ನವದೆಹಲಿ: ದೇಶದಲ್ಲಿ ಮತ್ತ ಕೋವಿಡ್ ಅಬ್ಬರ ಜೋರಾಗುತ್ತಿದೆ. ಸಾವಿರ ಸಂಖ್ಯೆಯಲ್ಲಿದ್ದ ಪ್ರಕರಣಗಳ ಸಂಖ್ಯೆ ಈಗ ಲಕ್ಷದ ಅಂಚಿಗೆ ಬಂದು ನಿಂತಿದೆ. ಮೃತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 90,928 ಸೋಂಕಿತರು ಪತ್ತೆಯಾಗಿದ್ದು, ಬರೋಬ್ಬರಿ 325 ಮಂದಿ ಬಲಿಯಾಗಿದ್ದಾರೆ.
ನಿನ್ನೆ 58 ಸಾವಿರದಷ್ಟು ಇದ್ದ ಪ್ರಕರಣಗಳ ಸಂಖ್ಯೆ 24 ಗಂಟೆಯಲ್ಲಿ ಶೇ 50 ರಷ್ಟು ಹೆಚ್ಚಳವಾಗುವ ಮೂಲಕ 90 ಸಾವಿರಕ್ಕೆ ಬಂದು ತಲುಪಿದೆ. 4,82,876 ಮಂದಿ ಇದುವರೆಗೂ ಸಾವನ್ನಪ್ಪಿದ್ದಾರೆ. 3,43,41,009 ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಿತ್ಯ ಶೇ 6.43 ರಷ್ಟು ಮಂದಿ ಸೋಂಕಿತರಾಗುತ್ತಿದ್ದಾರೆ. 148.67 ಕೋಟಿ ಡೋಸ್ ವ್ಯಾಕ್ಸಿನೇಷನ್ ಮಾಡಲಾಗಿದೆ.
ಒಮಿಕ್ರಾನ ಸಂಖ್ಯೆಯಲ್ಲೂ ಹೆಚ್ಚಳ: ಇನ್ನು ದೇಶದಲ್ಲಿ ಒಮಿಕ್ರಾನ್ ಪೀಡಿತರ ಸಂಖ್ಯೆ 2,630ಕ್ಕೆ ಏರಿಕೆ ಆಗಿದೆ. ಮಹಾರಾಷ್ಟ್ರದಲ್ಲಿ 797 ಮಂದಿಗೆ ಈ ಹೊಸ ರೂಪಾಂತರಿ ವಕ್ಕರಿಸಿಕೊಂಡಿದೆ. ದೆಹಲಿಯಲ್ಲಿ 465, ರಾಜಸ್ಥಾನದಲ್ಲಿ 236 ಹಾಗೂ ಕೇರಳದಲ್ಲಿ 234 ಮಂದಿ ಒಮಿಕ್ರಾನ್ಗೆ ತುತ್ತಾಗಿದ್ದಾರೆ.
ಕೇಂದ್ರ ಮಂತ್ರಿಗಳಿಗೆ ಕೋವಿಡ್ ಪಾಸಿಟಿವ್: ಕೇಂದ್ರದ ರಾಜ್ಯ ಖಾತೆ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ಗೆ ಪಾಸಿಟಿವ್ ಬಂದಿದ್ದು, ಅವರು ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಅವರಷ್ಟೇ ಅಲ್ಲ ಇನ್ನು ಹಲವು ರಾಜಕಾರಿಣಿಗಳಿಗೂ ಕೋವಿಡ್ ಸೋಂಕು ತಗುಲಿದೆ
ಇದನ್ನೂ ಓದಿ:UKಯಲ್ಲಿ ಕೋವಿಡ್ ರುದ್ರತಾಂಡವ: ಒಂದೇ ದಿನ 1,94,747 ಕೋವಿಡ್ ಪಾಸಿಟಿವ್