ಶಿಮ್ಲಾ, ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಮಳೆ ಮತ್ತೊಮ್ಮೆ ಅವಾಂತರ ಸೃಷ್ಟಿಸಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜ್ಯದ ವಿವಿಧೆಡೆ ಭೂಕುಸಿತ ಮತ್ತು ಭಾರೀ ಹಾನಿ ಆಗಿರುವುದರ ಬಗ್ಗೆ ವರದಿಯಾಗಿದೆ. ರಾಜಧಾನಿ ಶಿಮ್ಲಾದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಶಿವನ ದೇವಾಲಯವೂ ಭೂ ಕುಸಿತದ ಹಿಡಿತಕ್ಕೆ ಒಳಗಾಗಿದೆ. ಪರಿಣಾಮ ಸುಮಾರು 30ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವ ಭಯವಿದೆ. ಸ್ಥಳೀಯ ಆಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಇದುವರೆಗೆ 9 ಜನರ ಮೃತದೇಹಗಳನ್ನು ಹೊರತೆಗೆದಿದೆ.
-
#WATCH | Himachal Pradesh CM Sukhvinder Singh Sukhu inspects the situation on the spot of landslide in Summer Hill area of rain-hit Shimla pic.twitter.com/ZfLlp4FOqm
— ANI (@ANI) August 14, 2023 " class="align-text-top noRightClick twitterSection" data="
">#WATCH | Himachal Pradesh CM Sukhvinder Singh Sukhu inspects the situation on the spot of landslide in Summer Hill area of rain-hit Shimla pic.twitter.com/ZfLlp4FOqm
— ANI (@ANI) August 14, 2023#WATCH | Himachal Pradesh CM Sukhvinder Singh Sukhu inspects the situation on the spot of landslide in Summer Hill area of rain-hit Shimla pic.twitter.com/ZfLlp4FOqm
— ANI (@ANI) August 14, 2023
ಸುಮಾರು 30ಕ್ಕೂ ಹೆಚ್ಚು ಜನರ ಸಾವು ಶಂಕೆ: ಸೋಮವಾರ ಬೆಳಗ್ಗೆ ಶಿವನ ದೇವಸ್ಥಾನವೊಂದು ಭೂಕುಸಿತಕ್ಕೆ ಒಳಗಾಗಿರುವ ಘಟನೆ ಶಿಮ್ಲಾದ ಸಮ್ಮರ್‌ಹಿಲ್ ಪ್ರದೇಶದಲ್ಲಿ ಕಂಡು ಬಂದಿದೆ. ದೇವಾಲಯ ಕುಸಿತಗೊಂಡ ಪರಿಣಾಮ, ಈ ಮೊದಲು ಅವಶೇಷಗಳಡಿ ಸುಮಾರು 30 ಮಂದಿ ಸಿಲುಕಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಸೋಮವಾರ ಆಗಿದ್ದ ಕಾರಣ ದೇವಸ್ಥಾನದಲ್ಲಿ ಶಿವನ ಭಕ್ತರ ದಂಡೇ ಇತ್ತು ಎಂದು ಹೇಳಲಾಗುತ್ತಿದೆ.
-
#WATCH | Himachal Pradesh CM Sukhvinder Singh Sukhu on landslide incident in Shimla and devastation due to heavy rainfall in the state
— ANI (@ANI) August 14, 2023 " class="align-text-top noRightClick twitterSection" data="
"20-25 people are trapped under debris here (Summer Hill, Shimla). 21 people dead in the last 24 hours in the state. I appeal to people to stay… pic.twitter.com/qvATnkjSVL
">#WATCH | Himachal Pradesh CM Sukhvinder Singh Sukhu on landslide incident in Shimla and devastation due to heavy rainfall in the state
— ANI (@ANI) August 14, 2023
"20-25 people are trapped under debris here (Summer Hill, Shimla). 21 people dead in the last 24 hours in the state. I appeal to people to stay… pic.twitter.com/qvATnkjSVL#WATCH | Himachal Pradesh CM Sukhvinder Singh Sukhu on landslide incident in Shimla and devastation due to heavy rainfall in the state
— ANI (@ANI) August 14, 2023
"20-25 people are trapped under debris here (Summer Hill, Shimla). 21 people dead in the last 24 hours in the state. I appeal to people to stay… pic.twitter.com/qvATnkjSVL
ಭರದಿಂದ ಸಾಗಿದ ರಕ್ಷಣಾ ಕಾರ್ಯ: ಭೂಕುಸಿತಗೊಂಡ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡಿದ್ದರು. ಬಳಿಕ ಈ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ರವಾನಿಸಲಾಗಿತ್ತು. ಸುದ್ದಿ ತಿಳಿದ ಸ್ಥಳೀಯ ಆಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ಇಲ್ಲಿಯವರೆಗೆ 15 ಜನರನ್ನು ರಕ್ಷಿಸಲಾಗಿದೆ ಮತ್ತು ಎಲ್ಲರನ್ನೂ ಚಿಕಿತ್ಸೆಗಾಗಿ ಐಜಿಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಎಎಸ್ಪಿ ಸುನೀಲ್ ನೇಗಿ ತಿಳಿಸಿದ್ದಾರೆ.
