ETV Bharat / bharat

8,300 ಬಾಕ್ಸ್ ಟೊಮೆಟೊ - 1.10 ಕೋಟಿ ಆದಾಯ!... ರೈತನ ಮೊಗದಲ್ಲಿ ಮೂಡಿದ ಮಂದಹಾಸ

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಲ್ಘಾಟಿಯ ರೈತ ಜೈರಾಮ್ ಸೈನಿ 8,300 ಬಾಕ್ಸ್ ಟೊಮೆಟೊ ಮಾರಾಟ ಮಾಡಿ 1.10 ಕೋಟಿ ಆದಾಯ ಗಳಿಸಿದ್ದಾರೆ.

author img

By

Published : Jul 18, 2023, 9:01 PM IST

Updated : Jul 18, 2023, 9:09 PM IST

Etv Bharat
Etv Bharat

ಮಂಡಿ (ಹಿಮಾಚಲ ಪ್ರದೇಶ): ದೇಶಾದ್ಯಂತ ಬೆಲೆ ಏರಿಕೆಯಿಂದ ಟೊಮೆಟೊ ಸಾಕಷ್ಟು ಸದ್ದು ಮಾಡುತ್ತಿದೆ. ಈ ಬಾರಿ ಕೆಜಿಗೆ 150 ರಿಂದ 200 ಹಾಗೂ 250 ರೂಪಾಯಿವರೆಗೆ ಮಾರಾಟವಾಗುತ್ತಿರುವ ಟೊಮೆಟೊ ಬೆಲೆಯಲ್ಲಿ ಸೇಬು ಹಣ್ಣುಗಳನ್ನೇ ಮೀರಿಸಿದೆ. ಬೆಲೆ ಏರಿಕೆಯ ಕಾರಣ ರೆಸ್ಟೋರೆಂಟ್‌ಗಳಿಂದ ಹಿಡಿದು ಸಾಮಾನ್ಯ ಜನರ ಅಡುಗೆ ಮನೆಗೆ ಟೊಮೆಟೊ ಕಾಣೆಯಾಗಿದೆ. ಆದರೆ, ಇದೆಲ್ಲದರ ನಡುವೆ ಟೊಮೆಟೊ ಬೆಳೆಯುವ ರೈತರಿಗೆ ಒಳ್ಳೆಯ ದಿನಗಳು ಬಂದಿರುವುದು ಮಾತ್ರ ಸುಳ್ಳಲ್ಲ.

ಮಾರುಕಟ್ಟೆಯಲ್ಲಿ ಟೊಮೆಟೊಗೆ ಉತ್ತಮ ಬೆಲೆ ಸಿಗುತ್ತಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ. ಅನೇಕ ಕಡೆಗಳಲ್ಲಿ ರೈತರು ಲಕ್ಷಾಂತರ ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಲ್ಘಾಟಿಯ ರೈತ ಜೈರಾಮ್ ಸೈನಿ ಎಂಬುವರು ಒಂದು ಕೋಟಿಗೂ ಅಧಿಕ ಆದಾಯ ಪಡೆದಿದ್ದಾರೆ. 67 ವಯಸ್ಸಿನ ರೈತ ಜೈರಾಮ್ ಸೈನಿ ಕಳೆದ ಸುಮಾರು ಐದು ದಶಕಗಳಿಂದ ಟೊಮೊಟೊ ಕೃಷಿ ಮಾಡುತ್ತಿದ್ದಾರೆ. ಈ ಪ್ರಕಾರ, ಈ ಬಾರಿ ಮಾರುಕಟ್ಟೆಯಲ್ಲಿ ಸಿಕ್ಕ ಟೊಮೆಟೊಗೆ ಸಿಕ್ಕ ಬೆಲೆ ಈ ಹಿಂದೆ ಎಂದೂ ಸಿಕ್ಕಿಲ್ಲ.

