ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.