-
WATCH | Shimla's Summer Hill area hit by landslide; few people feared dead, operation underway to rescue stranded persons
— ANI (@ANI) August 14, 2023 " class="align-text-top noRightClick twitterSection" data="
CM Sukhvinder Singh Sukhu and state minister Vikramaditya Singh are on present on the spot pic.twitter.com/sjTLSG3qNB
">WATCH | Shimla's Summer Hill area hit by landslide; few people feared dead, operation underway to rescue stranded persons
— ANI (@ANI) August 14, 2023
CM Sukhvinder Singh Sukhu and state minister Vikramaditya Singh are on present on the spot pic.twitter.com/sjTLSG3qNBWATCH | Shimla's Summer Hill area hit by landslide; few people feared dead, operation underway to rescue stranded persons
— ANI (@ANI) August 14, 2023
CM Sukhvinder Singh Sukhu and state minister Vikramaditya Singh are on present on the spot pic.twitter.com/sjTLSG3qNB
ರಕ್ಷಿಸಿದ ಜನರಿಗೆ ಐಜಿಎಂಸಿಯಲ್ಲಿ ಚಿಕಿತ್ಸೆ: ಶಿವನ ದೇವಸ್ಥಾನದ ಅವಶೇಷಗಳಲ್ಲಿ ಹೂತುಹೋದ ಜನರನ್ನು ರಕ್ಷಿಸಲಾಗುತ್ತಿದೆ. ಇದುವರೆಗೆ 9 ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಲಿರುವ ಸಿಎಂ: ಇಂದು ಶ್ರಾವಣ ಸೋಮವಾರವಾದ್ದರಿಂದ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶಿವನ ದೇವಾಲಯಕ್ಕೆ ಆಗಮಿಸಿದ್ದರು. ಅಪಘಾತದ ವೇಳೆ ದೇವಸ್ಥಾನದಲ್ಲಿ ಸುಮಾರು 50 ಮಂದಿ ಇದ್ದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಖ್ವಿಂದರ್ ಸಿಂಗ್ ಸುಖ್ ಅವರು ದೇವಾಲಯ ಕುಸಿತದ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಆಡಳಿತ ಅವಶೇಷಗಳನ್ನು ತೆಗೆದು ಜನರ ರಕ್ಷಣೆಗೆ ಶ್ರಮಿಸುತ್ತಿದೆ ಎಂದರು. ಘಟನಾ ಸ್ಥಳಕ್ಕೆ ಸಿಎಂ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
-
#WATCH | Landslide strikes a temple building in Shimla following heavy rainfall in the area, operation underway to rescue stranded persons
— ANI (@ANI) August 14, 2023 " class="align-text-top noRightClick twitterSection" data="
(Video source: Police) pic.twitter.com/MVYxIS9gt3
">#WATCH | Landslide strikes a temple building in Shimla following heavy rainfall in the area, operation underway to rescue stranded persons
— ANI (@ANI) August 14, 2023
(Video source: Police) pic.twitter.com/MVYxIS9gt3#WATCH | Landslide strikes a temple building in Shimla following heavy rainfall in the area, operation underway to rescue stranded persons
— ANI (@ANI) August 14, 2023
(Video source: Police) pic.twitter.com/MVYxIS9gt3
ಧಾರಾಕಾರ ಮಳೆಗೆ 16 ಜನ ಸಾವು: ಹಿಮಾಚಲದಲ್ಲಿ 24 ಗಂಟೆಯೊಳಗೆ 16 ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಶಿಮ್ಲಾದಲ್ಲಿ 131.6 ಮಿಮೀ ಮಳೆ ದಾಖಲಾಗಿದೆ. ಇಂದು ಮತ್ತು ನಾಳೆಯೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಇಂದು ಶಾಲೆಗಳಿಗೆ ರಜೆ ಘೋಷಿಸಿದೆ. ಭಾರೀ ಮಳೆ ಹಾಗೂ ಭೂಕುಸಿತದಿಂದಾಗಿ ಸುಮಾರು 750 ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಓದಿ: ಹಿಮಾಚಲದ ಸೋಲನ್‌ನಲ್ಲಿ ಮೇಘಸ್ಫೋಟ: ಒಂದೇ ಕುಟುಂಬದ 7 ಮಂದಿ ಬಲಿ, ಮೂವರು ನಾಪತ್ತೆ!