8,300 ಬಾಕ್ಸ್ ಟೊಮೆಟೊ - 1.10 ಕೋಟಿ ಆದಾಯ: ಈ ಸೀಸನ್‌ನಲ್ಲಿ ಇದುವರೆಗೆ ಜೈರಾಮ್ ಸೈನಿ 8,300 ಬಾಕ್ಸ್ ಟೊಮೆಟೊಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ 1.10 ಕೋಟಿ ರೂಪಾಯಿ ಆದಾಯ ಬಂದಿದೆ. ಇವರ ಇಬ್ಬರು ಮಕ್ಕಳಾದ ಸತೀಶ್ ಮತ್ತು ಮನೀಶ್ ಕೂಡ ತಮ್ಮ ತಂದೆಗೆ ಕೃಷಿಯಲ್ಲಿ ಸಹಾಯ ಮಾಡುತ್ತಾರೆ. ಹಿರಿಯ ಮಗ ಸತೀಶ್ ಸರ್ಕಾರಿ ಶಿಕ್ಷಕರಾಗಿದ್ದರೂ ತಂದೆಗೆ ಸಹಾಯ ಮಾಡುತ್ತಾರೆ. ಕಿರಿಯ ಮಗ ಮನೀಶ್ ತಂದೆಯೊಂದಿಗೆ ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಸತೀಶ್ ಪ್ರಕಾರ, ತಮ್ಮ ಟೊಮೆಟೊಗಳನ್ನು ನೇರವಾಗಿ ದೆಹಲಿಯ ಆಜಾದ್‌ಪುರ ಮಂಡಿಗೆ ಕಳುಹಿಸುತ್ತಾರೆ. ಅಲ್ಲಿ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿದೆ. ಕಳೆದ ವರ್ಷ 10 ಸಾವಿರ ಕ್ರೇಟ್ ಟೊಮೆಟೊಗಳನ್ನು ಮಾರಾಟ ಮಾಡಲಾಗಿತ್ತು. ಇದರಿಂದ 55 ಲಕ್ಷ ರೂಪಾಯಿ ಆದಾಯ ಬಂದಿತ್ತು.

ಮಳೆಯಿಂದ ಬೆಳೆ ನಷ್ಟ: ಈ ಬಾರಿ 60 ಬಿಘಾ ಭೂಮಿಯಲ್ಲಿ 1.5 ಕೆಜಿ ಟೊಮೆಟೊ ಬೀಜಗಳನ್ನು ಬಿತ್ತಲಾಗಿದೆ. ಇಲ್ಲಿಯವರೆಗೆ 8,300 ಕ್ರೇಟ್ ಟೊಮೆಟೊ ಮಾರಾಟವಾಗಿದ್ದು, 1.10 ಕೋಟಿ ರೂಪಾಯಿ ಆದಾಯ ಬಂದಿದೆ. ಇನ್ನೂ 500 ಕ್ರೇಟ್ ಮಾರುಕಟ್ಟೆಗೆ ಹೋಗಲು ಸಿದ್ಧವಾಗಿದೆ. ಬೆಳೆಗೆ ರೋಗ ಬಾಧಿಸದೇ ಇದ್ದಿದ್ದರೆ ಮತ್ತು ಹವಾಮಾನದಿಂದ ಹಾನಿಯಾಗದೇ ಇದ್ದಿದ್ದರೆ ಇನ್ನೂ ಹೆಚ್ಚು ಸಮೃದ್ಧ ಬೆಳೆ ಬರುತ್ತಿತ್ತು ಎನ್ನುತ್ತಾರೆ ಜೈರಾಮ್.

ಹಿಮಾಚಲದಲ್ಲಿ ಭಾರೀ ಮಳೆಗೆ ರೈತರ ಬೆಳೆಗಳು ನಾಶವಾಗಿವೆ. ವಿವಿಧೆಡೆ ಗುಡ್ಡ ಕುಸಿತ ಹಾಗೂ ಮಳೆಯಿಂದಾಗಿ ಮಾರುಕಟ್ಟೆಗೆ ಬರುತ್ತಿದ್ದ ಬೆಳೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ನಷ್ಟ ಅನುಭವಿಸಿದ್ದಾರೆ. ಇದೀಗ ಟೊಮೆಟೊ ಮಾರಾಟದಿಂದ ಆದಾಯದಿಂದ ರೈತ ಜೈರಾಮ್, ಹೊಸ ಟ್ರ್ಯಾಕ್ಟರ್ ಖರೀದಿಸಲು ಯೋಜಿಸಿದ್ದಾರೆ. ಇದಲ್ಲದೇ ಜಮೀನಿನಲ್ಲಿ ಬಳಸುವ ಪರಿಕರಗಳನ್ನೂ ಬದಲಾಯಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕೇವಲ ಅರ್ಧ ಎಕರೆ ಜಮೀನು.. ಬರೋಬ್ಬರಿ ₹ 11 ಲಕ್ಷ ಆದಾಯ.. ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಕಿಚನ್​ ಕ್ವೀನ್​!

Last Updated : Jul 18, 2023, 9:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.